CONNECT WITH US  

ದಿಲ್ಲಿಯಲ್ಲಿ ಪೆಟ್ರೋಲ್‌  76

ಹೊಸದಿಲ್ಲಿ: ಪ್ರತಿ ಲೀಟರ್‌ , ಡೀಸೆಲ್‌ಪೆಟ್ರೋಲ್‌ ದರ  ಅತ್ಯಧಿಕ ಮಟ್ಟ ತಲುಪಿದೆ. ನವದಿಲ್ಲಿಯಲ್ಲಿ  ಲೀಟರ್‌ ಪೆಟ್ರೋಲ್‌ಗೆ  76.24 ರೂ. ಡೀಸೆಲ್‌ 67.57 ರೂ. ಆಗಿದೆ. ನಾಲ್ಕು ವಾರಗಳಲ್ಲಿ ಏರಿಕೆ ಮಾಡದೆ, ಉಂಟಾದ ನಷ್ಟವನ್ನು ಗ್ರಾಹಕರ ಮೇಲೆ ಹೊರಿಸಲು ತೈಲ ಕಂಪೆನಿಗಳು ಏರಿಕೆ ನಿರ್ಧಾರ ಕೈಗೊಂಡಿವೆ. ನವದಿಲ್ಲಿ ಯಲ್ಲಿ ಭಾನುವಾರ ಲೀಟರ್‌ ಪೆಟ್ರೋಲ್‌ ಬೆಲೆಯನ್ನು 33 ಪೈಸೆ, ಡೀಸೆಲ್‌ಗೆ 26 ಪೈಸೆ ಏರಿಕೆ ಮಾಡಲಾಗಿದೆ. 2017ರ ಜೂನ್‌ನಲ್ಲಿ ಜಾರಿಗೆ ಬಂದ ನಿತ್ಯದ ದರ ಪರಿಷ್ಕರಣೆಯ ನಂತರದ ಅತ್ಯಂತ ಹೆಚ್ಚಿನ ದರವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 77.81 ರೂ., ಡೀಸೆಲ್‌ಗೆ 68.98 ರೂ. ಆಗಿದೆ. ಪಣಜಿಯಲ್ಲಿ ಪೆಟ್ರೋಲ್‌ ಬೆಲೆ ಕಡಿಮೆ  70.26 ರೂ ಆಗಿತ್ತು. ಹೈದರಾಬಾದ್‌ನಲ್ಲಿ ಡೀಸೆಲ್‌ ದರ 73.45 ರೂ., ತಿರುವನಂತಪುರದಲ್ಲಿ 73.34 ರೂ. ಆಗಿತ್ತು. ಕೋಲ್ಕತಾದಲ್ಲಿ 78.91 ರೂ., ಚೆನ್ನೈನಲ್ಲಿ 79.13 ರೂ. ಆಗಿತ್ತು.  

ಕರ್ನಾಟಕ ಚುನಾವಣೆಯ ಮತದಾನ ಮುಗಿದ ದಿನದಿಂದ ಬೆಲೆ ಪರಿಷ್ಕರಣೆಯನ್ನು ಪುನಃ ಆರಂಭಿಸಿದ್ದು, ಅಂದಿನಿಂದ  ಪ್ರತಿ ದಿನವೂ ಏರಿಕೆ ಮಾಡಲಾಗುತ್ತಿದೆ. ಒಟ್ಟಾರೆ ಅಂದಿನಿಂದ ಲೀಟರ್‌ ಪೆಟ್ರೋಲ್‌ಗೆ 1.61 ರೂ. ಹಾಗೂ ಡೀಸೆಲ್‌ಗೆ 1.64 ರೂ. ಏರಿಕೆ ಮಾಡಲಾಗಿದೆ. 

2014ರ ನಂತರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಪೆಟ್ರೋಲ್‌ ಬೆಲೆ ಬ್ಯಾರೆಲ್‌ಗೆ 80 ಡಾಲರ್‌ ಸಮೀಪಿಸಿದೆ. 2014 ನವೆಂಬರ್‌ನಿಂದ 2016 ಜನವರಿಯವರೆಗೆ ಒಂಬತ್ತು ಬಾರಿ ಕೇಂದ್ರ ಅಬಕಾರಿ ಸುಂಕವನ್ನು ಏರಿಕೆ ಮಾಡಿದ್ದು, ಲೀಟರ್‌ ಪೆಟ್ರೋಲ್‌ ಮೇಲೆ 11.77 ರೂ. ಹಾಗೂ ಡೀಸೆಲ್‌ ಮೇಲೆ 13.47 ರೂ. ವಿಧಿಸಿದೆ. ಈ ಅವಧಿಯಲ್ಲಿ ಪೆಟ್ರೋಲ್‌ ಬೆಲೆ ಇಳಿಕೆಯಾಗುತ್ತಿತ್ತು. ಆದರೆ ಬೆಲೆ ಏರಿಕೆಯಾಗುತ್ತಿರುವಾಗ ಕಳೆದ ಅಕ್ಟೋಬರ್‌ನಲ್ಲಿ ಮಾತ್ರ 2 ರೂ. ಇಳಿಕೆ ಮಾಡಿದೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top