ಕಾಶ್ಮೀರ:ಗುಂಡಿಕ್ಕಿ ಹುರಿಯತ್ ನಾಯಕ ಹಫಿಜುಲ್ಲಾ ಮಿರ್ ಬರ್ಬರ ಹತ್ಯೆ
Team Udayavani, Nov 20, 2018, 12:02 PM IST
ಶ್ರೀನಗರ : ದಕ್ಷಿಣ ಕಾಶ್ಮೀರದ ಅಚಾಬಲ್ ಪ್ರದೇಶದಲ್ಲಿ ಹುರಿಯತ್ ನಾಯಕ ಹಫಿಜುಲ್ಲಾ ಮೀರ್ ರನ್ನು ಮಂಗಳವಾರ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
2 ವರ್ಷಗಳ ಕಾಲ ಬಂಧನದಲ್ಲಿದ್ದ ಮಿರ್ 2 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಅಕಿಂಗಾಮ್ನಲ್ಲಿರುವ ಮನೆಯ ಎದುರು ದುಷ್ಕರ್ಮಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ಮಿರ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಕಿತ್ಸೆಗೆ ಸ್ಪಂದಿಸಲಿಲ್ಲ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.