CONNECT WITH US  

ನಲಸೋಪರ  ಶ್ರೀ ಶನೀಶ್ವರ ಮಂದಿರ:ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಮುಂಬಯಿ: ಶತಮಾನಗಳ ಹಿಂದಿನ ಏಕಾಂಗಿತಕ್ಕೆ ಸಂಘಟನೆಯ ಸ್ವರೂಪ ನೀಡಿದ ಭಜನೆ ಇಂದು ದೇವಸ್ಥಾನಗಳಾಗಿ ಪ್ರಕಟವಾಗಿದೆ. 75 ವರ್ಷಗಳ ಇತಿಹಾಸ ಹೊಂದಿದ ಶ್ರೀ ಶನಿಮಹಾತ್ಮ ಪೂಜಾ ಸಮಿತಿ ಫೋರ್ಟ್‌ ಮುಂಬಯಿ ಇವರು ಶ್ರೀ ಗಣಪತಿ, ಶ್ರೀ ದುರ್ಗಾ, ನವಗ್ರಹ, ಶ್ರೀ ಶನೈಶ್ಚರ ಮತ್ತು ಶ್ರೀ ನಾಗದೇವರ ಆಕರ್ಷಕ ಶಿಲ್ಪಾ ಕೆತ್ತನೆಯೊಂದಿಗೆ ಶಿಲಾಮಯ ಗರ್ಭಗಡಿ, ಧ್ವಜಸ್ತಂಭ ಪ್ರತಿಷ್ಠೆಯ ಮೂಲಕ ಕರ್ನಾಟಕದ ಜನತೆ ಮಹಾರಾಷ್ಟ್ರದ ಮಣ್ಣಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ನಲಸೋಪರದ ಪರಿಸರ ಪವಿತ್ರ ಆಧ್ಯಾತ್ಮಿಕ ಕ್ಷೇತ್ರವಾಯಿತು. ನಿಮ್ಮ ಸಾಧನೆ ಸನಾತನ ಧರ್ಮದ ಪ್ರತಿಬಿಂಬವಾಯಿತು ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಕ್ಷೇತ್ರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.

ಫೆ. 6 ರಂದು  ನಲಸೋಪರ ಪಶ್ಚಿಮದ ಶ್ರೀ ಶನಿಮಹಾತ್ಮ ಪೂಜಾ ಸಮಿತಿ ಫೋರ್ಟ್‌ ಮುಂಬಯಿ ಇದರ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಐದನೇ ದಿನದ ಧ್ವಜಸ್ತಂಭ ಪ್ರತಿಷ್ಠೆ, ಧ್ವಜಾರೋಹಣ ಮೊದಲಾದ ಪೂಜಾ ಕೈಂಕರ್ಯದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಹೊಟೇಲ್‌, ಕ್ಯಾಂಟೀನ್‌ಗಳಲ್ಲಿ ದುಡಿದು ಹಲವಾರು ಜವಾಬ್ದಾರಿಗಳ ನಡುವೆಯೂ ಬೆರಳೆಣಿಕೆಯ ಮಂದಿ ಸ್ಥಾಪಿಸಿದ ಈ ಸಂಸ್ಥೆ ಇಂದು ಧರ್ಮ ಸಂಸ್ಥಾಪನೆಗೆ ಭದ್ರ ತಳಹದಿ ನಿರ್ಮಿಸಿ, ಗಳಿಸಿದ ಸಂಪಾದನೆಯಲ್ಲಿ ಕಿಂಚಿತ್ತು ಕಾಣಿಕೆ ನೀಡಿದ ಪೂರ್ವಪರ ತ್ಯಾಗಮಯ ಜೀವನ, ನಿಸ್ವಾರ್ಥ ಸೇವೆ ಸಮಸ್ತ ಜನಾಂಗಕ್ಕೆ ಮಾರ್ಗದರ್ಶಕವಾಗಲಿ ಎಂದು ನುಡಿದರು.

