CONNECT WITH US  

ಬಿಲ್ಲವರ ಅಸೋಸಿಯೇಶನ್‌  ಡೊಂಬಿವಲಿ: ದೇವರಾಜ್‌ ಪೂಜಾರಿ ಪುನರಾಯ್ಕೆ

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌  ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ 2018-2021ರ ನೂತನ ಕಾರ್ಯಕಾರಿ ಸಮಿತಿಯ ರಚನೆ ಕಾರ್ಯಕ್ರಮವು ಆ. 12ರಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ನೂತನ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪುರೋಹಿತ ಐತಪ್ಪ ಸುವರ್ಣರು ಗುರುಪೂಜೆಗೈದ ಅನಂತರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶಂಕರ ಡಿ. ಪೂಜಾರಿ, ಹರೀಶ್‌ ಜಿ. ಆಮೀನ್‌, ದಯಾನಂದ ಆರ್‌. ಪೂಜಾರಿ ಹಾಗೂ ಶ್ರೀನಿವಾಸ ಆರ್‌. ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್‌ ಶಾಂತಿ,  ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ , ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಜಯಂತಿ ವಿ. ಉÇÉಾಳ್‌ ಹಾಗೂ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದೇವರಾಜ್‌ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷ  ದೇವರಾಜ್‌ ಪೂಜಾರಿ ಅವರು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್‌ ಶಾಂತಿ ಅತಿಥಿಗಳನ್ನು ಪರಿಚಯಿಸಿದರು. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದೇವರಾಜ್‌ ಪೂಜಾರಿ ನೂತನ ಅಧ್ಯಕ್ಷ  ಚಂದ್ರಶೇಖರ  ಪೂಜಾರಿ ಅವರನ್ನು ಗೌರವಿಸಿ ಅಭಿನಂದಿಸಿದರು. ಗೌರವ ಕಾರ್ಯದರ್ಶಿ ಪುರಂದರ ಪೂಜಾರಿ ಕಳೆದ ಮೂರು ವರ್ಷದ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.

ಬಿಲ್ಲವರ ಅಸೋಸಿಯೇಶನ್‌ ಗೌರವ  ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿಯವರು ನೂತನ ಸಮಿತಿಯ ಯಾದಿಯನ್ನು ವಾಚಿಸಿ, ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 

ಗೌರವ  ಕಾರ್ಯಾಧ್ಯಕ್ಷರಾಗಿ ಸಿ. ಎನ್‌. ಕರ್ಕೇರ, ಕಾರ್ಯಾಧ್ಯಕ್ಷರಾಗಿ ದೇವರಾಜ್‌ ಪೂಜಾರಿ, ಉಪ ಕಾರ್ಯಾಧ್ಯಕ್ಷರಾಗಿ  ಚಂದ್ರಹಾಸ್‌ ಎಸ್‌. ಪಾಲನ್‌ ಹಾಗೂ ಶ್ರೀಧರ ಬಿ. ಆಮೀನ್‌, ಗೌರವ  ಕಾರ್ಯದರ್ಶಿಯಾಗಿ ಪುರಂದರ ಪೂಜಾರಿ, ಸಹ ಕಾರ್ಯದರ್ಶಿಯಾಗಿ  ವಿಟuಲ್‌ ಪಿ. ಆಮೀನ್‌, ಗೌರವ ಕೋಶಾಧಿಕಾರಿಯಾಗಿ  ಸುನಿಲ್‌ ಸಿ. ಸಾಲ್ಯಾನ್‌, ಜತೆ ಕೋಶಾಧಿಕಾರಿಯಾಗಿ ರಾಜೇಶ್‌ ಸಿ. ಕೋಟ್ಯಾನ್‌ ಅವರು ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ, ಆನಂದ್‌ ಡಿ. ಪೂಜಾರಿ, ರವಿ ಎಸ್‌. ಪೂಜಾರಿ, ಮಂಜಪ್ಪ ಪೂಜಾರಿ, ತಿಲಕ್‌ ಕುಮಾರ್‌ ಸನೀಲ್‌, ನವೀಶ್‌ ಆಮೀನ್‌, ಸಚಿನ್‌ ಜಿ. ಪೂಜಾರಿ, ಗುಣವತಿ ಎಸ್‌. ಪೂಜಾರಿ, ಸುಲೋಚನಾ ಜೆ. ಪೂಜಾರಿ ಆಯ್ಕೆಯಾದರು.

