ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಚಿತ್ರ ಸಂಕಥನ ಕಾರ್ಯಕ್ರಮ


Team Udayavani, Jan 23, 2019, 3:46 PM IST

9.jpg

ಮುಂಬಯಿ: ಕಲೆಗಾಗಿ ಕಲೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ಕಲಾವಿದ ಸರ್ವ ಕುತೂ ಹಲಿಯಾಗಿರಬೇಕು. ಸುತ್ತ ಲಿನ ಬದುಕನ್ನು ತೆರೆದ ಕಣ್ಣಿಂದ ನೋಡಿ ಬಣ್ಣ ಹಚ್ಚಿದರೆ ಒಳ್ಳೆಯ ಕಲಾಕೃತಿ ನಿರ್ಮಾಣವಾಗುತ್ತದೆ. ಕವಿ, ಸಾಹಿತಿ, ಚಿತ್ರಕಾರ ಯಾರೇ ಇರಲಿ ಆತ್ಮತƒಪ್ತಿಯಾಗುವಂತೆ ಕಾರ್ಯನಿರ್ವಹಿಸಬೇಕು. ಒಂದು ಬಗೆಯ ಧ್ಯಾನಸ್ಥ ಸ್ಥಿತಿ ಕಲಾವಿದನಿಗೆ ಅತೀ ಅಗತ್ಯ ಎಂಬುದಾಗಿ ಪ್ರಸಿದ್ಧ ಕಲಾವಿದ ದೇವುದಾಸ್‌ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಜ. 12 ರಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಆಯೋಜಿಸಿದ್ದ ವೃತ್ತಿ ಬದುಕಿನ ಐವತ್ತರ ಸಂಭ್ರಮ ಕಾರ್ಯಕ್ರಮ ಚಿತ್ರ ಸಂಕಥನದಲ್ಲಿ ಪಾಲ್ಗೊಂಡು ಮಾತನಾಡಿ,  ನಾನು ಕಾರ್ಮಿಕ ಕಲಾವಿದ. ಮುಂಬಯಿಯಲ್ಲಿ  ಬೆಳೆದ ನಾನು ಎಲ್ಲ ಕಷ್ಟ ನಷ್ಟಗಳನ್ನು ಕಂಡಿದ್ದೇನೆ. ಯಾವುದೇ ಕಲಾವಿದನಿಗೆ ಬೇಕಾದುದು ಸಹೃದಯ ಮನಸ್ಸುಗಳ ಸಹಕಾರ, ಪ್ರೋತ್ಸಾಹಕವಾಗಿದೆ  ಎಂದು ನುಡಿದು, ಜರ್ಮನ್‌ ಮೂಲದ ಕಂಪೆನಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾ ತಾನು ಕಲಾವಿದನಾಗಿ ಬೆಳೆದು ಬಂದ ಬಗೆಯನ್ನು ಅವರು ವಿವರಿಸಿದರು. ಇವತ್ತು ದೇಶ  ವಿದೇಶಗಳ ಪ್ರಸಿದ್ಧ ಗ್ಯಾಲರಿಗಳಲ್ಲಿ ನನ್ನ ಚಿತ್ರಗಳಿವೆ. ಪ್ರಸಿದ್ಧ ಕಲಾವಿದರಾದ ಕೆ. ಕೆ. ಹೆಬ್ಟಾರ್‌, ಹುಸೇನ್‌ ಅವರಿಂದ ತೊಡಗಿ ಎಲ್ಲ ಕಲಾವಿದರನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಕಲಾವಿದನಿಗೆ ಬದ್ಧತೆ ಬೇಕು ಎಂಬುದಾಗಿ ಚಿತ್ರಗಳನ್ನು ಅರ್ಥಮಾಡುವ ಪರಿಯನ್ನು ವಿವರಿಸಿದರು.

