ಆಂಧ್ರ : ಭೀಕರ ಅಪಘಾತದಲ್ಲಿ 9 ಮಂದಿ ದಾರುಣ ಸಾವು
Team Udayavani, Jun 24, 2018, 10:50 AM IST
ಕರ್ನೂಲ್: ಜಿಲ್ಲೆಯ ಸೋಮಯಾಜುಪಲ್ಲೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಬಸ್ಸೊಂದಕ್ಕೆ ಆಟೋ ರಿಕ್ಷಾ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ 7 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ರಿಕ್ಷಾದಲ್ಲಿ ಮಹಿಳೆಯರು ಮತ್ತು ಅನಾರೋಗ್ಯಕ್ಕೀಡಾದವರು ನಾಟಿ ಔಷಧಿ ತರಲೆಂದು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.