ಪ್ರಕೃತಿ ನಡಿಗೆಯಲ್ಲಿ ಅರಣ್ಯ ರಕ್ಷಣೆ ಪ್ರತಿಜ್ಞೆ


Team Udayavani, Nov 20, 2017, 5:35 PM IST

mysore.jpg

ಹುಣಸೂರು: ಅರಣ್ಯ ಇಲಾಖೆ ಆಯೋಜಿಸುವ ಚಿಣ್ಣರ ವನದರ್ಶನದಲ್ಲಿ ಬಾಳೆಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು
ನಾಗರಹೊಳೆ ವನಸಿರಿಕಂಡ ಸಂತಪ್ತಿಯಿಂದ ಪ್ರಕೃತಿ ನಡಿಗೆ ನಡೆಸಿ, ವನ್ಯಜೀವಿ – ಕಾಡನ್ನು ರಕ್ಷಿಸುವ ಬಗೆಯೂ ಪ್ರಮಾಣ ವಚನ ಸ್ವೀಕರಿಸಿದರು.

ನಾಗರಹೊಳೆ ಉದ್ಯಾನಕ್ಕೆ ಭೇಟಿ ನೀಡಿದ್ದ ಕೊಡಗಿನ ಬಾಳೆಲೆ ವಿಜಯಲಕ್ಷ್ಮೀ ಸಂಯುಕ್ತ ಪದವಿ ಪೂರ್ವ ಕಾಲೇಜಿನ
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಲ್ಲಹಳ್ಳವಲಯದ ವಲಯ ಅರಣ್ಯಾಧಿಕಾರಿ ಶಿವರಾಂ ಮಾಹಿತಿ ನೀಡಿದರು.

ನಾಗರಹೊಳೆ ವಿಶ್ವವಿಖ್ಯಾತಿ ಪಡೆದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನೇಕ ಬಗೆಯ ಸಸ್ಯಹಾರಿ-ಮಾಂಸಹಾರಿ ಪ್ರಾಣಿಗಳು, ಸಸ್ಯ ಪ್ರಭೇದ-ಗಿಡಮೂಲಿಕೆ ಸಸ್ಯ ಸೇರಿದಂತೆ ಅನೇಕ ಪ್ರಭೇದಗಳು ಇಲ್ಲಿವೆ. ಈ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಳ್ಳಿ, ದೇಶದಲ್ಲೇ ಹುಲಿ ಸಂರಕ್ಷಣೆಗೆ ಪ್ರಶಸ್ತವಾದ ಸ್ಥಳವೆಂದರೆ ಅದು ನಾಗರಹೊಳೆ ಹುಲಿ ಸಂರಕ್ಷಣಾ ಕೇಂದ್ರ
ಎಂದು ಹೇಳಿದರು.

ಕಾಡಿನೊಳಗೆ ಏನೇನಿದೆ: ಕಳೆದ ಸಾಲಿನ ಅಂಕಿ ಅಂಶದ ಪ್ರಕಾರ ಸುಮಾರು 92 ಹುಲಿಗಳಿವೆ. ಅಲ್ಲದೆ ತೇಗ, ಶ್ರೀಗಂಧ, ಬೀಟೆ, ಮತ್ತಿ, ಹೊನ್ನೆ, ಬಿದಿರು ಸೇರಿದಂತೆ ಅನೇಕ ಜಾತಿಯ ಮರಗಳಿವೆ. ಆನೆ, ಚಿರತೆ, ಚಿತರೆ ಬೆಕ್ಕು, ಕಪ್ಪುಚಿರತೆ, ಕೂರಂಗಿ, ಕರಡಿ, ಕಡವೆ, ಕಾಡುಕುರಿ, ಚೌಸಿಂಗ, ಚಿಪ್ಪುಹಂದಿ, ಮುಳ್ಳುಹಂದಿ, ನೀರುನಾಯಿ, ಕಾಡುನಾಯಿ, ಮೊಸಳೆ, ಉಡ, ಜಿಂಕೆ, ಸಾರಂಗ, ನವಿಲು, ಕಾಡುಕೋಳಿ, ಲಂಗೂರ್‌ ಸೇರಿದಂತೆ ಅನೇಕ ಪಕ್ಷಿ ಪ್ರಭೇಧಗಳು ಇಲ್ಲಿವೆ. ಇಲ್ಲಿ ಪ್ರಾಣಿ-ಪಕ್ಷಿಗಳ ಆಹಾರ ಪದ್ಧತಿ ಸರಪಳಿ ಮಾದರಿಯಲ್ಲಿದ್ದು, ಒಂದಕ್ಕೊಂದು ಪೂರಕ ಸಹಕಾರದಿಂದ ಅರಣ್ಯ ಹಾಗೂ ವನ್ಯಜೀವಿಗಳ ಸಂಕುಲ ಸಮದ್ಧಿಯಾಗಿದೆ ಎಂದು ಮಾಹಿತಿ ನೀಡಿದರು. 

