ಮೀ ಟೂ ಆರೋಪಗಳಿಗೆ ಚೇತನ್ ಭಗತ್ ಪ್ರತಿಕ್ರಿಯೆ: ನಾನು ಅಮಾಯಕ
Team Udayavani, Oct 15, 2018, 4:08 PM IST
ಹೊಸದಿಲ್ಲಿ : ‘ಖ್ಯಾತ ಲೇಖಕ ಚೇತನ್ ಭಗತ್ ಅವರು ತನ್ನ ವಿರುದ್ದ ಸುಳ್ಳು ಲೈಂಗಿಕ ದುರ್ನಡತೆಯ ಆರೋಪ ಮಾಡುವ ಮೂಲಕ ಅನಗತ್ಯವಾಗಿ ತನ್ನನ್ನು ಈ ಅಭಿಯಾನಕ್ಕೆ ಎಳೆದು ತರಲಾಗುತ್ತಿದೆ; ಇಂಥ ಸುಳ್ಳು ಅಪಪ್ರಚಾರವನ್ನು ಯಾರೂ ನಂಬಬಾರದು; ನಾನು ಅಮಾಯಕ, ಮುಗ್ಧ’ ಎಂದು ಟ್ವೀಟರ್ನಲ್ಲಿ ಹೇಳಿದ್ದಾರೆ.
ತನ್ನ ಮಾತಿನ ಸತ್ಯವನ್ನು ಬಲಪಡಿಸಲು ಚೇತನ್ ಅವರು ತನ್ನ ವಿರುದ್ಧ ಲೈಂಗಿಕ ದುರ್ನಡತೆಯ ಆರೋಪ ಮಾಡಿರುವ ಮಹಿಳೆಯೊಂದಿಗೆ ತನ್ನ ಇ-ಮೇಲ್ ಸಂವಾದದ ಸ್ಕ್ರೀನ್ ಶಾಟನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದದ್ದಾರೆ.
ಚೇತನ್ ಭಗತ್ ತನ್ನ ಟ್ವೀಟ್ ನಲ್ಲಿ ಹೀಗೆ ಬರೆದಿದ್ದಾರೆ : “ಹಾಗಿದ್ದರೆ ಯಾರು ಯಾರನ್ನು ಕಿಸ್ ಮಾಡಲು ಬಯಸಿದ್ದರು ? ಇರಾ ತ್ರಿವೇದಿ ಅವರಿಂದ 2013ರಿಂದ ಬಂದಿರುವ ಇಮೇಲ್ಗಳು 2013ರಿಂದ ಆಕೆ ಸುಳ್ಳು ಹೇಳಲಾರಂಭಿಸಿರುವುದನ್ನು ಶ್ರುತಪಡಿಸುತ್ತವೆ ಮತ್ತು ಇದು ಆಕೆಗೆ ಗೊತ್ತಿದೆ ಕೂಡ. ಈ ರೀತಿಯಲ್ಲಿ ನನಗೆ ಮತ್ತು ನನ್ನ ಕುಟುಂಬದವರಿಗೆ ನೀಡಲಾಗುತ್ತಿರುವ ಮಾನಸಿಕ ಕಿರುಕುಳ ಇನ್ನಾದರೂ ನಿಲ್ಲಬೇಕಿದೆ. ದಯವಿಟ್ಟು ಈ ರೀತಿಯ ಸುಳ್ಳು ಆರೋಪಗಳ ಮೂಲಕ ಮೀ ಟೂ ಅಭಿಯಾನಕ್ಕೆ ಹಾನಿ ಉಂಟು ಮಾಡಬೇಡಿ’.
ಚೇತನ್ ಭಗತ್ ಅವರು ತನ್ನ ವಿರುದ್ಧ ಮಾಡಲಾಗಿರುವ ಲೈಂಗಿಕ ದುರ್ನಡತೆಯ ಮೀ ಟೂ ಆರೋಪಗಳನ್ನು ಯಾರೂ ನಂಬಬಾರದು ಎಂದು ತಮ್ಮ ಸರಣಿ ಟ್ವೀಟ್ಗಳ ಮೂಲಕ ಬಿನ್ನವಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!