ಸಬ್ಸಿಡಿ ಸಹಿತ, ರಹಿತ ಸಿಲಿಂಡರ್ ದರ ಹೆಚ್ಚಳ
Team Udayavani, Nov 2, 2017, 6:50 AM IST
ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ನ ದರ 93 ರೂ. ಮತ್ತು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ (14.2 ಕೆಜಿ) 4.50 ರೂ.ನಷ್ಟು ಏರಿಕೆ ಮಾಡಲಾಗಿದೆ. ಮುಂದಿನ ವರ್ಷದ ಮಾರ್ಚ್ ಒಳಗಾಗಿ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ತೆಗೆದು ಹಾಕಬೇಕೆಂದು ನಿರ್ಧರಿಸಿರುವ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಪ್ರತಿ ತಿಂಗಳು ದರ ಪರಿಷ್ಕರಣೆಯ ಆದೇಶ ನೀಡಿತ್ತು. 2016ರ ಜುಲೈನಿಂದ ಆರಂಭವಾಗಿರುವ ದರ ಏರಿಕೆ ಇದು 19ನೇಯದ್ದಾಗಿದೆ.
ಸಬ್ಸಿಡಿ ರಹಿತ ಸಿಲಿಂಡರ್ನ ಬೆಲೆಯಲ್ಲಿ 93 ರೂ. ಏರಿಕೆಯಾಗಿರುವುದರಿಂದ ಬೆಲೆ 742 ರೂ.ಆಗಿದೆ. ಕಳೆದ ತಿಂಗಳ 1ರ ನಂತರ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 50 ರು. ಏರಿಕೆಯಾಗಿ ಅದರ ಬೆಲೆ ಪ್ರತಿ ಸಿಲಿಂಡರ್ಗೆ 649 ರೂ. ಆಗಿತ್ತು. ಸಬ್ಸಿಡಿ ಸಹಿತ ಇರುವ ಸಿಲಿಂಡರ್ ಬೆಲೆ 4.50 ರೂ.ಏರಿಕೆಯಾಗಿರುವುದರಿಂದ 495.69 ರೂ. ಆಗಲಿದೆ. ಆರಂಭದಲ್ಲಿ ಎಲ್ಪಿಜಿಗೆ 2 ರೂ. ಹೆಚ್ಚಳಕ್ಕೆ ನಿರ್ಧರಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳಿಗೆ ದೇಶಾದ್ಯಂತ 18.11 ಕೋಟಿ ಮಂದಿ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