ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆ ಅನಾವರಣ
Team Udayavani, Jun 24, 2018, 6:00 AM IST
ಚೆನ್ನೈ: ಭಾರತೀಯ ಸೇನೆಯ ಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಯನ್ನು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಅನಾವರಣಗೊಳಿಸಲಾಗಿದೆ. ಕೆ.ಎಂ.ಕಾರ್ಯಪ್ಪ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರು ಪ್ರತಿಮೆ ಅನಾವರಣ ಗೊಳಿಸಿದ್ದಾರೆ. ನಿವೃತ್ತ ಮೇಜರ್ ಜನರಲ್ ಟಿ ಕೆ ಕೌಲ್ ಹಾಗೂ ವಿ ಡಿ ಚೌಗಲೆ ಈ ವೇಳೆ ಹಾಜರಿದ್ದರು. 1968ರಲ್ಲಿ ಈ ಅಕಾಡೆಮಿಯಿಂದ ತರಬೇತಿ ಪಡೆದ ಶಾರ್ಟ್ ಸವೀಸ್ ಕಮಿಷನ್ನ ವಿದ್ಯಾರ್ಥಿಗಳು ಈ ಪ್ರತಿಮೆ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಸುಮಾರು 250ಕ್ಕೂ ಹೆಚ್ಚು ನಿವೃತ್ತ ಅಧಿಕಾರಿಗಳು ವಿವಿಧ ದೇಶಗಳಿಂದ ಆಗಮಿಸಿ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಅಲ್ಲದೆ ಕೆ.ಸಿ.ಕಾರ್ಯಪ್ಪ ಅವರ ಬ್ಯಾಚ್ಮೇಟ್ಗಳೂ ಈ ವೇಳೆ ಹಾಜರಿದ್ದರು.