ವಿಶೇಷ ಆಮಂತ್ರಿತರುಗಳಾಗಿ ಜಯರಾಮ್‌ ಎಂ. ಕುಕ್ಯಾನ್‌, ಸೋಮನಾಥ್‌ ಈ. ಪೂಜಾರಿ, ರಾಜೇಶ್‌ ಎಸ್‌ ಕೋಟ್ಯಾನ್‌, ಲಲಿತ್‌ ಚಂದ್ರ ಸುವರ್ಣ, ನಿತ್ಯಾನಂದ್‌ ಜತ್ತನ್‌, ಮೋಹನ್‌ ಜಿ. ಸಾಲ್ಯಾನ್‌, ಈಶ್ವರ್‌ ಕೋಟ್ಯಾನ್‌, ವಿನೋದಾ  ಜೆ. ಪೂಜಾರಿ, ವಸಂತಿ ಜೆ. ಆಮೀನ್‌, ಸೌಮ್ಯಾ ಎಸ್‌. ಸುವರ್ಣ, ಯುವಾಭ್ಯುದಯ ಸಮಿತಿಯ ಪ್ರತಿನಿಧಿಗಳಾಗಿ ನವೀನ್‌ ಕೆ. ಪೂಜಾರಿ, ರಿಕಿತಾ ಆರ್‌. ಸನಿಲ…, ಭಾವಿಕಾ  ವಿ. ಪೂಜಾರಿ, ಸುಮಿತ್‌ ಪೂಜಾರಿ, ರೋಶನ್‌ ಪೂಜಾರಿ ಅವರು ನೇಮಕಗೊಂಡರು.

ದೇವರಾಜ್‌ ಪೂಜಾರಿ ಅವರು ಮಾತನಾಡಿ, ಕಳೆದ ಮೂರು ವರ್ಷ ಸಹಕಾರ ನೀಡಿದ ಎÇÉಾ ಸಮಾಜ ಬಾಂದವರಿಗೆ ತನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮುಂದಿನ ದಿನಗಳಲ್ಲೂ ಎಲ್ಲರ ಸಹಕಾರ ಕೋರಿದರು.  

ಮಾಜಿ ಕಾರ್ಯಾಧ್ಯಕ್ಷ  ರವಿ ಎಸ್‌. ಸನಿಲ್‌ ಮಾತನಾಡಿ, ಎಲ್ಲರೂ ಸಮಿತಿಯಲ್ಲಿ ಇದ್ದು ಕೆಲಸ ಮಾಡುತ್ತಾರೆ, ಆದರೆ ನಾನು ಸಮಿತಿಯಲ್ಲಿ ಇಲ್ಲದೆ ಹಿಂದಿನ ಹಾಗೆಯೇ ಮುಂದೆಯೂ ಬಿಲ್ಲವರ ಅಸೋಸಿಯೇಶನ್‌ಗೆ ಹಾಗೂ ಸಮಾಜ ಭಾಂದವರ ಒಳಿತಿಗಾಗಿ ಕೆಲಸ ಮಾಡುತ್ತೇನೆ ಹಾಗೂ ನನ್ನ ಸಹಕಾರ ಸದಾ ಇರುತ್ತದೆ ಎಂದರು. ಜಯಂತಿ ಉÇÉಾಳ್‌ ಮಾತನಾಡಿ ಶುಭಹಾರೈಸಿದರು.

ಚಂದ್ರಶೇಖರ ಪೂಜಾರಿ ಮಾತ ನಾಡಿ,  ದೇವರಾಜ್‌ ಪೂಜಾರಿಯವರ ನೇತೃತ್ವದಲ್ಲಿ ಡೊಂಬಿವಲಿ ಸ್ಥಳೀಯ ಸಮಿತಿ ಸಮಾಜ ಬಾಂಧವರೊಡಗೂಡಿ ಜನಹಿತ ಕಾರ್ಯಕ್ರಮಗಳನ್ನು ಮಾಡು ವಂತಾಗಲಿ ಎಂದು ನುಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್‌ ಶಾಂತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Trending videos

Back to Top