ರಸ್ತೆ ನಿಮ್ಮ ಅಪ್ಪಂದಾ ಸರಣಿಯಲ್ಲಿ ಅಕ್ಷಯ್
Team Udayavani, Aug 16, 2018, 6:00 AM IST
ಮುಂಬೈ: ಸಂಚಾರಿ ನಿಯಮ ಪಾಲನೆ ಬಗ್ಗೆ ಸಾರ್ವಜನಿ ಕರಲ್ಲಿ ಜಾಗೃತಿ ಮೂಡಿಸಲು ಬಾಲಿವುಡ್ ನಟ ಅಕ್ಷಯ ಕುಮಾರ್ ಟ್ರಾಫಿಕ್ ಪೊಲೀಸ್ ಸಮವಸ್ತ್ರ ಧರಿಸಿ ಸಂದೇಶ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಅದು ಈಗ ವೈರಲ್ ಆಗಿದೆ. “ರಸ್ತೆ ನಿಮ್ಮ ಅಪ್ಪಂದಾ’ ಎಂಬ ಜಾಗೃತಿ ಜಾಹೀರಾತು ಸರಣಿಯಲ್ಲಿ ಅವರು ಭಾಗವಹಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ವಿಷಾದ ಪಡುವ ಮೊದಲೇ ಸುರಕ್ಷಿತರಾಗಿರು ವುದು ಒಳಿತು. ನಿಮ್ಮ ಮತ್ತು ಇತರರ ಒಳಿತಿಗಾಗಿ ರಸ್ತೆ ನಿಯಮಗಳನ್ನು ಪಾಲಿಸಿ ಮನವಿ ಮಾಡುವ ಅಂಶ ವಿಡಿಯೋದಲ್ಲಿದೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತ ನಡೆಯುತ್ತಿದೆ. ಅದರ ಬಗ್ಗೆ ಜಾಗೃತಿ ಮೂಡಿಸಲು ಆಂದೋಲನದ ರಾಯಭಾರಿಯಾಗಿ ಸೇರ್ಪಡೆಗೊಂಡೆ ಎಂದು ಅಕ್ಕಿ ಬರೆದುಕೊಂಡಿದ್ದಾರೆ.