CONNECT WITH US  

ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ: ಪುಣೆ ಶಾಖೆ ಆರಂಭ

ಪುಣೆ: ಕುಲಾಲ ಸಂಘ ಮುಂಬಯಿ ಪ್ರಾಯೋಜಿತ  ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಲಿಮಿಟೆಡ್‌ ಮುಂಬಯಿ ಇದರ   6 ನೇ ನೂತನ ಶಾಖೆಯು  ಕಾತ್ರಜ್‌ನ  ದತ್ತನಗರ -ಅಂಬೆಗೌಂವ್‌ ಬುದ್ರುಕ್‌ ನಲ್ಲಿಯ ಥಾಟೆ ಕಾಂಪ್ಲೆಕ್ಸ್‌ನ ಶಾಪ್‌ ನಂಬರ್‌ 8/9, ಮೊದಲ ಮಹಡಿಯಲ್ಲಿ ಡಿ. 2 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾಲನೆಗೊಂಡಿತು.

ಬೆಳಗ್ಗೆ  8 ರಿಂದ ಕಾತ್ರಜ್‌ ಶ್ರೀ  ಅಯ್ಯಪ್ಪ ದೇವಸ್ಥಾನದ ಪ್ರಧಾನ ಅರ್ಚಕರಾದ ಹರೀಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಗಣಹೋಮ ಹಾಗು ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿತು. ಆನಂತರ ಸೊಸೈಟಿಯ ಎÇÉಾ ವ್ಯವಹಾರ ವಿಭಾಗಗಳ ಕೌಂಟರ್‌ಗಳ  ಪೂಜೆಯನ್ನು ನೆರವೇರಿಸಿದರು. ಪುಣೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಹರೀಶ್‌ ಕುಲಾಲ್‌ ದಂಪತಿ ಪೂಜಾ ಕಾರ್ಯಕ್ರಮದ ಯಜಮಾನತ್ವ ವಹಿಸಿ ಸಹಕರಿಸಿದರು.

ಧಾರ್ಮಿಕ ಪೂಜಾ  ಕಾರ್ಯಕ್ರಮದ ನಂತರ ಶಾಖೆಯ ಕಚೇರಿ, ಕಂಪ್ಯೂಟರ್‌ ವಿಭಾಗ  ಮತ್ತು ನಗದು  ಸೇಫ್‌ ಲಾಕರ್‌  ವಿಭಾಗಗಳಿಗೆ  ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಲಿಮಿಟೆಡ್‌ ಮುಂಬಯಿ ಇದರ ಕಾರ್ಯಾಧ್ಯಕ್ಷ ಗಿರೀಶ್‌ ಸಾಲ್ಯಾನ್‌, ಕುಲಾಲ ಸಂಘ ಮುಂಬಯಿ ಅಧ್ಯಕ್ಷ, ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಗೌರವ ಕಾರ್ಯದರ್ಶಿ ಪಿ. ದೇವದಾಸ್‌ ಎಲ್‌. ಕುಲಾಲ…, ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಮಾಜಿ ಕಾರ್ಯಾಧ್ಯಕ್ಷ ಎನ್‌. ಜಿ. ಮೂಲ್ಯ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಪಾಲ್ಗೊಂಡ  ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ ಬೆಟ್ಟು, ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೋಟೆಲಿಯರ್ಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ ಅವರು ಕ್ರಮವಾಗಿ  ರಿಬ್ಬನ್‌ ಕತ್ತರಿಸಿ ಚಾಲನೆ ನೀಡಿದರು.

ಗಿರೀಶ್‌ ಸಾಲ್ಯಾನ್‌ ಅವರ  ಅಧ್ಯಕ್ಷತೆಯಲ್ಲಿ  ನಡೆದ   ಸಭಾ ಕಾರ್ಯಕ್ರಮದಲ್ಲಿ   ಮುಖ್ಯ ಅಥಿತಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್‌  ಕುಲಾಲ್‌, ಪುಣೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಹರೀಶ್‌ ಕುಲಾಲ್‌ ಮುಂಡ್ಕೂರು, ಪುಣೆ ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್‌ ಡಿ. ಶೆಟ್ಟಿ,  ಪುಣೆ ಬಿಲ್ಲವ ಸಮಾಜ ಸೇವಾ  ಸಂಘದ ಅಧ್ಯಕ್ಷ ಶೇಖರ್‌ ಪೂಜಾರಿ, ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೋಟೆಲಿಯರ್ಸ್‌ ಅಸೋಸಿಯೇಶನ್‌ನ ಉಪಾಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ, ಪುಣೆ ಕುಲಾಲ ಸಂಘದ ಗೌರವಾಧ್ಯಕ್ಷ ವಿಶ್ವನಾಥ್‌ ಉಡುಪಿ, ಪಿಂಪ್ರಿ-ಚಿಂಚಾÌಡ್‌ ಕುಲಾಲ ಸಂಘದ ಅಧ್ಯಕ್ಷ ಅಪ್ಪು ಮೂಲ್ಯ, ಜ್ಯೋತಿ ಕೋ. ಆಪರೇಟಿವ್‌ ಸೊಸೈಟಿಯ ಉಪ ಕಾರ್ಯಾಧ್ಯಕ್ಷ ಶೇಖರ್‌ ಮೂಲ್ಯ, ಪುಣೆ ದೇವಾಡಿಗ ಸಂಘದ  ಅಧ್ಯಕ್ಷ ನಾರಾಯಣ  ದೇವಾಡಿಗ, ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್‌, ಮುಂಬಯಿ ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ, ಅಮೂಲ್ಯ ಮಾಸಿಕದ ಸಂಪಾದಕ ಶಂಕರ್‌ ಮೂಲ್ಯ ಅವರು  ಉಪಸ್ಥಿತರಿದ್ದರು.

ಪುಣೆಯಲ್ಲಿ ಕಾರ್ಯಾರಂಭ ಪ್ರಾರಂಭಿಸಿರುವ   ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಲಿ. ಈ ಧಾರ್ಮಿಕ ಮತ್ತು ಸಭಾ ಕಾರ್ಯಕ್ರಮಕ್ಕೆ ಪುಣೆ  ಮುಂಬಯಿಯ ಕುಲಾಲ ಸಮಾಜದ  ಭಾಂದವರು, ಮತ್ತಿತರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೂತನ ಶಾಖೆಗೆ ಶುಭಕೋರಿದರು. ನೂರಾರು ಮಂದಿ ಪಾಲ್ಗೊಂಡು ಸೊಸೈಟಿಯ ಸದಸ್ಯರಾಗಿ ಹೆಸರು  ನೋಂದಾಯಿಸಿಕೊಂಡರು. ದೇವದಾಸ್‌ ಕುಲಾಲ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ


Trending videos

Back to Top