ಸಂರಕ್ಷಿತ ಅರಣ್ಯ ಪ್ರದೇಶವಾದ ನೈಸರ್ಗಿಕ ಸಂಪತ್ತು ಬೆಲೆ ಕಟ್ಟಲಾಗದ್ದು. ಮರಗಳ್ಳತನ, ಪ್ರಾಣಿಗಳ ಭೇಟೆ ಅಪರಾಧ.
ವಿದ್ಯಾರ್ಥಿಗಳಾದ ನೀವು ನಿಮ್ಮ ಪಕ್ಕದ ಅರಣ್ಯ ಸಿರಿಯ ಮಹತ್ವವನ್ನು ಅರಿಯಬೇಕು, ಕಾಡು-ಪ್ರಾಣಿಗಳ ಸಂರಕ್ಷಣೆಗೆ ಕೊಡುಗೆ ನೀಡಬೇಕೆಂದು ಸೂಚಿಸಿದರು.

ನಂತರ ನಾಗರಹೊಳೆ ವಲಯಕ್ಕೆ ಭೇಟಿಕೊಟ್ಟ ವಿದ್ಯಾರ್ಥಿಗಳು, ಪ್ರಕತ್ತಿ ನಡಿಗೆ ನಡೆಸಿದರು. ಆರ್‌ಎಫ್ಒ ಅರವಿಂದ್‌, ನ್ಯಾಚುರಲಿಸ್ಟ್‌ ಗೋಪಿ, ತರಬೇತಿ ನಿರತ ಆರ್‌ಎಫ್ಒ ರಾಜೇಶ್‌, ಪ್ರಶಾಂತ್‌ ಪರಿಸರ, ಅರಣ್ಯ ಹಾಗೂ ಪ್ರಾಣಿ – ಪಕ್ಷಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನಂತರ ನಾಗರಹೊಳೆ ವೈವಿಧ್ಯತೆ ಬಗ್ಗೆ ಸಾಕ್ಷಾಚಿತ್ರ ವೀಕ್ಷಿಸಿದರಲ್ಲದೆ, ಯಾವುದೇ ಕಾರಣಕ್ಕೂ ವನ್ಯಜೀವಿ ಮಾಂಸ ಭಕ್ಷಣೆ ಮಾಡುವುದಿಲ್ಲ. ಅರಣ್ಯ ಸಂಪತ್ತನ್ನು ಹಾಳು ಮಾಡುವುದಿಲ್ಲ, ನಾಳಿನ ಉಳಿವಿಗಾಗಿ ಅರಣ್ಯ ಸಂರಕ್ಷಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋಧಿಸಲಾಯಿತು.

ವಿದ್ಯಾರ್ಥಿಗಳಿಗೆ ವನದರ್ಶನ ಸಂಬಂಧಿತವಾಗಿ ಸ್ಥಳದಲ್ಲೇ ಪ್ರಬಂಧ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿದರು.
ಶಾಲಾ ಶಿಕ್ಷಕರಾದ ಡಿ.ಎನ್‌.ಸುಬ್ಬಯ್ಯ, ರಾಘವೇಂದ್ರ, ಚಂದ್ರಾವತಿ, ಅರಣ್ಯ ರಕ್ಷಕರಾದ ಸ್ವಾಮಿ, ಪ್ರವೀಣ್‌
ಮತ್ತಿತರರಿದ್ದರು. 

ಹೆಚ್ಚು ಹುಲಿಗಳಿದ್ದರೆ ಕಾಡಿನ ರಕ್ಷಣೆಯೂ ಉತ್ತಮವಾಗಿದೆ ಎಂದರ್ಥ, ಇದಕ್ಕಾಗಿ ಸಿಬ್ಬಂದಿಗಳು ಹಗಲಿರುಳು ದುಡಿಯು
ತ್ತಿದ್ದಾರೆ. ಅಲ್ಲದೆ, ಕಾಡಂಚಿನ ಜನರೂ ಇಲಾಖೆಯೊಂದಿಗೆ ಕಾಡಿನ ರಕ್ಷಣೆಯಲ್ಲಿ ಸದಾ ಸನ್ನದ್ಧರಾಗಿದ್ದಾರೆ.
 ಶಿವರಾಂ, ಆರ್‌ಎಫ್ಒ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.