ಕಟೀಲು ಮೇಳಕ್ಕೆ 11 ಜನ ಹೊಸ ಕಲಾವಿದರು

Team Udayavani, Dec 4, 2018, 10:10 AM IST

kateel.jpg

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಈ ಬಾರಿಯ ತಿರುಗಾಟ ರವಿವಾರ ಸೇವೆಯಾಟದೊಂದಿಗೆ ಆರಂಭವಾಗಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಆರು ಮೇಳಗಳಲ್ಲಿ ಆಂತರಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರನ್ನು ಈ ಬಾರಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಪ್ರಧಾನ ಭಾಗವತರಾಗಿ ರುವ 1ನೇ ಮೇಳಕ್ಕೆ ವರ್ಗಾಯಿಸಲಾಗಿದ್ದು, ಕಳೆದ ಬಾರಿ ಮೇಳದಿಂದ ಹೊರಗುಳಿದಿದ್ದ ಬಣ್ಣದ ವೇಷಧಾರಿ ನಗ್ರಿ ಮಹಾಬಲ ರೈ ಅವರನ್ನು ಮರಳಿ ಸೇರಿಸಿಕೊಳ್ಳಲಾಗಿದೆ. 11 ಜನ ಹೊಸ ಕಲಾವಿದರು ಸೇರ್ಪಡೆಯಾಗಿದ್ದಾರೆ. ದೇವಿ ಪಾತ್ರ ನಿರ್ವಹಿಸುತ್ತಿದ್ದ ಸ್ತ್ರೀ ಪಾತ್ರಧಾರಿ ರಮೇಶ್‌ ಭಟ್‌ ಬಾಯಾರು ಅವರು ಈ ಬಾರಿ ರಕ್ತಬೀಜ ಮುಂತಾದ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಕಳೆದ ಬಾರಿ ನಾಲ್ಕನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಪಟ್ಲ ಸತೀಶ್‌ ಶೆಟ್ಟಿ ಈ ವರ್ಷ ಒಂದನೇ ಮೇಳದಲ್ಲಿ
ಇರುತ್ತಾರೆ. ಅವರ ಜತೆಗೆ ಮಂಜುನಾಥ ಭಟ್‌ ಬೆಳ್ಳಾರೆ, ವಾಟೆಪಡು ವಿಷ್ಣು ಶರ್ಮ, ದಿನಕರ ಗೋಖಲೆ, ಲೋಕೇಶ್‌ ಕಟೀಲು, ಗಿರೀಶ್‌ ಕಾವೂರು, ಏಳಾನ ಸುಖೇಶ ಇರಲಿದ್ದಾರೆ.

ನಗ್ರಿ ಮಹಾಬಲ ರೈ, ಹರಿರಾಜ ಶೆಟ್ಟಿಗಾರ್‌, ರಾಹುಲ್‌ ಕುಡ್ಲ, ಪ್ರಫ‌ುಲ್ಲಚಂದ್ರ ನೆಲ್ಯಾಡಿ, ಹರಿಪ್ರಸಾದ್‌ ಕಾರಂತ, ಮುರಾರಿ ಕಡಂಬಳಿತ್ತಾಯ, ಸದಾನಂದ ಶೆಟ್ಟಿಗಾರ್‌ ಎರಡನೇ ಮೇಳದಲ್ಲಿರುತ್ತಾರೆ. ಮೂರನೇ ಮೇಳದಲ್ಲಿ ಬೋಂದೆಲ್‌ ಸತೀಶ ಶೆಟ್ಟಿ, ದಿವಾಕರ ಆಚಾರ್ಯ ಪೊಳಲಿ, ಸುಕುಮಾರ ಬಲ್ಲಾಳ, ಗಣೇಶ್‌ ಕಾರಂತ, ಉಮಾಮಹೇಶ್ವರ ಭಟ್‌, ಉಮೇಶ್‌ ಹೆಬ್ಟಾರ್‌ ಇರಲಿದ್ದಾರೆ.

ನಾಲ್ಕನೇ ಮೇಳವು ದೇವಿ ಪ್ರಸಾದ್‌ ಆಳ್ವ, ರಾಮಚಂದ್ರ ಸುಳ್ಯ, ಮೋಹನ್‌ ಶೆಟ್ಟಿಗಾರ್‌, ಜಗದೀಶ ಶೆಟ್ಟಿಗಾರ್‌, ಜನಾರ್ದನ ಕೊಕ್ಕಡ, ಪುಷ್ಪರಾಜ್‌ ಜೋಗಿ, ಸುರೇಶ್‌ ಕುಪೆಪದವು, ನಾರಾಯಣ ಕುಲಾಲ, ದಿವಾಕರ ಬಂಗಾಡಿ ಅವರನ್ನು ಒಳಗೊಂಡಿದೆ. ಆರನೇ ಮೇಳಕ್ಕೆ ಮೋಹನ್‌ ಶಿಶಿಲ, ದಯಾನಂದ ಶೆಟ್ಟಿಗಾರ್‌ ಮಿಜಾರು, ವಾದಿರಾಜ ಕಲ್ಲೂರಾಯ, ಆನಂದ ಕೊಕ್ಕಡ ವರ್ಗಾವಣೆಗೊಂಡು ಬಂದವರಾಗಿದ್ದಾರೆ. ಸೂರಜ್‌ ಆಚಾರ್ಯ, ದಿನೇಶ್‌ ಭಟ್‌ ಯಲ್ಲಾಪುರ, ಸಚಿನ್‌ ಉದ್ಯಾವರ, ಚಂದ್ರಶೇಖರ ಶೆಟ್ಟಿ ಬೆಟ್ಟಂಪಾಡಿ, ನಾಗೇಶ್‌ ಆರ್‌.ಕೆ. ಪದವು, ಪುಷ್ಪರಾಜ ಪೊಳಲಿ ಮತ್ತಿತರ 11 ಜನ ಹೊಸ ಕಲಾವಿದರು ಸೇರ್ಪಡೆಯಾಗಿದ್ದಾರೆ.

