ಚೌಕಿದಾರ್ ಚೋರ್ ಹೈ: ರಾಹುಲ್
Team Udayavani, Sep 21, 2018, 6:00 AM IST
ಜೈಪುರ: ರಾಜಸ್ಥಾನದಲ್ಲಿ ಗುರುವಾರ ರ್ಯಾಲಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ಹೊಸ ಘೋಷವಾಕ್ಯವೊಂದನ್ನು ಹುಟ್ಟುಹಾಕಿದ್ದಾರೆ. ಗಲೀ ಗಲೀ ಮೆ ಶೋರ್ ಹೈ, ಹಿಂದುಸ್ತಾನ್ ಕಾ ಚೌಕಿದಾರ್ ಚೋರ್ ಹೈ (ಬೀದಿ ಬೀದಿಯಲ್ಲೂ ಜನ ಹೇಳುತ್ತಿದ್ದಾರೆ, ಹಿಂದೂಸ್ಥಾನದ ಕಾವಲುಗಾರ ಕಳ್ಳ ಎಂದು) ಎಂಬ ಘೋಷವಾಕ್ಯವನ್ನು ಹುಟ್ಟುಹಾಕಿದ್ದಾರೆ. ಆಸಕ್ತಿಕರ ಸಂಗತಿಯೆಂದರೆ, 80ರ ಕಾಲದಲ್ಲಿ ಬೊಫೋರ್ಸ್ ಹಗರಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧವೂ ಇದೇ ರೀತಿಯ ಘೋಷಣೆ (ಗಲೀ ಗಲೀ ಮೆ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ) ಜನಪ್ರಿಯವಾಗಿತ್ತು. ರಾಜಸ್ಥಾನದ ದುಂಗರ್ಪುರಕ್ಕೆ ಭೇಟಿ ನೀಡಿದ ರಾಹುಲ್, ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರನ್ನೂ ಭೇಟಿ ಮಾಡಿ, ಚುನಾವಣೆಗೆ ಉತ್ಸಾಹದಿಂದ ಕೆಲಸ ಮಾಡುವಂತೆ ಪ್ರೇರೇಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್