CONNECT WITH US  

ಪಿಂಪ್ರಿ-ಚಿಂಚ್ವಾಡ್‌ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ, ಸ್ನೇಹಸಮ್ಮಿಲನ

ಪುಣೆ: ಪಿಂಪ್ರಿ -ಚಿಂಚ್ವಾಡ್‌ ಬಿಲ್ಲವ ಸಂಘ ಮತ್ತು  ನಾರಾಯಣ ಗುರು ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಸ್ನೇಹ ಸಮ್ಮಿಲನವು ಸಮಾರಂಭವು ಜು.  30ರಂದು ಪಿಂಪ್ರಿಯ ಆಚಾರ್ಯ ಆತ್ರೆ ಸಭಾಭವನದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ಶ್ರೀಧರ ಜಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೋನವಾಲದ ಕೌನ್ಸಿಲರ್‌ ಶ್ರೀಧರ ಪೂಜಾರಿ ಹಾಗೂ ಗೌರವ ಅತಿಥಿಗಳಾಗಿ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ಮುಖ್ಯ ಅತಿಥಿ  ಶ್ರೀಧರ ಪೂಜಾರಿ ಮಾತನಾಡಿ, ಪಿಂಪ್ರಿ ಚಿಂಚಾÌಡ್‌ನ‌ಲ್ಲಿನ ಈ ಸಮಿತಿ ಸಮಾಜ ಬಾಂಧವರನ್ನು ಒಗ್ಗೂಡಿಸಿಕೊಂಡು ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಸಮಾಜದ ಪ್ರತಿಯೋರ್ವರನ್ನೂ ಸಂಘದೊಂದಿಗೆ ಬೆಸೆಯುವ ಕಾರ್ಯವನ್ನು ಮಾಡಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಗೌರವ ಅತಿಥಿಯಾಗಿ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ ಅವರು ಮಾತನಾಡಿ, ನಮ್ಮ ಸಮಾಜದಲ್ಲಿನ ಪರಂಪರಾಗತ ಕಟ್ಟುಕಟ್ಟಳೆಗೆ ನಾವು ಸ್ಪಂದಿಸಿ ಗೌರವಿಸಬೇಕಾಗಿದೆ. ಪಿಂಪ್ರಿ-ಚಿಂಚಾÌಡ್‌ನ‌ಲ್ಲಿರುವ ಸಮಾಜ ಬಾಂಧವರ ಈ ಸಮಿತಿ ಸಮಾಜ ಬಾಂಧವರ  ಹಿತ

ಚಿಂತನೆಗಾಗಿ ಭವಿಷ್ಯದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದರು.

ಸಂಘದ ಅಧ್ಯಕ್ಷ ಶ್ರೀಧರ ಜಿ. ಪೂಜಾರಿ ಅವರು ಮಾತನಾಡಿ, ಸಮಿತಿಯ ಅಭಿವೃದ್ಧಿಯ ವಿವರಗಳನ್ನು ನೀಡುತ್ತಾ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಮಿತಿಯ ಕಾರ್ಯವೈಖರಿಯನ್ನು ವಿವರಿಸಿದರು. ಗತ ವರ್ಷ ದಲ್ಲಿ ಸಮಿತಿಯು ಹಮ್ಮಿಕೊಂಡ   ಕಾರ್ಯಚಟುವಟಿಕೆ ಗಳ ವಿವರಗಳನ್ನು ಸಮಿತಿಯ ಗೌರವ ಕಾರ್ಯದರ್ಶಿ ಪ್ರವೀಣ್‌ ಕೆ. ಅಂಚನ್‌ ಸಮಿತಿಯ ಮುಂದಿಡುತ್ತಾ ನಮ್ಮ ಸಮಿತಿಯ ಪ್ರತಿಯೊಂದು ಕಾರ್ಯಚಟುವಟಿಕೆಗಳು ಬ್ರಹ್ಮಶ್ರೀ ನಾರಾಯಣ ಗುರುಗಳ  ವಿದ್ಯೆಯಿಂದ ಜ್ಞಾನೋದಯ ಹಾಗೂ ಸಂಘಟನೆಯಿಂದ ಶಕ್ತಿ ಎನ್ನುವ ಮೂಲ ಮಂತ್ರದ ಆಧಾರದಲ್ಲಿಯೇ ನಡೆಯುತ್ತದೆ ಎಂದರು.

ಗೌರವ ಕೋಶಾಧಿಕಾರಿ ವಿಜಯ ಪೂಜಾರಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕುಸುಮಾ ಆರ್‌. ಸಾಲ್ಯಾನ್‌ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ  ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸಮ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ  ಧನಸಹಾಯ ನೀಡಲಾಯಿತು. ಸಂಸ್ಥೆಯ ಕಾರ್ಯಕ್ರಮಗಳಿಗೆ ನೆರವು ನೀಡಿ ಸಹಕರಿಸಿದ ದಾನಿಗಳನ್ನು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.  ಮಮತಾ ಪಿ. ಅಂಚನ್‌ ಸ್ವಾಗತಿಸಿದರು. ನವೀನ್‌ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.  ಮನೋರಂಜನೆಯ ಅಂಗವಾಗಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

Trending videos

Back to Top