ಅನುಷ್ಕಾ ಕೌಶಲ ರಾಯಭಾರಿ
Team Udayavani, Sep 19, 2018, 11:09 AM IST
ಮುಂಬಯಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ರೂಪಿಸಲಾಗಿರುವ ಕೌಶಲ ಭಾರತ ಯೋಜನೆಗೆ ರಾಯಭಾರಿಗಳಾಗಿ ಬಾಲಿವುಡ್ ನಟರಾದ ವರುಣ್ ಧವನ್ ಹಾಗೂ ಅನುಷ್ಕಾ ಶರ್ಮಾ ಆಯ್ಕೆಯಾಗಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ, ಈ ಇಬ್ಬರೂ ನಟಿಸುತ್ತಿರುವ ಬಿಡುಗಡೆಯಾಗದ ಹೊಸ ಸೂಯಿ ಧಾಗಾ ಚಿತ್ರವನ್ನು ಭಾರತೀಯ ಉದ್ಯಮಿಗಳಿಗಾಗಿ ಅರ್ಪಿಸಲಾಗುತ್ತದೆ. ಹಾಗಾಗಿ, ಇದರ ಹೆಸರನ್ನು ಸೂಯಿ ಧಾಗಾ- ಮೇಡ್ ಇನ್ ಇಂಡಿಯಾ ಎಂದು ಬದಲಾಯಿಸಲಾಗುತ್ತಿದೆ. ಹೊಸ ಜವಾಬ್ದಾರಿ ಬಗ್ಗೆ ಖುಷಿಪಟ್ಟ ವರುಣ್ ಹಾಗೂ ಅನುಷ್ಕಾ, ಪ್ರಧಾನಿಯವರ ಆಶಯವನ್ನು ಸರ್ವರಿಗೂ ತಲುಪಿಸಲು ಪ್ರಾಮಾಣಿಕ ಪ್ರಯತ್ನಪಡುವುದಾಗಿ ತಿಳಿಸಿದ್ದಾರೆ.