ದೇವುದಾಸ ಶೆಟ್ಟಿ ಅವರು ನಿಜವಾದ ಅರ್ಥದಲ್ಲಿ ಕಲೋಪಾಸಕರು. ಕಳೆದ ಐದು ದಶಕದಲ್ಲಿ ಅವರು ಬಣ್ಣದ ಲೋಕದಲ್ಲಿ ತಲ್ಲೀನರಾಗಿದ್ದಾರೆ. ಮುಂಬಯಿಯಲ್ಲಿ ನೆಲೆಸಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೆ. ಕೆ. ಹೆಬ್ಟಾರ, ಎನ್‌. ಸಿ. ದೇಸಾಯಿ ಅವರ ಸಾಲಿನಲ್ಲಿ ದೇವುದಾಸ ಶೆಟ್ಟಿ ಅವರ ಹೆಸರೂ ನಿಲ್ಲುತ್ತದೆ. ಕಲೆಯ ಹೆಸರಿನಲ್ಲಿ ಗಿಮಿಕ್‌ ಮಾಡುವುದನ್ನು ಅವರು ಸಹಿಸುವುದಿಲ್ಲ. ದೇವುದಾಸ ಶೆಟ್ಟಿ ಅವರದು ಹೋರಾಟದ ಬದುಕು. ತಮ್ಮನ್ನು ತಾವು ರೂಪಿಸಿಕೊಂಡು  ದೇಶ ವಿದೇಶಗಳಲ್ಲಿ ನೂರಾರು ಚಿತ್ರ ಕಲಾಪ್ರದರ್ಶನಗಳನ್ನು ಕಂಡಿರುವುದು ಸಾಮಾನ್ಯ ಸಂಗತಿಯಲ್ಲ. ನಮ್ಮಲ್ಲಿ ಕಲಾ ಸಾಹಿತ್ಯ ಕಡಿಮೆ. ತಮ್ಮ ಬಣ್ಣದ ಲೋಕದ ಒಳಹೊರಗನ್ನು ದೇವುದಾಸ ಶೆಟ್ಟಿ ಅವರು ಅಕ್ಷರರೂಪಕ್ಕಿಳಿಸಿದ್ದಾರೆ. ಅವರ ಚಿತ್ರಗಳನ್ನು ಅರ್ಥಮಾಡಿಕೊಳ್ಳಲು ಈ ಬರವಣಿಗೆ ಪೂರಕವಾಗಿದೆ. ಒಳ್ಳೆಯ ಕಲೆಗಾರನಿಗೆ ಇರಬೇಕಾದ ಬದ್ಧತೆ ಇರುವ ಅಪೂರ್ವ ಕಲಾವಿದ ದೇವುದಾಸ ಶೆಟ್ಟಿ ಎಂಬುವುದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು ದೇವುದಾಸ ಶೆಟ್ಟಿ ಅವರ ಕಲಾ ಸಾಧನೆಯನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಡಾ|  ಮಂಜುನಾಥ್‌, ಮಂಜುನಾಥಯ್ಯ, ಡಾ| ಮರಿಯಪ್ಪ ನಾಟೇಕರ್‌, ಗೋಪಾಲ ತ್ರಾಸಿ, ಡಾ| ಮಮತಾ ರಾವ್‌, ಮನೋಹರ ಕುಲಕರ್ಣಿ, ಮಿತ್ರಾ ವೆಂಕಟ್ರಾಜ್‌, ಬಿ. ಬಾಲಚಂದ್ರರಾವ್‌, ಶ್ಯಾಮಲಾ ಮಾಧವ್‌ ಮೊದಲಾದವರ ಪ್ರಶ್ನೆಗಳಿಗೆ ಉತ್ತರಿಸಿದ ದೇವುದಾಸ ಶೆಟ್ಟಿ ಅವರು ಕಲೆಯನ್ನು ಪ್ರೋತ್ಸಾಹಿಸುವ  ಪ್ರಯತ್ನ ಇನ್ನಷ್ಟು ನಡೆಯಬೇಕು. ಕನ್ನಡ ವಿಭಾಗ ಕಲಾವಿದರಿಗೂ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ನುಡಿದರು.

ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ| ವಿಶ್ವನಾಥ ಕಾರ್ನಾಡ್‌ ಹಾಗೂ ಕಲಾವಿದ ಜಯ ಸಾಲ್ಯಾನ್‌ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ದೇವುದಾಸ ಶೆಟ್ಟಿ ಅವರು ರಚಿಸಿದ ವಿವಿಧ ಚಿತ್ರಗಳನ್ನು ಪ್ರದರ್ಶಿಸಲಾಯಿತು. ನ್ಯಾಯಮೂರ್ತಿ ಜಸ್ಟೀಸ್‌ ಬಿ. ಎನ್‌. ಶ್ರೀಕೃಷ್ಣ, ಚಂದ್ರಶೇಖರ ಪಾಲೆತ್ತಾಡಿ ಅವರು ದೇವುದಾಸ ಶೆಟ್ಟಿ ಅವರನ್ನು ಶಾಲುಹೊದೆಸಿ, ಗ್ರಂಥ ಗೌರವ ನೀಡಿ ಸತ್ಕರಿಸಿದರು. ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.