CONNECT WITH US  

ಮಾಲ್ದೀವ್‌ ಅಧ್ಯಕ್ಷರ ನ.17ರ ಪ್ರಮಾಣ ವಚನ ಕಾರ್ಯಕ್ರಮಕ್ಕೆ PM ಮೋದಿ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ನಡೆಯಲಿರುವ ಮಾಲ್ದೀವ್‌ ಚುನಾಯಿತ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್‌ ಸೊಲಿಹ್‌ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಇಂದು ಶುಕ್ರವಾರ ಪ್ರಕಟಿಸಿದೆ.

ಪ್ರಧಾನಿ ಮೋದಿ ಅವರು ನ.14 ಮತ್ತು 15ರಂದು ನಡೆಯಲಿರುವ ಪೂರ್ವ ಏಶ್ಯ ಶೃಂಗ ಮತ್ತು ಇತರ ಸಭೆಗಳಲ್ಲಿ ಭಾಗಿಯಾಗುವುದಕ್ಕಾಗಿ ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಎಂಇಎ ವಕ್ತಾರ ರವೀಶ್‌ ಕುಮಾರ್‌ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. 

ನ.17ರಂದು ನಡೆಯಲಿರುವ ಮಾಲ್ದೀವ್‌ ಚುನಾಯಿತ ಅಧ್ಯಕ್ಷ ಸೋಲಿಹ್‌ ಅವರ ಪ್ರಮಾಣ ವಚನ ಕಾರ್ಯಕ್ರಮದ ಆಹ್ವಾನವನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದಾರೆ ಎಂದು ರವೀಶ್‌ ಕುಮಾರ್‌ ತಿಳಿಸಿದರು. 

Trending videos

Back to Top