ಸಾಂತಾಕ್ರೂಜ್‌ ಕನ್ನಡ ಸಂಘದ ವಜ್ರಮಹೋತ್ಸವಕ್ಕೆ ಅದ್ದೂರಿ ಚಾಲನೆ


Team Udayavani, Dec 18, 2018, 4:56 PM IST

1612mum09.jpg

ಮುಂಬಯಿ: ನಗರಕ್ಕೆ ಬಂದು ಅರ್ವತ್ತು ದಾಟಿದ ನನಗೆ ಕನ್ನಡದ ಕಹಳೆಯನ್ನು ಕೇಳಿ, ನೋಡಿ ಬಹಳ ಸಂತೋಷವಾಯಿತು. ಆರಂಭದಿಂದಲೇ ವಿವಿಧ ಸಂಘ-ಸಂಸ್ಥೆಗಳ ಬೆಳವಣಿಗೆಯನ್ನು ಕಂಡಿರುವ ನನಗೆ ಸಾರ್ಥಕತೆಯ ಭಾವನೆಯಿದೆ.  ಅದೇ ನನ್ನನ್ನು  ಇಂತಹ ಆನಂದೋತ್ಸವಕ್ಕೆ ಕರೆ ತಂದಿದೆ. ಕನ್ನಡ ಕಹಳೆಯನ್ನು ಮೊಳಗಿಸುತ್ತಾ ನಾಡು-ನುಡಿಯ ಸೇವೆಗೈಯುತ್ತಿರುವ ಸಾಂತಾಕ್ರೂಜ್‌ ಕನ್ನಡ ಸಂಘದ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೆಮ್ಮೆಯಾಗುತ್ತಿದೆ. ಸಮಾಜಕ್ಕೆ ಹಾನಿಕರವಲ್ಲದೆ, ಶುಭವಾಗುವ ಕಾಯಕಗಳನ್ನು ಮಾಡಿದಾಗಲೇ ಸಂಘ-ಸಂಸ್ಥೆಗಳ ಹುಟ್ಟು ಸಾರ್ಥಕವಾಗುವುದು. ಅದ್ದರಿಂದ ಸಾಧನೆಯ ಮೂಲಕ ಬೇರೆಯವರು ನಮ್ಮ ಮೇಲೆ ದೃಷ್ಟಿ ಹಾಯಿಸುವ  ಕೆಲಸವನ್ನು  ನಾವು ಮಾಡಬೇಕು.  ಅಂತಹ ಸಾಧನೆಯ ಸೇವೆ ಎಂದಿಗೂ ಶಾಶ್ವತವಾಗಿರುತ್ತದೆ ಎಂದು ಹಿರಿಯ ಸಾಹಿತಿ ಡಾ|  ಸುನೀತಾ ಎಂ. ಶೆಟ್ಟಿ ಅವರು ಅಭಿಪ್ರಾಯಿಸಿದರು.