ಸ್ತ್ರೀ ಪಾತ್ರಧಾರಿಗೆ ಇದಿರು ವೇಷ
ಕಟೀಲು ಮೇಳಗಳಲ್ಲಿ ಈಚೆಗಿನ ವರ್ಷಗಳಲ್ಲಿ ಅತಿ ಹೆಚ್ಚು ಬಾರಿ ದೇವಿ ಪಾತ್ರವನ್ನು ನಿರ್ವಹಿಸಿದ್ದ ಎರಡನೇ ಮೇಳದ ರಮೇಶ್‌ ಭಟ್‌ ಬಾಯಾರು ಈ ತಿರುಗಾಟದಲ್ಲಿ ರಕ್ತಬೀಜನಾಗಿ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ಮೇಳದಲ್ಲಿ ದೇವಿ ಪಾತ್ರವನ್ನು ಇನ್ನು ಮುಂದೆ ಅರುಣ್‌ ಕೋಟ್ಯಾನ್‌ ಮಾಡಲಿದ್ದಾರೆ. ಕಟೀಲು ಮೇಳದ ತಿರುಗಾಟದಲ್ಲಿ ದೇವೀ ಮಾಹಾತ್ಮೆ ಅತಿ ಹೆಚ್ಚು ಬಾರಿ ಸೇವೆಯಾಟವಾಗಿ ಪ್ರದರ್ಶನಗೊಳ್ಳುತ್ತದೆ. ಈ ಪ್ರಸಂಗದಲ್ಲಿ ಶ್ರೀದೇವಿ ಮತ್ತು ರಕ್ತಬೀಜ ಪಾತ್ರಗಳಲ್ಲಿ ಆಯಾ ಮೇಳದ ಪ್ರಧಾನ ಸ್ತ್ರೀಪಾತ್ರಧಾರಿ ಮತ್ತು ಎರಡನೇ ವೇಷಧಾರಿ ಕಾಣಿಸಿಕೊಳ್ಳುವುದು ವಾಡಿಕೆ. 

ಶ್ರೀದೇವಿಯಾಗಿ ಒಂದನೇ ಮೇಳದಲ್ಲಿ ಬೋಳಂತೂರು ಜಯರಾಮ್‌ ಶೆಟ್ಟಿ, ಎರಡನೇ ಮೇಳದಲ್ಲಿ ಅರುಣ್‌ ಕೋಟ್ಯಾನ್‌, ಮೂರರಲ್ಲಿ ಮನೋಹರ ರೈ ಬೆಳ್ಳಾರೆ, ನಾಲ್ಕರಲ್ಲಿ ಅಕ್ಷಯ ಮಾರ್ನಾಡು, ಐದರಲ್ಲಿ ಮಹೇಶ್‌ ಸಾಣೂರು ಹಾಗೂ ಆರನೇ ಮೇಳದಲ್ಲಿ ಪ್ರಶಾಂತ್‌ ನೆಲ್ಯಾಡಿ ಕಾಣಿಸಿಕೊಳ್ಳಲಿದ್ದಾರೆ.

ರಕ್ತಬೀಜರಾಗಿ ಮೇಳ ಒಂದರಲ್ಲಿ ಅರಳ ಗಣೇಶ, ಎರಡನೇ ಮೇಳದಲ್ಲಿ ರಮೇಶ್‌ ಭಟ್‌ ಬಾಯಾರು, ಮೂರರಲ್ಲಿ ಗಣೇಶ ಕನ್ನಡಿಕಟ್ಟೆ, ನಾಲ್ಕರಲ್ಲಿ ಗಣೇಶ ಚಂದ್ರಮಂಡಲ, ಐದರಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್‌ ಹಾಗೂ ಆರನೇ ಮೇಳದಲ್ಲಿ ಸಂತೋಷ್‌ ಮಾನ್ಯ ಪಾತ್ರ ವಹಿಸಲಿದ್ದಾರೆ.

ಮಹಿಷಾಸುರನ ಪಾತ್ರಗಳಲ್ಲಿ ಕ್ರಮವಾಗಿ ಬಾಲಕೃಷ್ಣ ಮಿಜಾರು, ನಗ್ರಿ ಮಹಾಬಲ ರೈ, ಸುರೇಶ್‌ ಕುಪ್ಪೆಪದವು, ಸತೀಶ ನೈನಾಡು, ಶಿವಪ್ರಸಾದ ಭಟ್‌, ಹರಿನಾರಾಯಣ ಭಟ್‌ ಎಡನೀರು ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.