ಸಾಹಿತ್ಯ ಜಾತ್ರೆಯ ಸೊಬಗು ಹೆಚ್ಚಿಸಿದ ಜಾನುವಾರು ಸಂತೆ 

Team Udayavani, Dec 2, 2017, 12:09 PM IST

2-Dec-8.jpg

ವಿದ್ಯಾಗಿರಿ (ಆಳ್ವಾಸ್‌): ಒಂದೆಡೆ ಕನ್ನಡ ನಾಡು- ನುಡಿಯ ಕುರಿತಾದ ಗಂಭೀರ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ, ‘ಅಂಬಾ’ ಎಂದು ದನ ತನ್ನ ಕರುವನ್ನು ಕರೆಯುತ್ತಿರುವ ಸೊಬಗಿನ ನೋಟ…

ಆಳ್ವಾಸ್‌ ನುಡಿಸಿರಿಯಲ್ಲಿ ಸಾಹಿತ್ಯ ವಿಚಾರಗಳಿಗೆ ಹೊರತಾಗಿ ಕೃಷಿ, ಮೂಕ ಪ್ರಾಣಿಗಳ ಪ್ರದರ್ಶನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅದರಂತೆ, ದೇಸಿ ತಳಿಗಳಾದ ಮಲಾ°ಡ್‌ ಗಿಡ್ಡ, ಗಿರ್‌, ಕಾಂಕ್ರೀಜ್‌, ಧಾರ್‌ ಪಾರ್ಕರ್‌, ಹಳ್ಳಿಕಾರ್‌, ಪುಂಗನೂರ್‌ ಸಹಿತ ಸುಮಾರು 20 ತಳಿಗಳ ಜಾನುವಾರುಗಳು ಪ್ರದರ್ಶನದಲ್ಲಿವೆ. ಉಳಿದಂತೆ ನೆದರ್ಲಾಂಡ್‌ ಮೂಲದ ಎಚ್‌ಎಫ್‌ ತಳಿಯ ನಾಲ್ಕು ಹಸು, ಮೂರು ಗಡಸು ಮತ್ತು ಒಂದು ಕರು, ಜೆರ್ಸಿ ತಳಿಯ ಆರು ಹಸು, ಒಂದು ಗಡಸು ಹಾಗೂ ಒಂದು ಕರು ಪ್ರದರ್ಶನದಲ್ಲಿವೆ. 

ಜಾನುವಾರು ಪ್ರದರ್ಶನಗಳ ಉಸ್ತುವಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ನೀಡಲಾಗಿದೆ. 
ಪ್ರದರ್ಶನದಲ್ಲಿರುವ ಜಾನುವಾರುಗಳ ಪೈಕಿ ಉತ್ತಮ ತಳಿಯ ಜಾನುವಾರಿಗೆ ಪ್ರಥಮ, ದ್ವಿತೀಯ ಪ್ರಶಸ್ತಿಯನ್ನು ಕ್ರಮವಾಗಿ 5,000 ಹಾಗೂ 3,000 ರೂ. ನೀಡಿ ಗೌರವಿಸಲಾಯಿತು.  ಕೃಷಿಕ ಭಾಸ್ಕರ ಶೆಟ್ಟಿ ಕರಿಂಜೆ ಅವರ ಎಚ್‌ಎಫ್‌ ಹಸು ಸಮಗ್ರ ಪ್ರಶಸ್ತಿಯನ್ನು 10,000 ರೂಪಾಯಿ ಮೊತ್ತದೊಂದಿಗೆ ಪಡೆದುಕೊಂಡಿತು. ಈ ನಡುವೆ, ಇಸ್ಕಾನ್‌ನಿಂದ ದೇಶ ಪರ್ಯಟನೆ ನಡೆಸುತ್ತಿರುವ ಸುಮಾರು 900 ಕೆಜಿ ತೂಕದ ಅಪೂರ್ವ ಎತ್ತು ಕೂಡ ನೋಡುಗರ ಗಮನ ಸೆಳೆಯಿತು.