ಡಿ. 16ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ  ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಕನ್ನಡ ಸಂಘ ಸಾಂತಾಕ್ರೂಜ್‌ ಇದರ ವಜ್ರಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘದ ನಾಡು-ನುಡಿ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ,  ಬುದ್ಧಿಜೀವಿ ಜನ್ಮಕ್ಕೆ ಬಂದ ನಂತರ ಏನಾದರೂ ಮಾಡಬೇಕು, ಸಾಧಿಸಬೇಕು. ಒಂದು  ಸಂಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆ ಆಗಿದ್ದಲ್ಲಿ ಸಂಸ್ಥೆಗಳು ಬಾಳುತ್ತಾ 25-50 ವರ್ಷಗಳತ್ತ ಸಾಗುತ್ತವೆ.  60 ತುಂಬುವಾಗ ಮೈದುಂಬಿಕೊಳ್ಳುತ್ತವೆ. ಆಗ ಸಾಹಿತ್ಯಕ್ಕೆ, ಭಾಷೆಗೆ ಮತ್ತು ಸಂಸ್ಕೃತಿಗೆ  ಏನಾದರೂ ಮಾಡಿದರೆ ಆ ಸಂಸ್ಥೆಯ ಸೇವೆ ಸಾರ್ಥಕವಾಗುವುದು. ಈ ಸಂಘ ಇವಕ್ಕೆಲ್ಲ ಅರ್ಹವಾಗಿದೆ. ಎಲ್‌. ವಿ. ಅಮೀನ್‌ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಆರಂಭದಿಂದ ಸಂಘದ ಹಿತಕ್ಕೆ ದುಡಿದ ಎಲ್ಲರನ್ನೂ ಅಭಿನಂದಿಸುತ್ತಿದ್ದೇನೆ. ಭೂತಕಾಲ ನಿರ್ಲಕ್ಷಿಸಿ ಬೊಗಸೆಯಲ್ಲಿ ವರ್ತಮಾನ ಇಟ್ಟುಕೊಳ್ಳಬೇಕು. ಆಗಲೇ ಭೂತಕಾಲಕ್ಕೆ ಅನುವಾಗುವುದು. ಭಾಷಾ ಸಂಸ್ಥೆಗಳನ್ನು ಕಟ್ಟುವುದರಿಂದ ಸಂಸ್ಕಾರ-ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ. ಋಣಾತ್ಮಕ ಭಾವವೇ ಸಂಸ್ಥೆಗಳ ಕರ್ತವ್ಯವಾಗಬೇಕು ಎಂದು ನುಡಿದರು.

ಕನ್ನಡ ಸಂಘ ಸಾಂತಾಕ್ರೂಜ್‌ ಅಧ್ಯಕ್ಷ ಎಲ್‌. ವಿ. ಅಮೀನ್‌ ಮತ್ತು ಸುಧಾ ಎಲ್‌. ವಿ. ಅಮೀನ್‌ ದಂಪತಿ ದೀಪ ಪ್ರಜ್ವಲಿಸಿ ವಜ್ರ ಮಹೋತ್ಸವಕ್ಕೆ ಚಾಲನೆ ನೀಡಿದರು. ಕೃಷ್ಣ ಪ್ಯಾಲೇಸ್‌ ಹೊಟೇಲ್‌ ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ. ಶೆಟ್ಟಿ ಅವರು ತೆಂಗಿನಗರಿಯನ್ನು ಅರಳಿಸಿ ಕಳಸೆಯಲ್ಲಿರಿಸಿ ಶುಭಹಾರೈಸಿದರು.

ವಾಸ್ತುತಜ್ಞ ಅಶೋಕ್‌ ಪುರೋಹಿತ್‌ ಅವರು ಶುಭನುಡಿಯನ್ನಿತ್ತು,  ಅರ್ವತ್ತೂಂದರತ್ತ ಸಾಗುವ ಈ ಪ್ರಾತಃಕಾಲದಲ್ಲಿ 60 ದೀಪಗಳನ್ನು ಬೆಳಗಿಸಿ ಉದ್ಘಾಟಿಸಿರುವುದೇ ಇತಿಹಾಸ ಮತ್ತು ಅಪರೂಪದ ದೃಶ್ಯ. ಸಂಘದ ನೇತೃತ್ವ ವಹಿಸಿರುವ ಎಲ್‌. ವಿ. ಅಮೀನ್‌  ಮತ್ತು ಸರ್ವರಿಗೂ ಅಭಿನಂದನೆಗಳು. ಧಾರ್ಮಿಕ ಮತ್ತು ದಾನ ನೀಡುವ  ಕಾರ್ಯಗಳ ಶುಭಾರಂಭ ಸಂಸ್ಥೆಯಿಂದಲೇ ನಡೆಯಬೇಕು. ಕನ್ನಡ ಸಂಘ ಸಾಂತಾಕ್ರೂಜ್‌ ಕೂಡಾ ಇದಕ್ಕೆ ಪೂರಕವಾಗಿ ಪೋಷಕ ಸಂಸ್ಥೆಯಾಗಲಿ.  ಮುಂದೆ ಅನೇಕಾನೇಕ ಸಮಾಜಪರ ಕಾರ್ಯಕ್ರಮಗಳು ನಡೆದು ಸಮಾಜಕ್ಕೆ ಹಿತವಾಗಲಿ ಎಂದು ನುಡಿದರು.
ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ನಿಕಟಪೂರ್ವಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಮಾತನಾಡಿ,ಶ್ರೀ ನಿತ್ಯಾನಂದ ಸ್ವಾಮೀಜಿಯವರ ಆರಾಧನೆಯಿಂದ ಆರಂಭವಾದ ವಜ್ರಮಹೋತ್ಸವ ಪರಿಪೂ ರ್ಣತೆ ಕಂಡಿದೆ. ಮುಂಬಯಿಯ ಸಾಮಾಜಿಕ ಸೇವೆಯಲ್ಲಿ  ಮುನ್ನಡೆದು ತನ್ನದೇ ಪ್ರತಿಷ್ಠೆಯನ್ನು ಸಂಘವು ರೂಪಿಸಿದೆ. ಈ  ಕನ್ನಡ ಸಂಘದಲ್ಲಿ  ಸೇವೆ ಮಾಡುವ ಭಾಗ್ಯವನ್ನು ಎಲ್‌. ಅಮೀನ್‌ ಅವರು ನೀಡಿದ್ದಾರೆ. ಜಾತಿ-ಮತ-ಧರ್ಮ ಮೆರೆತು ಅತ್ಮೀಯ ವಾದ ವಾತಾವರಣದೊಂದಿಗೆ ಸಾಗುವ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆದು ಎಲ್‌. ವಿ. ಅಮೀನ್‌ ಅವರ ನೇತೃತ್ವದಲ್ಲೇ   ಶತಸಂಭ್ರಮ ಕಾಣುವಂತಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಉದ್ಯಮಿ ಕೃಪಾ ಭೋಜರಾಜ್‌ ಕುಳಾಯಿ, ಭಾರತ್‌ ಬ್ಯಾಂಕಿನ ನಿರ್ದೇಶಕರಾದ ದಾಮೋದರ ಸಿ. ಕುಂದರ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಬಿಎಸ್‌ಕೆಬಿ ಅಸೋಸಿಯೇಶನ್‌ನ ವಿಶ್ವಸ್ತ ಸದಸ್ಯ ಬಿ. ಆರ್‌. ರಾವ್‌, ಅವೆನ್ಯೂ ಹೊಟೇಲ್‌ ಸಮೂಹದ ನಿರ್ದೇಶಕ ರಘುರಾಮ ಕೆ. ಶೆಟ್ಟಿ, ಶ್ರೀಮತಿ ಶಾರದಾ ಭಾಸ್ಕರ್‌ ಶೆಟ್ಟಿ ಮೆಮೋರಿಯಲ್‌ ಟ್ರಸ್ಟ್‌ ಕಲ್ಯಾಣ್‌ ಇದರ ಸಂಸ್ಥಾಪಕಾಧ್ಯಕ್ಷ ನಡೊÂàಡಿಗುತ್ತು ಭಾಸ್ಕರ್‌ ಎಸ್‌. ಶೆಟ್ಟಿ, ಉದ್ಯಮಿಗಳಾದ ವಾಮನ ಡಿ. ಪೂಜಾರಿ, ಗ್ರೆಗೋರಿ ಡಿ’ಅಲ್ಮೇಡಾ, ಮಂಜುನಾಥ ಬನ್ನೂರು, ಪ್ರಕಾಶ್‌ ಶೆಟ್ಟಿ ಕಲೀನಾ, ಸುರೇಂದ್ರ ಎ. ಪೂಜಾರಿ, ಸುರೇಶ್‌ ಆರ್‌. ಕಾಂಚನ್‌, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಮಂಗಳೂರು ಉಪಾಧ್ಯಕ್ಷ ಅಶೋಕ್‌ ಆರ್‌. ಶೆಟ್ಟಿ ಪೆರ್ಮುದೆ, ಲೆಕ್ಕಪರಿಶೋಧಕರಾದ ಸಿಎ ಅಶ್ವಜಿತ್‌ ಹೆಜಮಾಡಿ, ಸಿಎ ಜಗದೀಶ್‌ ಶೆಟ್ಟಿ, ಆಹಾರ್‌ ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಆಳ್ವ, ವಸಾಯಿ ಕನ್ನಡ ಸಂಘ ಅಧ್ಯಕ್ಷ ಒ. ಪಿ. ಪೂಜಾರಿ, ಶ್ರೀ  ಕಟೀಲು ಯಕ್ಷಕಲಾ ವೇದಿಕೆ ವಸಾಯಿ ಕಾರ್ಯಾಧ್ಯಕ್ಷ ಪಾಂಡು ಎಲ್‌. ಶೆಟ್ಟಿ, ರಜಕ ಸಂಘ ದಹಿಸರ್‌ ವಿರಾರ್‌ ವಲಯದ ಮಾಜಿ ಕಾರ್ಯಾಧ್ಯಕ್ಷ ದೇವೆಂದ್ರ ಬುನ್ನಾನ್‌, ಗೋಪಿ ಪೂಜಾರಿ ಸೇರಿದಂತೆ ಸಂಘದ ಉಪಾಧ್ಯಾಕ್ಷ ಗುಣಪಾಲ ಶೆಟ್ಟಿ ಐಕಳ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್‌. ಶೆಟ್ಟಿ, ಗೌರವ  ಕೋಶಾಧಿಕಾರಿ ಸುಧಾಕರ್‌ ಉಚ್ಚಿಲ್‌, ಜತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್‌, ಜತೆ ಕೋಶಾಧಿಕಾರಿ ದಿನೇಶ್‌ ಅಮೀನ್‌, ವಜ್ರಮಹೋತ್ಸವ ಸಮಿತಿ¿ ಗೌರವಾಧ್ಯಕ್ಷರಾದ ನಾರಾಯಣ ಎಸ್‌. ಶೆಟ್ಟಿ ಮತ್ತು ಎನ್‌. ಎಂ. ಸನಿಲ್‌, ಕಾರ್ಯಾಧ್ಯಕ್ಷ ಬಿ. ಆರ್‌. ಪೂಂಜ, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್‌, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂದ ಮತ್ತಿತರರು ಜತೆಗೂಡಿ ಏಕಕಾಲಕ್ಕೆ ಅರ್ವತ್ತು ದೀಪಗಳನ್ನು ಹಚ್ಚಿ ಸಮಾರಂಭಕ್ಕೆ ಚಾಲನೆ ನೀಡಿದರು.
ಕು| ಶ್ರದ್ಧಾ ಪೂಜಾರಿ ಪ್ರಾರ್ಥನೆಗೈದರು. ಪದ್ಮನಾಭ ಸಸಿಹಿತ್ಲು ರಚಿತ ವಜ್ರ ಮಹೋತ್ಸವದ ಇಂಪಾದ ಹಾಡಿನೊಂದಿಗೆ ಸಮಾರಂಭವು ವಿಧ್ಯುಕ್ತವಾಗಿ ಚಾಲನೆಗೊಂಡಿತು. ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ರಂಗಕಲಾವಿದ  ಅಶೋಕ್‌ ಪಕ್ಕಳ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್‌ ಹೆಜ್ಮಾಡಿ ಸ್ವಾಗತಿಸಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕ್ರೇಜ್‌ ಪ್ಲಾನೆಟ್‌ ಪ್ರೊಡಕ್ಷನ್ಸ್‌ ಅವರ ಸಾರಥ್ಯದಲ್ಲಿ ಲತೇಶ್‌ ಎಂ. ಪೂಜಾರಿ ಅವರ  ನಿರ್ದೇಶನದಲ್ಲಿ ಸಂಘದ ಸದಸ್ಯರು, ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು.
