ಶಾಲಾ ಬಾಲಕಿಯ ಅಪಹರಣ, ಅತ್ಯಾಚಾರ: ಆರೋಪಿ ಅರೆಸ್ಟ್
Team Udayavani, Jun 28, 2018, 4:52 PM IST
ಮಾಂಡ್ಸೋರ್, ಮಧ್ಯಪ್ರದೇಶ : ಎಂಟು ವರ್ಷ ಪ್ರಾಯದ ಬಾಲಕಿಯನ್ನು ಕಾಮಾಂಧನೋರ್ವ ಶಾಲೆಯ ಹೊರಗೆ ಅಪಹರಿಸಿ ಅತ್ಯಾಚಾರಗೈದಿರುವ ಘಟನೆ ನಡೆದಿದ್ದು ಅತ್ಯಾಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅತ್ಯಾಚಾರಿಯನ್ನು ಇರ್ಫಾನ್ ಅಲಿಯಾಸ್ ಭಯ್ಯು (20) ಎಂದು ಗುರುತಿಸಲಾಗಿದೆ.
ಪ್ರಜ್ಞಾಹೀನಳಾಗಿ ಬಿದ್ದಿದ್ದ ಬಾಲಕಿಯನ್ನು ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಗಿದ್ದು ಆಕೆಯ ದೇಹಾರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.