ಹಳೆ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಬಂದ್
Team Udayavani, Jan 1, 2019, 12:30 AM IST
ಹೊಸದಿಲ್ಲಿ: ಹಳೆಯ ಸ್ಮಾರ್ಟ್ಫೋನ್ಗಳಿಗೆ ಜನಪ್ರಿಯ ಚಾಟ್ ಅಪ್ಲಿಕೇಶನ್ ವಾಟ್ಸ್ ಆ್ಯಪ್ ಬೆಂಬಲ ಸ್ಥಗಿತಗೊಳ್ಳಲಿದೆ. ಐಒಎಸ್ 7 ಹಾಗೂ ಅದಕ್ಕಿಂತ ಹಳೆಯ ಆವೃತ್ತಿಗಳು, ಆಂಡ್ರಾಯ್ಡ 2.3.7 ಮತ್ತು ನೋಕಿಯಾ 40 ಸಿರೀಸ್ ಫೋನ್ಗಳಲ್ಲಿ ಇನ್ನು ವಾಟ್ಸ್ಆ್ಯಪ್ ಸರಿಯಾಗಿ ಕೆಲಸಮಾಡದು. ಹೊಸದಾಗಿ ವಾಟ್ಸ್ಆ್ಯಪ್ ಇನ್ಸ್ಟಾಲ್ ಮಾಡಲು, ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಕೆಲವು ಸೌಲಭ್ಯಗಳೂ ಇದರಲ್ಲಿ ಕೆಲಸ ಮಾಡು ವುದಿಲ್ಲ ಎಂದು ಫೇಸ್ಬುಕ್ ಮಾಲಕತ್ವದ ಚಾಟ್ ಅಪ್ಲಿಕೇಶನ್ ಪ್ರಕಟಿಸಿದೆ. ಆದರೆ ಸೀಮಿತ ಸೌಲಭ್ಯಗಳೊಂದಿಗೆ ವಾಟ್ಸ್ ಆ್ಯಪ್ ಬಳಕೆ ಮುಂದುವರಿಸಬಹುದಾಗಿದೆ. ನೋಕಿಯಾ ಎಸ್40 ಸಾಫ್ಟ್ವೇರ್ ಅನ್ನು ನೋಕಿಯಾ ಆಶಾ ಫೋನ್ಗಳಲ್ಲಿ ಅಳವಡಿಸಲಾಗಿದೆ.