 
ಕು| ನಿಖೀತಾ ಸದಾನಂದ ಅಮೀನ್‌ ತಂಡದಿಂದ ಸಾಂಸ್ಕೃತಿಕ ವೈಭವ ನಡೆಯಿತು.  ಶ್ರೀ ದುರ್ಗಾ ಪರಮೇಶ್ವರಿ ಕೃಪಾಪೋಷಿತ  ಯಕ್ಷಗಾನ ಕಲಾ ಮಿತ್ರ ಮಂಡಳಿ ಸಾಕಿನಾಕಾ ಇದರ ಬಾಲಕಲಾವಿದರಿಂದ “ವೀರ ಅಭಿಮನ್ಯು’ ಯಕ್ಷಗಾನ ಹಾಗೂ ರವಿಕುಮಾರ್‌ ಕಡೆಕಾರು ರಚಿತ “ಪುರ್ಸೊತ್ತಿಜ್ಜಿ’ ತುಳು ನಾಟಕವನ್ನು ಕರುಣಾಕರ ಕೆ. ಕಾಪು ನಿರ್ದೇಶನದಲ್ಲಿ ಅಭಿನಯ ಮಂಟಪ ಮುಂಬಯಿ ಕಲಾವಿದರು ಪ್ರದರ್ಶಿಸಿದರು. ಕೃಷ್ಣರಾಜ್‌ ಶೆಟ್ಟಿ ಮುಂಡ್ಕೂರು ಸಾಂಸ್ಕೃತಿಕ  ಕಾರ್ಯಕ್ರಮ ನಿರ್ವಹಿಸಿದರು. 

 ಕನ್ನಡಾಭಿಮಾನಿ ದಿಗ್ಗಜರ ಅಭಯ ಹಸ್ತಗಳಿಂದ ವಜ್ರದೀಪ ಬೆಳಗಿಸಲು ಸರ್ವ ಕನ್ನಡಿಗರ ಸಹಯೋಗವೇ  ಕಾರಣವಾಗಿದೆ. ನನ್ನ ಸಾರಥ್ಯದ ಕಾಲಾವಧಿಯಲ್ಲಿ ಏಕಕಾಲಕ್ಕೆ 60 ಜ್ಯೋತಿಗಳನ್ನು ಬೆಳಗಿಸಿ ಸಂಘವು ವಜ್ರಮಹೋತ್ಸವ ಆಚರಿಸುತ್ತಿರುವುದು ನನ್ನ ಸೌಭಾಗ್ಯ ಎಂದೆಣಿಸಿದ್ದೇನೆ.  ಅಖಂಡ ವಜ್ರಮಹೋತ್ಸವ ಸಮಿತಿ ನನ್ನ ಜೊತೆಗಿದ್ದು ಪ್ರೋತ್ಸಾಹಿಸಿದ ಕಾರಣ ಈ ಸಡಗರ ವಿಭಿನ್ನವಾಗಿ ಮೂಡಿಬಂತು. ಸರ್ವರಿಗೂ ನಾನೂ ಕೃತಜ್ಞನಾಗಿರುವೆ. ಸಂಸ್ಥೆಯು ನಾಡು-ನುಡಿಯ ಬಗ್ಗೆ ಮಾಡಿರುವ ಸಾಧನೆಗೆ ಇಂದು ಪ್ರತಿಫಲ ದೊರೆತಿದೆ. ನಿಮ್ಮೆಲ್ಲರ ಸಹಕಾರ ಇದೇ ರೀತಿಯಲ್ಲಿ   ಮುಂದುವರಿಯಲಿ .
