ಪುಣೆ ಸಾಯಿ ಟ್ರೋಪಿ ಕ್ರಿಕೆಟ್‌-2019 ಪಂದ್ಯಾಟ


Team Udayavani, Mar 6, 2019, 2:04 PM IST

0502mum02.jpg

ಪುಣೆ: ಇಂದಿನ ಜೀವನವೇ ಸ್ಪರ್ಧಾತ್ಮಕವಾಗಿದೆ. ಜೀವನದ  ಜಂಜಾಟದ ಜತೆಯಲ್ಲಿ  ಮನಸ್ಸಿಗೆ  ಸಮಾಧಾನ  ನೆಮ್ಮದಿ, ಮುದ ನೀಡುವ ಹಾಗೂ ಆನಂದವನ್ನು ನೀಡುವಲ್ಲಿ  ಆಟೋಟಗಳು, ಕ್ರೀಡೆಗಳು ತುಂಬಾ ಸಹಾಯಕವಾಗಬಲ್ಲದು. ಪುಣೆಯಂತಹ ಮಹಾನಗರದಲ್ಲಿ  ಹೊಟ್ಟೆಪಾಡಿಗಾಗಿ, ಬಂದು ನೆಲೆಸಿದ,  ತುಳು-ಕನ್ನಡಿಗರಿಗಾಗಿ ಜಾತಿ-ಭೇದ ಭಾವವಿಲ್ಲದೆ ಪ್ರತಿ ವರ್ಷವೂ ಕ್ರಿಕೆಟ್‌ ಪಂದ್ಯಾಟವನ್ನು ಆಯೋಜಿಸಿ ಉತ್ತಮವಾಗಿ ನಡೆಸಿಕೊಂಡು ಬಂದಿರುವ ಸಾಯಿ ಕ್ರಿಕೆಟರ್ಸ್‌ನವರ ಕಾರ್ಯ ಶ್ಲಾಘನೀಯ. ತುಳು ಕನ್ನಡಿಗ ಎÇÉಾ ಕ್ರಿಕೆಟ್‌ ಆಟಗಾರರು, ಅಭಿಮಾನಿಗಳು, ಆಸಕ್ತರು ಒಂದೇ ಸೂರಿನಡಿ ಸೇರಿ ಈ ಒಂದು ದೊಡ್ಡ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿದ ಈ ಸಂದರ್ಭವನ್ನು ನೋಡಿದಾಗ ಮನಸ್ಸಿಗೆ ತುಂಬಾ ಅನಂದವಾಗುತ್ತದೆ. ನಮ್ಮಲ್ಲಿ ಒಳ್ಳೆಯ ಚುರುಕಿನ  ಆಟಗಾರರು, ಪ್ರತಿಭಾಶಾಲಿಗಳು ಇ¨ªಾರೆ ಎಂಬುದು ತಿಳಿಯುತ್ತದೆ. ಪಂದ್ಯಾಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಆದರೆ  ಭಾಗವಹಿಸಿ  ಶಿಸ್ತುಬದ್ಧವಾಗಿ, ಕ್ರೀಡಾ ಸ್ಫೂರ್ತಿ, ಕ್ರೀಡಾ ಅಭಿಮಾನವನ್ನು ಪ್ರದರ್ಶಿಸುವುದು ನಾವು ಕ್ರೀಡೆಗೆ ಕೊಡುವ ಗೌರವ ಎಂದರೆ ತಪ್ಪಾಗಲಾರದು. 

ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ಹಾಗೂ ವಿಜೇತ ತಂಡಗಳಿಗೆ ಅಭಿನಂದನೆಗಳು  ಎಂದು ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ  ಸಮಿತಿಯ  ಕಾರ್ಯಾಧ್ಯಕ್ಷ  ಗಣೇಶ್‌ ಪೂಂಜಾ ಹೇಳಿದರು.

