CONNECT WITH US  

ಕಸಬಾ ಸಹಕಾರ ಸಂಘಕ್ಕೆ ರಮೇಶ್‌ ಅಧ್ಯಕ್ಷ

ಪಿರಿಯಾಪಟ್ಟಣ: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್‌ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತಿ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹಸೀನಾ ಅಧ್ಯಕ್ಷರಾಗಿ ರಮೇಶ್‌ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿರವರು ಆಯ್ಕೆಯಾಗಿದ್ದಾರೆಂದು ಘೋಸಿದರು.

ನೂತನ ಅಧ್ಯಕ್ಷ ರಮೇಶ್‌ ಮಾತನಾಡಿ, ಸಹಕಾರ ಸಂಘ ವಾರ್ಷಿಕ 26 ಲಕ್ಷ ರೂ.ಗಳ ಲಾಭದಲ್ಲಿದ್ದು ಮುಂದಿನ ದಿನಗಳಲ್ಲಿ ಸಂಘಕ್ಕೆ ಇನ್ನೂ ಹೆಚ್ಚಿನ ಲಾಭ ತಂದುಕೊಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಸಹಕಾರ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲರ ಸಹಕಾರ ಪಡೆದು ಶ್ರಮಿಸುತ್ತೇನೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಿ.ಆರ್‌.ಸತೀಶ್‌ಕುಮಾರ್‌, ಪ್ರಭುಕುಮಾರ್‌, ಎಚ್‌.ಜೆ.ಶಿವಣ್ಣ, ನಟರಾಜು, ಪಿ.ಕೆ.ಕುಮಾರ್‌, ಸಣ್ಣಪ್ಪ, ವೆಂಕಟೇಶ್‌, ಸೀರಾಜ್‌ಅಹಮದ್‌, ಗೀತಾ, ಕರಿನಾಯಕ, ಮುಖಂಡರಾದ ಸಿ.ಎನ್‌.ರ, ಚಂದ್ರು, ರಾಮಚಂದ್ರ, ರಘು, ಶಿವರಾಜ್‌, ಬಿ.ಪಿ.ಸ್ವಾು, ಇಒ ಪ್ರàಣ್‌ಕುಮಾರ್‌, ಸಿಬ್ಬಂದಿ ನಾಗರಾಜ್‌, ಜ್ಯೋತಿ ಮತ್ತಿತರರು ಹಾಜರಿದ್ದರು.


Trending videos

Back to Top