CONNECT WITH US  

ದಲಿತ ದೌರ್ಜನ್ಯ ಧ್ವನಿಗೆ ಅವಕಾಶವಿಲ್ಲ: ಮಾಯಾವತಿ ರಾಜೀನಾಮೆ ಬೆದರಿಕೆ

ಹೊಸದಿಲ್ಲಿ : ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದಘಟನೆ ಮಂಗಳವಾರ ನಡೆದಿದೆ. 

ರಾಜ್ಯಸಭೆಯಲ್ಲಿ ಸಹರಣ್‌ಪುರ್‌ನಲ್ಲಿ ದಲಿತರ ಮೇಲಾದ ದೌರ್ಜನ್ಯದ ಕುರಿತು ಮಾತನಾಡಲು ಮುಂದಾದಾಗಸಭಾಧ್ಯಕ್ಷ ಪಿ.ಜೆ.ಕುರಿಯನ್‌ ಅವರು ನಿರ್ಬಂಧಿಸಿದ ಕಾರಣಕ್ಕೆ ಕೆಂಡಾಮಂಡಲರಾದ ಮಾಯಾವತಿ ಇಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಸದನದಿಂದ ಹೊರಬಂದ ಮಾಯಾವತಿ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ದಲಿತರ ಪರ ಧ್ವನಿಯಾಗಿ ಇಲ್ಲಿಗೆ ಬಂದಿದ್ದೇನೆ. ಆದರೆ ನನಗೆ ಆ ಬಗ್ಗೆ ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ. ನಾನೇಕೆ ಇಲ್ಲಿ ಮುಂದುವರಿಯಬೇಕು ಎಂದು ಪ್ರಶ್ನಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. 

Trending videos

Back to Top