ಕರಾವಳಿ ಅಪರಾಧ ಸುದ್ದಿಗಳು

Team Udayavani, Mar 10, 2018, 6:00 AM IST

Crime-news.jpg

ವಂಡ್ಸೆ: ಅಸಭ್ಯ ವರ್ತನೆ  ಆರೋಪಿ  ಸೆರೆ
ಕುಂದಾಪುರ:
ವಂಡ್ಸೆ ಕೆಳಪೇಟೆಯಲ್ಲಿ ಚಪ್ಪಲಿ ಖರೀದಿಗೆ ಬಂದ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಆರೋಪಿ, ಅಂಗಡಿ ಮಾಲಕ ಸದ್ದಾಂನನ್ನು ಶುಕ್ರವಾರ ಕೊಲ್ಲೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.  ಆತನನ್ನು ಕುಂದಾಪುರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ  ಹಾಜರುಪಡಿಸಲಾಗಿದ್ದು, ಜಾಮೀನು  ಮಂಜೂರಾಗಿದೆ. 

ಬಾಲಕಿ ಮೇಲೆ ಅತ್ಯಾಚಾರ: ಜೋತಿಷಿ ಸೆರೆ
ಪುತ್ತೂರು:
ಬಾಲಕಿ ಮೇಲಿನ ಅತ್ಯಾಚಾರ ಆರೋಪಿ, ಜೋತಿಷಿ ಬಾಲಚಂದ್ರ ಆಚಾರ್ಯ (34)ನನ್ನು ಗುರುವಾರ ಪುತ್ತೂರು ಪೊಲೀಸರು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬನ್ನೂರಿನ ನೆಕ್ಕಿಲದಲ್ಲಿ ಪ್ರಕರಣ ನಡೆದಿದ್ದು, ಜೋತಿಷ್ಯ ಕೇಳಲು ಬಂದಿದ್ದಾಗ ಅತ್ಯಾಚಾರವೆಸದಿದ್ದ. ದೋಷ ಪರಿಹಾರ ಮಾಡಲೆಂದು ದಂಪತಿಯನ್ನು ಹೊರ ಕಳುಹಿಸಿ ಕೃತ್ಯ ವೆಸಗಿದ್ದ ಎಂದು ಆರೋಪಿಸಲಾಗಿದೆ.

ಮದುವೆ ನಿಶ್ಚಯವಾಗಿದ್ದ ಯುವತಿ  ಸಾವು
ಪುತ್ತೂರು
: ಮೊಟ್ಟೆತ್ತಡ್ಕ ನಿವಾಸಿ ಸಂಧ್ಯಾ (24)  ಮಾ. 8ರಂದು ಮೃತಪಟ್ಟರು. ಇವರಿಗೆ ಮುಂದಿನ ತಿಂಗಳು ಮದುವೆ ನಡೆಯಲಿತ್ತು.

ಎರಡು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಸಂಧ್ಯಾ  ಗುರುವಾರ ರಾತ್ರಿ ತೀವ್ರ ಅಸ್ವಸ್ಥಗೊಂಡ  ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟಿದ್ದಾರೆ. ಮೃತರು ಅಪ್ಪ, ಅಮ್ಮ, ಅಕ್ಕ, ತಮ್ಮನನ್ನು ಅಗಲಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಸುರತ್ಕಲ್‌:
2013ರಲ್ಲಿ  ಪೋಸ್ಕೋ ಕಾಯಿದೆಯಡಿ ಬಂ ಧಿತನಾಗಿ ವಿಚಾರಣೆ ಎದುರಿಸುತ್ತಿದ್ದ  ವೇಳೆ ತಲೆಮರೆಸಿಕೊಂಡಿದ್ದ ಕಾಸರ ಗೋಡಿನ ಬೇಕಲ ಕೋಟೆ ಬಳಿಯ ಇಮಾಮುದ್ದೀನ್‌(49)ನನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.ವಾರಂಟ್‌ ಜಾರಿಯಾಗಿದ್ದ  ಈತನ ಬಗ್ಗೆ ಮಾಹಿತಿ ಪಡೆದ ಸುರತ್ಕಲ್‌ ಠಾಣೆಯ ಎಎಸ್‌ಐ ಉಲ್ಲಾಸ್‌, ಎಚ್‌. ಸಿ. ವಿನಯ್‌ ಕುಮಾರ್‌, ಪೇದೆ ಹನುಮಂತ ಅವರು ಕಾರ್ಯಾಚರಣೆ ನಡೆಸಿದ್ದರು.

