CONNECT WITH US  

ಮಂಗಳನ ಕಡೆಗೆ ನಾಸಾ ಹೆಲಿಕಾಪ್ಟರ್‌

ಮಂಗಳನ ಅಧ್ಯಯನದಲ್ಲಿ ತೊಡಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ತನ್ನೀ ಪ್ರಯತ್ನದ ಮುಂದುವರಿದ ಭಾಗವಾಗಿ, ಮಂಗಳ ಗ್ರಹಕ್ಕೆ ಪುಟಾಣಿ ಹೆಲಿಕಾಪ್ಟರ್‌ ಕಳುಹಿಸಲು ನಿರ್ಧರಿಸಿದೆ. ಈ ಹೆಲಿಕಾಪ್ಟರ್‌ ನಡೆಸಲಿರುವ ಅಧ್ಯಯನವು ಮುಂದಿನ ಬಾಹ್ಯಾಕಾಶ ಸಂಶೋಧನೆಗಳಿಗೆ ದೊಡ್ಡ ವೇದಿಕೆ ಕಲ್ಪಿಸಲಿದೆ ಎನ್ನುತ್ತಾರೆ ವಿಜ್ಞಾನಿಗಳು.

ಉದ್ದೇಶವೇನು?
ಮಂಗಳನ ಅಂಗಳವನ್ನು ಈಗಾಗಲೇ ಅಧ್ಯಯನಕ್ಕೊಳಪಡಿಸಿರುವ ನಾಸಾ, ಇದೀಗ ಅಲ್ಲಿನ ವಾತಾವರಣ ಅಧ್ಯಯನ ಮಾಡಲು ನಿರ್ಧರಿಸಿದೆ. ಆದರೆ, ಮಂಗಳನ ಅಂಗಳ, ಭೂಮಿಯ ಒಟ್ಟು ವಾತಾವರಣದ ಶೇ. 1ರಷ್ಟು ಮಾತ್ರವೇ ಇರುವುದರಿಂದ ಅಲ್ಲಿನ ಸೂಕ್ಷ್ಮ ಪರಿಸ್ಥಿತಿಗಳಿಗೆ ಹೊಂದಿಕೊಂಡು, ಕಾರ್ಯನಿರ್ವಹಿಸುವಂಥ ಪುಟಾಣಿ ಹೆಲಿಕಾಪ್ಟರ್‌ ಅಗತ್ಯವಿದೆ. ಹಾಗಾಗಿ, ಆಗಸ್ಟ್‌ 2013ರಿಂದಲೇ ನಾಸಾ ಪ್ರೊಪಲ್ಶನ್‌ ಲ್ಯಾಬೊರೇಟರಿ (ಜೆಪಿಎಲ್‌)ಯಲ್ಲಿ ಈ ಹೆಲಿಕಾಪ್ಟರ್‌ ತಯಾರಿಯಲ್ಲಿ ನಾಸಾ ನಿರತವಾಗಿತ್ತು.

ಯಾವಾಗ ಉಡಾವಣೆ? 
2020ರ ಜುಲೈಯಲ್ಲಿ ನಾಸಾ, ತನ್ನ ಮಾರ್ಸ್‌ಮಿಷನ್‌ ಯೋಜನೆಯಡಿ ಮಂಗಳ ಗ್ರಹಕ್ಕೆ ರೋವರ್‌ ಎಂಬ ಆಕಾಶ ಕಾಯವನ್ನು ಕಳುಹಿಸಲಿದೆ. ಅದರ ಜತೆಗೆ ಈ ಹೆಲಿಕಾಪ್ಟರ್‌ ಸಾಗಲಿದೆ.


Trending videos

Back to Top