ಯುಪಿಎಸ್ಸಿ ವೆಬ್ ಸೈಟ್ ಹ್ಯಾಕ್; ಡೊರೇಮಾನ್ ಚಿತ್ರ, ಸಂಗೀತ
Team Udayavani, Sep 11, 2018, 11:17 AM IST
ಹೊಸದಿಲ್ಲಿ : ಲೋಕಸೇವಾ ಆಯೋಗ (ಯುಪಿಎಸ್ಸಿ) ವೆಬ್ ಸೈಟನ್ನು ನಿನ್ನೆ ಸೋಮವಾರ ರಾತ್ರಿ ಹ್ಯಾಕ್ ಮಾಡಲಾಗಿದೆ.
ಹ್ಯಾಕರ್ಗಳು ಯುಪಿಎಸ್ಸಿ ವೆಬ್ ಸೈಟ್ ಮುಖಪುಟದಲ್ಲಿ ಜನಪ್ರಿಯ ಜಪಾನೀ ಕಾರ್ಟೂನ್ ಪಾತ್ರ ಡೊರೇಮಾನ್ ಚಿತ್ರವನ್ನು ಹಾಕಿದ್ದಾರೆ.
ಡೊರೇಮಾನ್ನ ಚಿತ್ರದೊಂದಿಗೆ ಎರಡು ಸಾಲುಗಳ ಬರಹವನ್ನೂ ಹಾಕಲಾಗಿದೆ : ಡೊರೇಮಾನ್ ಪಿಕಪ್ ದಿ ಕಾಲ್ ಎಂಬ ಬರಹ ಮೇಲಿನ ಸಾಲಿನಲ್ಲಿ ಮತ್ತು “ಐ ಆ್ಯಮ್ ಸ್ಟುಪಿಡ್’ ಎಂಬ ಬರಹ ಕೆಳಗಿನ ಸಾಲಿನಲ್ಲಿ ಕಂಡು ಬಂದಿದೆ.
ಮಾತ್ರವಲ್ಲದೆ ಹಿಂದಿಯಲ್ಲಿರುವ ಡೊರೇಮಾನ್ ಟೈಟಲ್ ಸಾಂಗ್ ಹಿನ್ನೆಲೆಯಲ್ಲಿ ಪ್ಲೇ ಆಗುವಂತೆ ಮಾಡಲಾಗಿದೆ.
ಹ್ಯಾಕ್ ಆದ ಯುಪಿಎಸ್ಸಿ ವೆಬ್ ಸೈಟಿನ ಕೆಲವು ಬಳಕೆದಾರರು ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್ನಲ್ಲಿ ನಿನ್ನೆ ಮಧ್ಯರಾತ್ರಿಯ ಹೊತ್ತಿಗೆ ಅಪ್ ಲೋಡ್ ಮಾಡಿದ್ದಾರೆ.
ಇಷ್ಟೆಲ್ಲ ಆದ ಬಳಿಕ ಇಂದು ಬೆಳಗ್ಗೆ ಯುಪಿಎಸ್ಸಿ ವೆಬ್ ಸೈಟನ್ನು ಪುನರ್ ಸ್ಥಾಪಿಸಲಾಗಿದೆ. ಆದರೆ ಅನಂತರದಲ್ಲಿ ವೆಬ್ ಸೈಟ್ “ನಿರ್ವಹಣೆ’ಯಲ್ಲಿದೆ ಎಂಬ ಬರಹದೊಂದಿಗೆ ಕಾಣಿಸಿಕೊಂಡಿದೆ.
ಈ ಹ್ಯಾಕಿಂಗ್ ಘಟನೆ ಬಗ್ಗೆ ಯುಪಿಎಸ್ಸಿ ಇನ್ನಷ್ಟೇ ತನ್ನ ಪ್ರತಿಕ್ರಿಯೆ ನೀಡಬೇಕಿದೆ.
ಅಂದ ಹಾಗೆ ಸರಕಾರಿ ವೆಬ್ ಸೈಟ್ ಹ್ಯಾಕ್ ಆಗಿರುವುದು ಇದೇ ಮೊದಲ ಸಲವೇನೂ ಅಲ್ಲ. ಈ ವರ್ಷ ಎಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ವೆಬ್ ಸೈಟ್ ಬ್ರಝಿಲ್ ಹ್ಯಾಕರ್ ತಂಡದಿಂದ ಹ್ಯಾಕ್ ಆಗಿತ್ತು.
ಕಳೆದ ವರ್ಷ ಪಾಕ್ ಪರ ಹ್ಯಾಕರ್ ಗಳು ನಾಲ್ಕು ಉನ್ನತ ಇಂಡಿಯನ್ ಇನ್ಸ್ಟಿಟ್ಯೂಟಗಳ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