ಸಿಬಿಎಸ್ಇ ಟಾಪರ್ ಮೇಲೆ ಅತ್ಯಾಚಾರ
Team Udayavani, Sep 15, 2018, 2:55 AM IST
ಚಂಡಿಗಡ: ಸಿಬಿಎಸ್ಇ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು, ರಾಷ್ಟ್ರಪತಿಯವರಿಂದ ಗೌರವ ಪಡೆದಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಹರ್ಯಾಣದಲ್ಲಿ ಬೆಳಕಿಗೆ ಬಂದಿದೆ. ಕೋಚಿಂಗ್ ಕೇಂದ್ರಕ್ಕೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಯುವಕರ ಗುಂಪು, ಆಕೆಯನ್ನು ಅಪಹರಿಸಿ, ಹೊಲವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಹೊಲದಲ್ಲಿ ಮೊದಲೇ ಹಾಜರಿದ್ದ ಕೆಲವರೂ ಈ ಕುಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರಿಗಳು ತನ್ನದೇ ಗ್ರಾಮದವರು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಇದೇ ವೇಳೆ, ಆರೋಪಿಗಳು ಬೆದರಿಕೆ ಹಾಕಿದ್ದು, ನಾವು ಪೊಲೀಸ್ ಠಾಣೆಗೆ ತೆರಳಿದರೆ ಪೊಲೀಸರೂ ಎಫ್ಐಆರ್ ದಾಖಲಿಸಿಕೊಳ್ಳಲು ಹಿಂಜರಿದರು ಎಂದು ಯುವತಿಯ ಹೆತ್ತವರು ಆರೋಪಿಸಿದ್ದಾರೆ.