CONNECT WITH US  

ಕಾಬೂಲ್‌ನಲ್ಲಿ ಕಾರ್‌ ಬಾಂಬ್‌ ಸ್ಫೋಟ:ಕನಿಷ್ಠ 26 ಮಂದಿ ಬಲಿ 

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು ಕಾಬೂಲ್‌ನ ಆಸ್ಪತ್ರೆಯೊಂದರ ಬಳಿ ಬುಧವಾರ ಆತ್ಮಾಹುತಿ ಕಾರ್‌ ಬಾಂಬ್‌ ದಾಳಿ ನಡೆಸಿದ್ದು  ಕನಿಷ್ಠ 26 ಮಂದಿ ನಾಗರಿಕರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. 

ಕಾಬೂಲ್‌ ವಿಶ್ವವಿದ್ಯಾಲಯ ಮತ್ತು ಅಲಿ ಅಬಾದ್‌ ಆಸ್ಪತ್ರೆಯ ಬಳಿ ಕಾರ್‌ನಲ್ಲಿ ಬಂದ ಆತ್ಮಾಹುತಿ ದಾಳಿಕೋರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿರುವುದಾಗಿ ವರದಿಯಾಗಿದೆ. 

ಅಫ್ಘಾನ್‌ನಲ್ಲಿ ಪರ್ಷಿಯನ್‌ ಹೊಸವರ್ಷ ನವ್‌ರುಜ್‌  ಆಚರಣೆ ವೇಳೆಯಲ್ಲೇ ದಾಳಿ ನಡೆದಿದೆ. 

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. 


Trending videos

Back to Top