       – ಎಲ್‌. ವಿ. ಅಮೀನ್‌, 
ಅಧ್ಯಕ್ಷರು, ಸಾಂತಾಕ್ರೂಜ್‌ ಕನ್ನಡ ಸಂಘ

ಏಕಕಾಲಕ್ಕೆ  60 ದೀಪ ಪ್ರಜ್ವಲನ
ವೇದಿಕೆಯಲ್ಲಿ ಕಂಗೊಳಿಸುತ್ತಿದ್ದ ಕನ್ನಡ ಕ್ರಾಂತಿಯ ರಥ, ಮುಂಭಾಗದಲ್ಲಿ ಶಿಸ್ತಿನ ಶಿಪಾಯಿಗಳಾಗಿ ನಿಂತ ಗಣ್ಯರು, ಪದಾಧಿಕಾರಿಗಳು ಏಕಕಾಲಕ್ಕೆ 60 ದೀಪಗಳನ್ನು ಬೆಳಗಿಸಿ ಕನ್ನಡದ ತೇರನ್ನೆಳೆದ ಸನ್ನಿವೇಶ ಅಭೂತಪೂರ್ವವಾಗಿತ್ತು. ಜಾತಿ, ಮತ, ಭೇದವನ್ನು ಮರೆತು ನಾವೆಲ್ಲರೂ ಕನ್ನಡಿಗರು ಎಂಬ  ಸಾಮರಸ್ಯವನ್ನು ಹೊಂದಿ ಕನ್ನಡದ ದೀಪಗಳನ್ನು ಹಚ್ಚುತ್ತಾ ಉಪಸ್ಥಿತರಿದ್ದ ಸಾವಿರಾರು ಕನ್ನಡದ ಮನಸ್ಸುಗಳಿಗೆ ಮುದನೀಡಿದ ಪರಿಯಂತು  ರಥೋತ್ಸವದ ಕಳೆಯನ್ನು ಬಿಂಬಿಸಿತು. ನೆರೆದ ಕನ್ನಡಾಭಿಮಾನಿಗಳು ಬೆರಗಾಗುವಂತೆ ಮಾಡಿದ ಸಂಘದ ಈ ವಿನೂತನ ಕಾರ್ಯಕ್ರಮ ನೂತನ ದಾಖಲೆಗೆ ಸಾಕ್ಷಿಯಾಯಿತು. 

ಆದಿಯಲ್ಲಿ ಭವನದ ಆವರಣದಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿದ್ವಾನ್‌ ಅರವಿಂದ ಬನ್ನಿಂತ್ತಾಯ ಅವರು  ಪೂಜೆ ನೆರವೇರಿಸಿ ಪ್ರಸಾದವನ್ನಿತ್ತು ಹರಸಿದರು. ಬಳಿಕ ಮಂಗಳ ದೀಪದೊಂದಿಗೆ ಅತಿಥಿ-ಗಣ್ಯರನ್ನು  ವಾದ್ಯಘೋಷ, ಭಜನೆಯೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಮಧ್ಯಾಂತರದಲ್ಲಿ ಅತಿಥಿಗಳು ಸಂಘದ ಶಾಶ್ವತ ವಿದ್ಯಾನಿಧಿಗೆ ಸಹಕರಿಸಿದ  ದಾನಿಗಳನ್ನು ಗೌರವಿಸಿ ಅಭಿವಂದಿಸಿದರು.  ಸಾಕ್ಷ್ಯ ಚಿತ್ರದ ಮೂಲಕ ಸಂಘದ ಸಾಧನೆಯ ಬಗ್ಗೆ ಸ್ಥೂಲವಾದ ಮಾಹಿತಿ ಭಿತ್ತರಿಸಲಾಯಿತು.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.