ಗಾಣದ ಎತ್ತಿನ ಮೂಲಕ ಕಬ್ಬಿನಹಾಲು, ಬೆಲ್ಲ!
ಎತ್ತುಗಳನ್ನು ಗಾಣಕ್ಕೆ ಸುತ್ತು ಬರಿಸಿ, ಅದರ ಮೂಲಕ ಕಬ್ಬಿನ ಹಾಲು ಒದಗಿಸುವ ತೀರ್ಥಹಳ್ಳಿಯ ಮಂಜಪ್ಪ ವರ್ತೆಕೇರಿ ಅವರ ತಂಡ ಕೃಷಿ ಸಿರಿಯಲ್ಲಿ ಪಾಲ್ಗೊಂಡಿದೆ. ಬೆಲ್ಲವನ್ನೂ ಸ್ಥಳದಲ್ಲೇ ತಯಾರಿಸಿ ತೋರಿಸಲಾಗುತ್ತದೆ. 80 ಲೀ. ಕಬ್ಬಿನ ಹಾಲು ಬಳಸಿ ಸುಮಾರು 35 ಕೆ.ಜಿ. ಬೆಲ್ಲ ಮಾಡಬಹುದು. ಒಂದು ಕೆ.ಜಿ. ಬೆಲ್ಲಕ್ಕೆ 100 ರೂ. ದರ. ನಾಲ್ಕು ವರ್ಷಗಳಿಂದ ಈ ತಂಡ ನುಡಿಸಿರಿಯಲ್ಲಿ ಭಾಗವಹಿಸುತ್ತಿದೆ.

ಅಪರೂಪದ ಸಮುದ್ರ ಚಿಪ್ಪುಗಳು!
ಕರಾವಳಿ ಬಗೆ-ಬಗೆಯ ಮೀನು ಸಿಗುವ ಪ್ರದೇಶ. ಇಲ್ಲಿನ ಜನರೂ ನೋಡಿರದ ಅಪರೂಪದ ಸಮುದ್ರ ಚಿಪ್ಪುಗಳನ್ನು ಇಲ್ಲಿ ಕಾಣಬಹುದು. ಕೇರಳದ ಅಲೆಪಿಯ ಫಿರೋಜ್‌ ಅಹಮ್ಮದ್‌ ಅವರ ನೇತೃತ್ವದಲ್ಲಿ ಸಮುದ್ರದ ಅಪರೂಪದ ಚಿಪ್ಪುಗಳ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆ. ದೇಶದ 170 ಕಡೆಗಳಲ್ಲಿ ಈ ಪ್ರದರ್ಶನ ನಡೆದಿದ್ದು, ಮಂಗಳೂರಿನಲ್ಲಿ ಇದು ಅವರ 2ನೇ ಪ್ರದರ್ಶನವಾಗಿದೆ. ಇಂಡೋ ಪೆಸಿಫಿಕ್‌ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಚಿಪ್ಪುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. 500ಕ್ಕೂ ಅಧಿಕ ತಳಿಯ ಚಿಪ್ಪುಗಳು ಇಲ್ಲಿವೆ. ಇರುವೆಯಷ್ಟು ಗಾತ್ರದ ಚಿಪ್ಪಿನಿಂದ ಹಿಡಿದು ‘ಆಸ್ಟ್ರೇಲಿಯನ್‌ ಟ್ರಯಪ್‌’ ಎಂಬ ಬೃಹತ್‌ ಗಾತ್ರದ ಚಿಪ್ಪು ಇಲ್ಲಿವೆ. ಮತ್ಸ್ಯ ಸಂಕುಲದ ವಿಶೇಷ ಪ್ರದರ್ಶನ ಈ ಬಾರಿಯ ಮತ್ತೂಂದು ಆಕರ್ಷಣೆ. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.