ಮಾ. 4ರಂದು  ಪುಣೆಯ  ಪಾಷಣ್‌ನಲ್ಲಿರುವ ಎನ್‌ಸಿಎಲ್‌ ಮೈದಾನದಲ್ಲಿ ಪುಣೆ ಸಾಯಿ ಕ್ರಿಕೆಟರ್ ವತಿಯಿಂದ  ನಡೆದ ಸಾಯಿ ಟ್ರೋಫಿ ಕ್ರಿಕೆಟ್‌ ಪಂದ್ಯಾಟವನ್ನು ಬೆಳಗ್ಗೆ ಉದ್ಘಾಟಿಸಿ, ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪುಣೆ ತುಳು ಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್‌ ಶೆಟ್ಟಿ, ಸಾಯಿ ಕ್ರಿಕೆಟರ್ಸ್‌ನ ಸಂಚಾಲಕ ವಸಂತ್‌ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪುಣೆಯಲ್ಲಿ ನೆಲೆಸಿರುವ  ತುಳು-ಕನ್ನಡಿರಿಗಾಗಿ ಆಯೋಜಿಸಲಾಗಿದ್ದ  ಸೀಮಿತ ಓವರ್‌ಗಳ ಈ ಪಂದ್ಯಾಟದಲ್ಲಿ  ಸುಮಾರು 10 ತಂಡಗಳು ಭಾಗವಹಿಸಿದ್ದವು. ತುಳುಕೂಟ ಪುಣೆ, ಶಬರಿ  ಎ., ಅರವಿಂದ್‌   ಇಲೆವನ್‌, ಪ್ರಸೆಂಟ್ಸ್‌ ಗ್ರೂಪ್‌, ಸುಪ್ರಿಯಾ  ಎಜಿಕೆ ಇಲೆವನ್‌, ಮಸಕಾ  ಸೀ ಫುಡ್‌,  ಶಬರಿ ಬಿ., ಸುಪ್ರಿಯಾ  ಬಿ., ಕಿನಾರ ಇಲೆವನ್‌ ತಂಡಗಳು ಭಾಗವಹಿಸಿದ್ದವು. ಐಪಿಎಲ್‌ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಫೈನಲ್‌ ಪಂದ್ಯದಲ್ಲಿ  ಮಸಕಾ  ಸೀ ಫುಡ್‌  ತಂಡವು  ಪ್ರಸೆಂಟ್ಸ್‌ ತಂಡವನ್ನು ಸೋಲಿಸಿ  ಸಾಯಿ ಟ್ರೋಫಿ ಮತ್ತು 13,333 ರೂ. ಗಳನ್ನು ಮುಡಿಗೇರಿಸಿಕೊಂಡಿತು.
ದ್ವಿತೀಯ ಸ್ಥಾನಿ ಪ್ರಸೆಂಟ್ಸ್‌ ತಂಡವು ಟ್ರೋಫಿ ಮತ್ತು 8,888 ರೂ. ಗಳನ್ನು ಪಡೆಯಿತು. ತೃತೀಯ ಸ್ಥಾನಿಯಾದ  ಶಬರಿ ಎ.  ತಂಡಕ್ಕೆ  ಟ್ರೋಫಿ ನೀಡಿ  ಸತ್ಕರಿಸಲಾಯಿತು. ಅತಿಥಿ-ಗಣ್ಯರು ವಿಜೇತ ತಂಡಗಳನ್ನು ಅಭಿನಂದಿಸಿದರು. ಫೈನಲ್‌ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು  ಮಸಕಾ ತಂಡದ ಧೀರಜ್‌  ಪಡೆದರು. ಉತ್ತಮ ಆಟಗಾರನಾಗಿ ಪ್ರಸೆಂಟ್ಸ್‌ ತಂಡದ ನಿತಿನ್‌ ಪ್ರಶಸ್ತಿ ಪಡೆದರು. ಸಾಯಿ ಕ್ರಿಕೆಟ್‌ ತಂಡದ   ಕಳೆದ  ವರ್ಷದ ಉತ್ತಮ ಬ್ಯಾಟಿಂಗ್‌, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು  ಕ್ರಮವಾಗಿ  ಸಂದೇಶ್‌ ಶೆಟ್ಟಿ, ಸುದೀಪ್‌ ಪೂಜಾರಿ, ಪ್ರವೀಣ್‌ ಶೆಟ್ಟಿ ಇವರಿಗೆ  ಸಚಿನ್‌ ಪೂಜಾರಿ, ಸುಮಿತ್‌ ಶೆಟ್ಟಿ ಕುಂಟಾಡಿ ಮತ್ತು ಸಂದೀಪ್‌ ಶೆಟ್ಟಿ ಅವರು ಪ್ರದಾನಿಸಿ ಶುಭ ಹಾರೈಸಿದರು.
ಮುಂಬಯಿ ಮನೀಶ್‌ ಶೆಟ್ಟಿ, ಸುಂದರ್‌  ಕರ್ಕೇರ ಪಾಷಾಣ್‌, ಸಂತೋಷ್‌ ಪೂಜಾರಿ ಅವರು ಹಿಂದಿ, ಕನ್ನಡ, ತುಳುವಿನಲ್ಲಿ ವೀಕ್ಷಕ ವಿವರಣೆಯನ್ನು ನೀಡಿದರು. ಅಂಪಾಯರ್‌ಗಳಾಗಿ ಅಂತೋನಿ ಜೆ, ಪ್ರಮೋದ್‌ ಲೋಕಂಡೆ, ಪ್ರಫುಲ್‌ ನವಲೆ ಅವರು ಸಹಕರಿಸಿದರು. ಪುಣೆಯ  ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು  ಉಪಸ್ಥಿತರಿದ್ದು ಶುಭ ಹಾರೈಸಿದರು ಗಣ್ಯರನ್ನು ಸಾಯಿ ಕ್ರಿಕೆಟರ್ಸ್‌ನ  ವಸಂತ್‌ ಶೆಟ್ಟಿ  ಹಾಗೂ ಪದಾಧಿಕಾರಿಗಳು ಗೌರವಿಸಿದರು.