ಶಂಕಿತ ಮಿದುಳು ಜ್ವರ: ಸಾವು
ಅಜೆಕಾರು
: ಶಿರ್ಲಾಲು ಮಿತ್ತಬೆಟ್ಟು ಗರಡಿಮನೆ ನಿವಾಸಿ ದಯಾನಂದ ಪೂಜಾರಿ (55) ಅವರು ಶಂಕಿತ ಮಿದುಳು ಜ್ವರದಿಂದ ಮೃತಪಟ್ಟಿದ್ದಾರೆ.

ಶಿರ್ಲಾಲು ನಿಟ್ಟೆದ ಕಟ್ಟೆ ಗರಡಿಯ ಅರ್ಚಕರಾಗಿದ್ದ ಇವರು ಕೃಷಿಕರಾಗಿದ್ದರು.ಜ್ವರದಿಂದ ಬಳಲುತ್ತಿದ್ದ  ಇವರಿಗೆ ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅದಕ್ಕೆ  ಸ್ಪಂದಿಸದಿದ್ದಾಗ ಮಂಗ ಳೂರಿನ ವೆನಾÉಕ್‌ ಆಸ್ಪತ್ರೆಗೆ ಸೇರಿಸಲಾಗಿತ್ತು.  ಅಲ್ಲಿ ಅವರು ಮೃತಪಟ್ಟಿದ್ದಾರೆ. 

ವೈದ್ಯಕೀಯ ದಾಖಲೆ ಪ್ರಕಾರ ಇವರು ಶಂಕಿತ ಮಿದುಳು ಜ್ವರದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಜನವರಿಯಲ್ಲಿ ಬೆಳ್ಮಣ್‌ ಸಮೀಪದ ಸೂಡದಲ್ಲಿ  ಒಂದು ಮಿದುಳು  ಜ್ವರ ಪ್ರಕರಣ ದಾಖಲಾಗಿತ್ತಾದರೂ ರೋಗಿ ಗುಣಮುಖರಾಗಿದ್ದರು. 

ಕಾರ್ಕಳ: ಆತ್ಮಹತ್ಯೆ
ಕಾರ್ಕಳ:
ಕಸಬ ಗ್ರಾಮದ ಬಂಗ್ಲೆಗುಡ್ಡೆಯ ತ್ರಿವಿಕ್ರಮ ನಾಯಕ್‌ (63) ಮಾ. 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

​​​​​​ಗುಂಡು ಹಾರಿಸಿಕೊಂಡು ಮಹಿಳೆ ಆತ್ಮಹತ್ಯೆ
ಸೋಮವಾರಪೇಟೆ
: ವಿಚ್ಛೇದನ ಪಡೆದಿದ್ದ ಮಹಿಳೆಯೋ ರ್ವರು ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಕ್ಕಾರ ಗ್ರಾಮದಲ್ಲಿ ನಡೆದಿದೆ.

ಗೌಡಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚಿಕ್ಕಾರ ಗ್ರಾಮದ ತಮ್ಮಯ್ಯ ಅವರ ಪುತ್ರಿ ಸೌಮ್ಯಾ(32)   ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ   ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ ವಿಚ್ಛೇದನ ಪಡೆದು ಮೈಸೂರಿನಲ್ಲಿ ನೆಲೆಸಿದ್ದ ಸೌಮ್ಯಾ, 3 ದಿನಗಳ ಹಿಂದಷ್ಟೇ ಚಿಕ್ಕಾರ ಗ್ರಾಮದ ಮನೆಗೆ ಆಗಮಿಸಿದ್ದರು. ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೋವಿಯಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ.

ಸ್ವಲ್ಪ ಹೊತ್ತಿನಲ್ಲೇ ಸಹೋದರ ಶರತ್‌ ಮನೆಗೆ ಬಂದಿದ್ದು, ಗಾಯಾಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. 

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.