ಸಿಕ್ಕಿಬಿದ್ದ ಪಾನಮತ್ತ ಪೈಲಟ್
Team Udayavani, Nov 12, 2018, 9:10 AM IST
ಮುಂಬಯಿ: ಪಾನಮತ್ತರಾಗಿ ವಿಮಾನ ಚಲಾಯಿಸಲು ಮುಂದಾಗಿದ್ದ ಏರ್ ಇಂಡಿಯಾದ ವಿಮಾನದ ಹಿರಿಯ ಪೈಲಟ್ ಕ್ಯಾ. ಅರವಿಂದ್ ಕತ್ಪಾಲಿಯಾ ಅವರು ಆಲ್ಕೋಹಾಲ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು ಅವರು ಮೂರು ವರ್ಷಗಳ ನಿಷೇಧಕ್ಕೊಳಗಾಗುವ ಸಂಭವವಿದೆ. ಅವರು ರವಿವಾರ ಮಧ್ಯಾಹ್ನ ಮುಂಬಯಿಯಿಂದ ಲಂಡನ್ಗೆ ತೆರಳಬೇಕಿದ್ದ ಎಐ-111 ವಿಮಾನ ಚಲಾಯಿಸಬೇಕಿತ್ತು. ಮತ್ತೂಂದು ಘಟನೆಯಲ್ಲಿ, ಬ್ಯಾಂಕಾಕ್ನಿಂದ ಹೊಸದಿಲ್ಲಿಗೆ ಹೊರಟಿದ್ದ ಏರ್ಇಂಡಿಯಾದ ಮತ್ತೂಂದು ವಿಮಾನದ ಸಹ ಪೈಲಟ್ ಒಬ್ಬರು ಆಲ್ಕೋಹಾಲ್ ಟೆಸ್ಟ್ ತಪ್ಪಿಸಿದ್ದರಿಂದ ಆ ವಿಮಾನವನ್ನು ಹಿಂದಕ್ಕೆ ಕರೆಯಿಸಲಾಗಿದ್ದು, ಪೈಲಟ್ರನ್ನು 3 ತಿಂಗಳು ಅಮಾನತುಗೊಳಿಸಲಾಗಿದೆ.