ಸಾಯಿ ಕ್ರಿಕೆಟರ್ಸ್‌ ಫ್ರೆಂಡ್‌ನ‌ ಪ್ರಮುಖ ರಾದ  ವಿಶ್ವನಾಥ್‌ ಶೆಟ್ಟಿ  ಬಸ್ತಿ, ಸಂತೋಷ್‌ ವಾರಂಗ, ಸುದೀಪ್‌ ಪೂಜಾರಿ, ರಾಮ್‌ ಪ್ರಸಾದ್‌, ಪ್ರಶಾಂತ್‌ ಪಕ್ಕಿಬೆಟ್ಟು, ಜನಾರ್ದನ್‌,  ಸಂದೀಪ್‌  ಶೆಟ್ಟಿ, ಪ್ರವೀಣ್‌, ಪ್ರಶಾಂತ್‌ ಶೆಟ್ಟಿ, ಪ್ರವೀಣ್‌ ಪೂಜಾರಿ, ಸಂದೇಶ್‌ ಶೆಟ್ಟಿ, ವೆಂಕಟ್‌ ಚೇತನ್‌ ಶೆಟ್ಟಿ, ನಾಗೇಶ್‌, ಹರೀಶ್‌ ಪಾಷಣ್‌, ಸಂಪತ್‌ ಹೆಗ್ಡೆ, ಸುಕೇಶ್‌, ಪ್ರಶಾಂತ್‌ ಹಿರಿಯಡ್ಕ, ಸಂತೋಷ್‌ ಪೂಜಾರಿ, ಕುಮಾರ್‌  ಶೆಟ್ಟಿ, ಅರವಿಂದ್‌ ಶೆಟ್ಟಿ, ಮನೀಶ್‌ ಶೆಟ್ಟಿ, ರಘು, ಹರೀಶ್‌ ಪೂಜಾರಿ,  ಪ್ರಜ್ವಲ್‌ ಶೆಟ್ಟಿ, ದೀಕ್ಷಿತ್‌ ಶೆಟ್ಟಿ, ಪ್ರಶಾಂತ್‌ ಬಸ್ತಿ,  ಭೋಜ ಶೆಟ್ಟಿ  ಸಹಕರಿಸಿದರು. ಸುಂದರ್‌  ಕರ್ಕೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ದೊಡ್ಡ ಮಟ್ಟದಲ್ಲಿ ನಮ್ಮ ತುಳು ಕನ್ನಡಿಗರನ್ನು ಒಟ್ಟು ಸೇರಿಸಿಕೊಂಡು ಶಿಸ್ತು ಬದ್ಧವಾಗಿ ಈ ಪಂದ್ಯಾಟವನ್ನು ಆಯೋಜಿಸಿದ ಸಾಯಿ ಕ್ರಿಕೆಟರ್ಸ್‌ನವರ ಕೆಲಸ ಮೆಚ್ಚುವಂಥ ದ್ದಾಗಿದೆ. ಪುಣೆಯಲ್ಲಿನ ಎÇÉಾ ಸಮಾಜ ಬಾಂಧವರು ಭೇದಭಾವ ಇಲ್ಲದೆ  ಉತ್ತಮ ರೀತಿಯಲ್ಲಿ ಅಡಿ ನಮ್ಮಲ್ಲಿ ಕೂಡಾ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳು ಇದ್ದಾರೆ ಎಂಬುದನ್ನು ತೋರಿಸಿದ್ದೀರಿ. ಭಾಗವಹಿಸಿದ ಎಲ್ಲ ತಂಡಗಳ ಕ್ರೀಡಾಳುಗಳಿಗೆ ಹಾಗೂ ವಿಜೇತ ತಂಡಗಳಿಗೆ ಅಭಿನಂದನೆಗಳು. ಮುಂದಿನ ವರ್ಷಗಳಲ್ಲಿ ಪಂದ್ಯಾಟವನ್ನು ಶಿಸ್ತುಬದ್ಧವಾಗಿ  ಆಯೋಜಿಸುವಲ್ಲಿ ನಮ್ಮೆಲ್ಲರ ಸಹಕಾರ ನಿಮ್ಮೊಂದಿಗಿದೆ. ಪುಣೆಯ ತುಳು ಕನ್ನಡಿಗ ಕ್ರಿಕೆಟ್‌ ಆಟಗಾರರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಕ್ರಿಕೆಟರ್ಸ್‌
ನವರೊಂದಿಗೆ  ಒಂದಾಗಿ ಸಹಕರಿಸಬೇಕು 
  – ರೋಹನ್‌ ಶೆಟ್ಟಿ (ಅಧ್ಯಕ್ಷರು: ಯುವ ವಿಭಾಗ ತುಳು ಕೂಟ ಪುಣೆ).

  ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.