ಮೀ ಟೂ ಕಳಂಕ; ಸಚಿವ ಸ್ಥಾನಕ್ಕೆ ಎಂಜೆ ಅಕ್ಬರ್ ರಾಜೀನಾಮೆ
Team Udayavani, Oct 17, 2018, 5:08 PM IST
ನವದೆಹಲಿ: ಮೀ ಟೂ ಅಭಿಯಾನದಲ್ಲಿ ತೀವ್ರ ಆರೋಪಕ್ಕೆ ಒಳಗಾಗಿದ್ದ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ, ಮಾಜಿ ಪತ್ರಕರ್ತ ಎಂಜೆ ಅಕ್ಬರ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ 20ಕ್ಕೂ ಅಧಿಕ ಮಾಜಿ ಮಹಿಳಾ ಸಹೋದ್ಯೋಗಿಗಳು ಮೀ ಟೂ ಅಭಿಯಾನದಲ್ಲಿ ಬಹಿರಂಗಪಡಿಸಿದ್ದರು.
ತನ್ನ ಮೇಲಿನ ಲೈಂಗಿಕ ಕಿರುಕುಳ ಆರೋಪ ಆಧಾರರಹಿತವಾದದ್ದು, 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪ ಮಾಡುತ್ತಿರುವುದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ್ದರು.
ಅಲ್ಲದೇ ಮೀ ಟೂ ಅಭಿಯಾನದಲ್ಲಿ ಮೊತ್ತ ಮೊದಲು ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೂಡಾ ಹೂಡಿದ್ದರು.