ಪೊವಾಯಿ ಶ್ರೀ ರುಂಡಮಾಲಿನಿ ದೇವಸ್ಥಾನದ ಧರ್ಮದರ್ಶಿ ಸುವರ್ಣಬಾಬಾ ಅವರು ಮಾತನಾಡಿ, ಶ್ರೀ ಶನಿದೇವರ ಮತ್ತು ನಾಗದೇವರನ್ನು ಸ್ಥಾಪಿಸಿ ಬಂಧುತ್ವದ ಮೂಲಕ ಕೌಟುಂಬಿಕ ವಾತಾವರಣ ಪುನ:ಶ್ಚೇತನಗೊಂಡಿದೆ. ಪ್ರತಿ ಗ್ರಾಮಗಳ ಒಗ್ಗಟ್ಟು ದೇವಸ್ಥಾನಗಳ ಅಭಿವೃದ್ಧಿಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ  ಅಧ್ಯಕ್ಷ ಡಾ| ವಿರಾರ್‌ ಶಂಕರ್‌ ಶೆಟ್ಟಿ ಸಂಸ್ಥೆಯು ನಡೆದು ಬಂದ ಹಾದಿ, ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಸುಪ್ರೀಮ್‌ ಹೆರಿಟೇಜ್‌ನ ಸಿಎಂಡಿ ಶಿವರಾಮ ಶೆಟ್ಟಿ ಅಜೆಕಾರು, ನೆರೂಲ್‌ ಶನಿಮಂದಿರದ ಧರ್ಮದರ್ಶಿ ರಮೇಶ್‌ ಪೂಜಾರಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಶ್ಯಾಮ್‌ ಶೆಟ್ಟಿ, ಬಂಟ್ಸ್‌ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ್‌ ಶೆಟ್ಟಿ, ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು, ಭವಾನಿ ಫೌಂಡೇಷನ್‌ ಸಂಸ್ಥಾಪಕ ಕೆ. ಡಿ. ಶೆಟ್ಟಿ, ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ, ಶ್ರೀನಿಧಿ ಆಚಾರ್ಯ, ಇಂದ್ರಜಿತ್‌ ಸಿಂಗ್‌ ಅವರು ಮಾತನಾಡಿ ಶುಭಹಾರೈಸಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರುಗಳಾದ ಪಾಂಡು ಎಲ್‌. ಶೆಟ್ಟಿ, ಹರೀಶ್‌ ಶೆಟ್ಟಿ ಗುರ್ಮೆ, ಶಶಿಧರ ಶೆಟ್ಟಿ, ರಮೇಶ್‌ ಕೊಠಾರಿ, ಶ್ರೀಧರ ಪೂಜಾರಿ, ನಂದಕುಮಾರ್‌ ಕುಂಬ್ಳೆ, ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ಸುಂದರ ಬೆಳ್ಚಡ, ಪದಾಧಿಕಾರಿಗಳಾದ ಜಗನ್ನಾಥ್‌ ರೈ, ಜಯಂತ್‌ ಪಕ್ಕಳ, ಶಂಕರ್‌ ಆಳ್ವ, ಶ್ರೀನಿವಾಸ ಆಳ್ವ, ಸದಾಶಿವ ಕರ್ಕೇರ, ಮೋಹನ್‌ ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಶ್ರೀ ಶನಿಕ್ಷೇತ್ರದಲ್ಲಿ ಕೊಯ್ಯೂರು ನಂದಕುಮಾರ್‌ ತಂತ್ರಿ ಅವರ ಪೌರೋಹಿತ್ಯದಲ್ಲಿ ಶ್ರೀ ಶನಿದೇವರ, ಶ್ರೀ ಗಣಪತಿ, ಶ್ರೀ ದುರ್ಗಾ ನವಗ್ರಹ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವ ಕಲಶಾಭಿಷೇಕ, ಧ್ವಜಸ್ತಂಭ ಪ್ರತಿಷ್ಠೆ, ಧ್ವಜಾರೋಹಣ, ಸಂಜೆ ವೇದಮೂರ್ತಿ ಶ್ರೀಕಾಂತ ಸಾಮಗರು ಬಡಗು ಪೇಟೆ ಇವರ ನೇತೃತ್ವದಲ್ಲಿ ದೇವರ ಉತ್ಸವ, ಸಹಸ್ರಕುಂಭ, ಸಹಿತ ಬ್ರಹ್ಮಕಲಶಾಧಿವಾಸ, ಅಧಿವಾಸ ಹೋಮಗಳು ಜರಗಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೀರಾ  -ಡಹಾಣೂ ಬಂಟ್ಸ್‌ ಇದರ ನಾಯಾYಂವ್‌-ವಿರಾರ್‌ ವಲಯದ ಪ್ರಾಯೋಜಕತ್ವದಲ್ಲಿ ಕಾರ್ನಿಕದ ವೈಭವ ಪ್ರದರ್ಶನಗೊಂಡಿತು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಕಣಂಜಾರು, ವಿಜಯ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. 

ಚಿತ್ರ-ವರದಿ : ರಮೇಶ್‌ ಅಮೀನ್‌


Trending videos

Back to Top