ಜನ ಪ್ರತಿನಿಧಿ ಕಾಯ್ದೆ ತಿದ್ದುಪಡಿ: NRI ಗಳಿಗೂ ಮತದಾನದ ಅವಕಾಶ
Team Udayavani, Aug 12, 2018, 4:11 PM IST
ನವದೆಹಲಿ: ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕನ್ನು ಕಲ್ಪಿಸುವ “ಜನ ಪ್ರತಿನಿಧಿ ಕಾಯ್ದೆ
(2017) ತಿದ್ದುಪಡಿ’ ಮಸೂದೆಗೆ ಶುಕ್ರವಾರ ಲೋಕಸಭೆಯ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ 1.1 ಕೋಟಿ ಎನ್ಆರ್
ಐಗಳಿಗೆ ಬದಲಿ ಮತದಾನದ ಅನುಕೂಲ (ಪ್ರಾಕ್ಸಿ ವೋಟಿಂಗ್) ಸಿಗಲಿದೆ.
ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳಿದ್ದು, ಹೊಸ ಮಸೂದೆಯಿಂದಾಗಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಸರಾಸರಿ 21 ಸಾವಿರ ಹೆಚ್ಚುವರಿ ಮತದಾರರು ಸಿಗಲಿದ್ದಾರೆ. 2014ರಲ್ಲಿ ಪ್ರಧಾನಿಯಾದಾಗಿನಿಂದ ಈವರೆಗೆ ಸುಮಾರು 1 ಕೋಟಿ
ಅನಿವಾಸಿ ಭಾರತೀಯರ ಜತೆ ಸಂವಾದ ನಡೆಸಿರುವ ಮೋದಿಯವರಿಗೆ ಇದರಿಂದ ಹೆಚ್ಚು ಅನುಕೂಲ.
ವಿದೇಶಗಳಲ್ಲಿ ಅನಿವಾಸಿ ಭಾರತೀಯ ರಿಗೆಂದೇ ಏರ್ಪಡಿಸಲಾಗುತ್ತಿದ್ದ ಬೃಹತ್ ಸಮ್ಮೇಳನಗಳಲ್ಲಿ ಮೋದಿ ಮಾತನಾಡಿದ್ದು ಈಗ ಅವರಿಗೇ ವರದಾನ.
ಜನ ಪ್ರತಿನಿಧಿ ಕಾಯ್ದೆ ತಿದ್ದುಪಡಿಗೆ ಅಸ್ತು ಎಂದಿರುವ ಲೋಕಸಭೆ ವಿಶ್ವದಾದ್ಯಂತ 1.1 ಕೋಟಿ ಅನಿವಾಸಿ ಭಾರತೀಯರು ಅನಿವಾಸಿ ಭಾರತೀಯರಿಗೆ ಮತದಾನ ಅವಕಾಶದಿಂದ ಹೆಚ್ಚಿನ ಅನುಕೂಲ ದೇಶದ ಪ್ರತಿ ಸಂಸತ್ ಕ್ಷೇತ್ರಕ್ಕೆ 21,000 ಹೆಚ್ಚುವರಿ ಮತದಾರರ ಸೇರ್ಪಡೆ
ಇತರ ಪ್ರಮುಖ ಅನುಕೂಲಗಳು
ಯಾರಿಗೆ ಮತ ಹಾಕಬೇಕೆಂಬ ಎನ್ಆರ್ಐಗಳ ನಿರ್ಧಾರ, ಭಾರತದಲ್ಲಿ ಅವರ ಕುಟುಂಬದ ಇತರ ಸದಸ್ಯರ ಮೇಲೆ ಪರಿಣಾಮ ಬೀರುವ ಸಾಧ್ಯತೆ.
ಪ್ರತಿ ಕ್ಷೇತ್ರದಲ್ಲೂ ಪೈಪೋಟಿ ಹೆಚ್ಚಾಗಿ, ವಿಜೇತರ ಗೆಲುವಿನ ಅಂತರ ಗಣನೀಯವಾಗಿ ಕಡಿಮೆಗೊಳ್ಳುವ ಸಾಧ್ಯತೆ.ಅರ್ಥಾತ್, ಭಾರೀ ಪ್ರಭಾವಿ ನಾಯಕರಿಗೂ ಸಮಬಲದ ಪೈಪೋಟಿ ನೀಡಲು 2ನೇ ಪ್ರಭಾವಿ ಅಭ್ಯರ್ಥಿಗೆ ಅವಕಾಶ.
ಎನ್ಆರ್ಐಗಳಿಂದ ಭಾರತದ ರಾಷ್ಟ್ರೀಯತೆ ಪರಿಕಲ್ಪನೆಗೆ ಮತ್ತಷ್ಟು ಶಕ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