ಖಿನ್ನತೆಗೆ ದೇಶದಲ್ಲಿ 5 ಕೋಟಿ ಬಲಿ
Team Udayavani, Feb 27, 2017, 10:06 AM IST
ನವದೆಹಲಿ: ಬೆಚ್ಚಿಬೀಳುವ ಸುದ್ದಿ ಇದು. ವಿಶ್ವದಲ್ಲಿ ಬರೋಬ್ಬರಿ 322 ಮಿಲಿಯನ್, ಅಂದರೆ 32.30 ಕೋಟಿ ಮಂದಿ ಖಿನ್ನತೆಯಿಂದ ಬಳಲುತ್ತಲೇ ಜೀವನ ಸಾಗಿಸುತ್ತಿದ್ದಾರೆ.
ಈ ಪೈಕಿ ಅರ್ಧದಷ್ಟು ಮಂದಿ ಆಗ್ನೇಯ ಏಷ್ಯಾ ವಲಯ ಹಾಗೂ ಪಶ್ಚಿಮ ಪೆಸಿಫಿಕ್ ವಲಯದವರಾಗಿದ್ದು, ಇದರಲ್ಲಿ ಭಾರತ ಮತ್ತು ಚೀನಾದ ಪಾಲು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಖನ್ನತೆ ಮತ್ತು ಇತರೆ ಸಾಮಾನ್ಯ ಮಾನಸಿಕ ಅಸ್ವಸ್ಥತೆ-ಜಾಗತಿಕ ಆರೋಗ್ಯ ಗಣತಿಯಲ್ಲಿ ಬಹಿರಂಗಗೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2015ರಲ್ಲಿ ಭಾರತದಲ್ಲಿ 5,66,75,969 ಮಂದಿ ಖಿನ್ನತೆಯಿಂದ ಬಳಲಿರುವುದು ಕಂಡುಬಂದಿದೆ. ಹಾಗೇ ಆತಂಕಕಾರಿ ಕಾಯಿಲೆಗೆ ತುತ್ತಾಗಿ ಜೀವನ ಸಾಗಿಸುತ್ತಿರುವವರು 3,84,25,093 ಜನ ಎಂದಿದೆ. ಇವೆಲ್ಲದರ ಜತೆಗೆ ಈ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವವರ ಅಂಕಿ ಅಂಶಗಳಲ್ಲಿಯೂ ಭಾರತ ಅಗ್ರ ಪಂಕ್ತಿಯಲ್ಲಿದೆ. 2015ರಲ್ಲಿ ಬರೋಬ್ಬರಿ 7,88,000 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶ್ವ ಮಟ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆ ಸರಾಸರಿ 1.5ರಷ್ಟು ಹೆಚ್ಚಿದ್ದು, ಇವರಲ್ಲಿ 19ರಿಂದ 29 ವಯೋಮಾನದವರು ಜಾಸ್ತಿ ಇದ್ದಾರೆ. ಜಾಗತಿಕವಾಗಿ ಹೇಳುವುದಿದ್ದರೆ ಶೇ.78ರಷ್ಟು ಆತ್ಮಹತ್ಯೆಗಳು ಕೆಳ ಮತ್ತು ಮಧ್ಯಮ ಆದಾಯ ವರ್ಗದಲ್ಲಿ ಹೆಚ್ಚಾಗಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಪ್ರಪಂಚದಲ್ಲಿ 40 ಸೆಕೆಂಡ್ಗಳಿಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮತ್ತೂಂದು ಆಘಾತಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