CONNECT WITH US  

999 ರೂ.ಗೆ ಸಿಗಲಿದೆ ಜಿಯೋ 4ಜಿ ಫೋನು

ಹೊಸದಿಲ್ಲಿ: ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಮಾದರಿಯ ಸಂಚಲನ ಉಂಟು ಮಾಡಿದ ರಿಲಯೆನ್ಸ್‌ ಜಿಯೋ ಈಗ ಮತ್ತೂಂದು ಸಾಹಸ ಕೈಗೊಂಡಿದೆ. ಇದೀಗ ಕೇವಲ 999 ರೂ.ಗೆ 4ಜಿ ಮೊಬೈಲ್‌ ಫೋನ್‌ ಬಿಡುಗಡೆ ಮಾಡಿದೆ. ಕಡಿಮೆ ದರದಲ್ಲಿ 4ಜಿ  ಮೊಬೈಲ್‌ ಫೋನ್‌ ಹೊಂದಬೇಕೆಂಬ ಸಾವಿರಾರು ಮಂದಿಯ ಆಸೆ ಈಡೇರಲಿದೆ. ಹೊಸ ರಿಲಯನ್ಸ್‌ 4ಜಿ ಮೊಬೈಲ್‌ ಫೋನ್‌ 999 ರೂ. ಮತ್ತು 1,499 ರೂ. ದರದಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಜಿಯೋ ಸ್ಟೋರ್‌ನಲ್ಲಿ ಲಭ್ಯವಾಗಲಿದೆೆ. ಮಾರ್ಚ್‌ 1ರಂದು ರಿಲಯೆನ್ಸ್‌ ಜಿಯೋ ಹೊಸ ಜಿಯೋ ಪ್ರೈಮ್‌ ಪ್ಲಾನ್‌ ಅನ್ನು ಪರಿಚಯಿಸಿತ್ತು.

Trending videos

Back to Top