ಪ್ರಧಾನಿ ಬಳಿ ನಗದು ಕಡಿಮೆ, ಸ್ವಂತ ಕಾರು ಇಲ್ಲ
Team Udayavani, Sep 19, 2018, 5:20 PM IST
ಹೊಸದಿಲ್ಲಿ: ನೋಟು ಅಮಾನ್ಯಗೊಳಿಸಿ, ದೇಶದ ಅರ್ಥ ವ್ಯವಸ್ಥೆಯನ್ನು ಡಿಜಿಟಲ್ ವ್ಯವಸ್ಥೆಯತ್ತ ಕೊಂಡೊಯ್ದಿರುವ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಇರುವ ನಗದು ಪ್ರಮಾಣವೂ 48,944 ರೂ.ಗೆ ಇಳಿದಿದೆ. ಕಳೆದ ವಿತ್ತೀಯ ವರ್ಷದಲ್ಲಿ ಅವರು 1.50 ಲಕ್ಷ ರೂ. ನಗದು ಹೊಂದಿದ್ದರು. ಈಗ ಅದು ಶೇ.67ರಷ್ಟು ಕಡಿಮೆಯಾಗಿದೆ.
2018ರ ಮಾ.31ಕ್ಕೆ ಕೊನೆಗೊಂಡ ವಿತ್ತೀಯ ವರ್ಷದ ಮಾಹಿತಿ ಇದಾಗಿದ್ದು, ಪ್ರಧಾನಿ ಕಾರ್ಯಾಲಯವೇ ಈ ಆಸ್ತಿ ವಿವರ ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಬಳಿ ಒಟ್ಟಾರೆಯಾಗಿ 2.21 ಕೋಟಿ ರೂ. ಮೊತ್ತದ ಸೊತ್ತುಗಳಿವೆ. 1,38, 060 ರೂ. ಮೌಲ್ಯದ ಚಿನ್ನ, 2 ಲಕ್ಷ ರೂ.ಗಳ ಹೂಡಿಕೆ, ಎಸ್ಬಿಐ ಗಾಂಧಿನಗರ ಶಾಖೆಯಲ್ಲಿ 11,29,690 ರೂ. ಬ್ಯಾಲೆನ್ಸ್ ಇದೆ. ಅಂಚೆ ಇಲಾಖೆಯ ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ 5,18,235 ರೂ., ಜೀವ ವಿಮೆಯಲ್ಲಿ 1,59, 281 ರೂ. ಮೊತ್ತ ಹೂಡಿಕೆ ಮಾಡಿದ್ದಾರೆ. 2002ರಲ್ಲಿ ಗಾಂಧಿನಗರದಲ್ಲಿ 1.30 ಲಕ್ಷ ರೂ. ನೀಡಿ ಖರೀದಿಸಿದ ನಿವೇಶನದ ಮೌಲ್ಯ ಈಗ 1 ಕೋಟಿ ರೂ. ಆಗಿದೆ. ವಿಶೇಷವೆಂದರೆ, ಪ್ರಧಾನಿ ಮೋದಿ ಹೆಸರಿನಲ್ಲಿ ದ್ವಿಚಕ್ರ ವಾಹನ, ಕಾರು, ವಿಮಾನ, ಐಷಾರಾಮಿ ಹಡಗು ಇಲ್ಲ. ಇದೇ ವೇಳೆ, ಸಚಿವ ಜೇಟ್ಲಿ ಬಳಿ 10 ಲಕ್ಷ ರೂ. ನಗದು ಹಾಗೂ ದಿಲ್ಲಿಯ ಗ್ರೇಟರ್ ಕೈಲಾಶ್ನ ಎಸ್ಬಿಐ ಮತ್ತು ಎಚ್ಡಿಎಫ್ಸಿ ಶಾಖೆಯಲ್ಲಿ 1.58 ಕೋಟಿ ರೂ. ನಿಗದಿತ ಠೇವಣಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