CONNECT WITH US  

ರಾಜೀವ್‌ ಹಂತಕನಿಗೆ ಪೆರೋಲ್‌ : ಟವರ್‌ ಏರಿದ ಕೈ ಕಾರ್ಯಕರ್ತ 

ಕೋವಿಲ್‌ಪತ್ತಿ : ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರಲ್ಲೊಬ್ಬನಾದ ಎ.ಜಿ.ಪೆರಾರಿವಾಲನ್‌ಗೆ ಪೆರೋಲ್‌ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ತ್ರಿವರ್ಣ ಧ್ವಜದೊಂದಿಗೆ ಮೊಬೈಲ್‌ ಟವರ್‌ ಏರಿ ಪ್ರತಿ ಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ. ಪ್ರತಿಭಟನೆಯ ವಿಡಿಯೋ ನೋಡಿ 

ತಂದೆಯ ತೀವ್ರ ಅನಾರೋಗ್ಯದ ನಿಮಿತ್ತ ತಾಯಿಯ ಮನವಿಯ ಮೇರೆಗೆ ಪೆರಾರಿವಾಲನ್‌ಗೆ ಪೆರೋಲ್‌ ನೀಡಿ  ಶುಕ್ರವಾರ ವೆಲ್ಲೂರ್‌ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. 

ಜೀವಾವಧಿ ಶಿಕ್ಷೆಗೊಳಗಾಗಿರುವ ಪೆರಾರಿವಾಲನ್‌ಗೆ ಮೊದಲು ಪೆರೋಲ್‌ ನಿರಾಕರಿಸಲಾಗಿತ್ತು. ಆದರೆ ಪೊಲೀಸ್‌ ಭದ್ರತೆ ಮತ್ತು ಹಲವು ಷರತ್ತುಗಳೊಂದಿಗೆ ಪೆರೋಲ್‌ ನೀಡಲಾಗಿದೆ. 


Trending videos

Back to Top