‘ಕ್ಲೀನ್ ಹ್ಯಾಟ್ಹಿಲ್’ ಅಭಿಯಾನಕ್ಕೆ ಚಾಲನೆ
Team Udayavani, Nov 20, 2017, 12:33 PM IST
ಮಹಾನಗರ: ಹ್ಯಾಟ್ಹಿಲ್ ಪರಿಸರವನ್ನು ಮತ್ತಷ್ಟು ಸುಂದರ ಗೊಳಿಸುವ ನಿಟ್ಟಿನಲ್ಲಿ ಉಪಮೇಯರ್ ರಜನೀಶ್ ಅವರ ಮಾರ್ಗದರ್ಶನದಂತೆ ಸ್ಥಳೀಯ ನಿವಾಸಿಗಳು ‘ಕ್ಲೀನ್ ಹ್ಯಾಟ್ ಹಿಲ್ ಅಭಿಯಾನ’ಕ್ಕೆ ರವಿವಾರ ಚಾಲನೆ ನೀಡಲಾಯಿತು.
ಪರಿಸರ ರಕ್ಷಣೆಗೆ ಬದ್ಧರಾಗಿ
ರಜನೀಶ್ ಮಾತನಾಡಿ, ನಾವು ನಿತ್ಯ ಓಡಾಟ ನಡೆಸುವ ಪರಿಸರವನ್ನು ಸ್ವತ್ಛವಾಗಿಡುವುದರಿಂದ ಆರೋಗ್ಯ ಉತ್ತಮ ವಾಗಿರುವುದು ಮಾತ್ರವಲ್ಲದೆ, ಮಾನಸಿಕವಾಗಿಯೂ ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದಿರಬೇಕು. ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ನೀಡಿದ ಪರಿಸರವನ್ನು ಹಾಳುಮಾಡದೆ ರಕ್ಷಿಸುವುದೇ ನಮ್ಮ ಧರ್ಮ ಎಂದರು. ರಾಜಕೀಯ ಯಾವತ್ತೂ ಶಾಶ್ವತವಲ್ಲ. ಆದರೆ ನಾವು ಉಪಯೋಗಿಸುವ ಪರಿಸರ ನಮ್ಮ ಜೀವಿತಾವಧಿಯವರೆಗೆ ಇರುತ್ತದೆ. ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಮೌಲ್ಯಯುತವಾದುದು. ಅದರ ರಕ್ಷಣೆಗೆ ಬದ್ಧರಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಎಪಿಡಿ ಫೌಂಡೇಶನ್ನ ಅಬ್ದುಲ್ಲ, ಎಪಿಡಿ ಪ್ರಮುಖರಾದ ಗ್ರೆಟ್ ರೇಗೋ, ಡಾ| ದೇವದಾಸ್, ರಿಯಾಜ್, ಪಿಡಿ ಶೆಣೈ, ಮೋಹನ್, ಪ್ರದೀಪ್, ಪ್ರಕಾಶ್ ಕಲ್ಬಾವಿ ಉಪಸ್ಥಿತರಿದ್ದರು.