CONNECT WITH US  

ಜೈಹಿಂದ್‌ ಸ್ಫೋರ್ಟ್ಸ್ ಕ್ಲಬ್‌ ಮುಂಬಯಿ 54ನೇ ವಾರ್ಷಿಕ  ಕ್ರೀಡಾಕೂಟ

ಆರ್‌. ಎನ್‌. ಉಚ್ಚಿಲ್‌ ಸ್ಮರಣಾರ್ಥ

ಮುಂಬಯಿ: ಜೈಹಿಂದ್‌ ನ್ಪೋರ್ಟ್ಸ್ ಕ್ಲಬ್‌ ಮುಂಬಯಿ ವತಿಯಿಂದ 54 ನೇ ವಾರ್ಷಿಕ ಆರ್‌. ಎನ್‌. ಉಚ್ಚಿಲ್‌ ಮೆಮೋರಿಯಲ್‌ ಕ್ರೀಡಾಕೂಟವು ಇತ್ತೀಚೆಗೆ ಚರ್ಚ್‌ಗೇಟ್‌ ಪರಿಸರದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿ ಯೇಶನ್‌ ಸಭಾಗೃಹದಲ್ಲಿ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳೊಂದಿಗೆ ನಡೆಯಿತು.

ಜೈಹಿಂದ್‌ ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ನಾರಾಯಣ ಉದ್ಯಾವರ ಅವರ ಮುಂದಾಳತ್ವದಲ್ಲಿ ನೆರವೇರಿದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಜೈಹಿಂದ್‌ ನ್ಪೋರ್ಟ್ಸ್ ಕ್ಲಬ್‌ನ ಹಿರಿಯ ಸದಸ್ಯರುಗಳಾದ ಶಕುಂತಳಾ ಉಚ್ಚಿಲ್‌, ಸಿ. ಕೆ. ಉದ್ಯಾವರ, ಕೆ. ಡಿ. ಉಚ್ಚಿಲ್‌ ಅವರು ಭಾಗವಹಿಸಿದ್ದರು.

ಕ್ರೀಡಾಕೂಟದಲ್ಲಿ 2018 ನೇ ಸಾಲಿನ ಆರ್‌. ಎನ್‌. ಉಚ್ಚಿಲ್‌ ಸಂಸ್ಮರಣಾ ಪ್ರಶಸ್ತಿ ಯನ್ನು ಕೀರ್ತನ್‌ ಎಸ್‌. ಉಚ್ಚಿಲ್‌ ಅವರು ಪಡೆದುಕೊಂಡರು. ಅದೇ ರೀತಿ 18 ರ ವಯೋಮಿತಿಯ ಹುಡುಗರ 400 ಮೀ. ಓಟದಲ್ಲಿ ಆನಂದ್‌ ಅಂಬು ಉದ್ಯಾವರ ಮೆಮೋರಿಯಲ್‌ ಟ್ರೋಫಿಯನ್ನು ಪ್ರಜ್ವಲ್‌ ಜೆ. ಉದ್ಯಾವರ ಅವರು ತನ್ನದಾಗಿಸಿಕೊಂಡರು.

15 ವರ್ಷದ ಬಾಲಕಿಯರ ಓಟದ ಸ್ಪರ್ಧೆಯಲ್ಲಿ ವಸಂತ್‌ ಉಚ್ಚಿಲ್‌ ಸಂಸ್ಮರಣಾ ಪ್ರಶಸ್ತಿಯನ್ನು ಪ್ರಾರ್ಥನಾ ಉಚ್ಚಿಲ್‌ ಸ್ವೀಕರಿಸಿದರು. ಪವನ್‌ ವೆಂಕಟರಮಣ ವಿಠಲ್‌ ಮೆಮೋರಿಯಲ್‌ 9 ವರ್ಷದ ಬಾಲಕರ ಓಟದ ಧ್ರುವ್‌ ಉಚ್ಚಿಲ್‌ ಮತ್ತು ಬಾಲಕಿಯರ ವಿಭಾಗದಲ್ಲಿ ಹಂಸಿನಿ ಆರ್‌. ಉಚ್ಚಿಲ್‌ ಪ್ರಶಸ್ತಿಯನ್ನು ಪಡೆದರು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು.

ಜೈಹಿಂದ್‌ ನ್ಪೋರ್ಟ್ಸ್ ಕ್ಲಬ್‌ ಮುಂಬಯಿ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ  ಸದಸ್ಯರು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Trending videos

Back to Top