CONNECT WITH US  

ಸಿದ್ಧಿವಿನಾಯಕನ ಬರಮಾಡಿಕೊಳ್ಳಲು ಸಿದ್ಧತೆ ಪೂರ್ಣ

ಮಾರುಕಟ್ಟೆಯಲ್ಲಿ ಹೂವು, ಹಣ್ಣು ಮಾರಾಟದ ಭರಾಟೆ ; ಶಿಕ್ಷಣ ಸಂಸ್ಥೆಗಳಲ್ಲೂ ಗಣಪನ ಆರಾಧನೆ

ಸುಳ್ಯ ಬಸ್‌ ನಿಲ್ದಾಣದ ಬಳಿಯ ಮಾರುಕಟ್ಟೆಯಲ್ಲಿ ಹೂವು ಖರೀದಿಸುತ್ತಿರುವುದು. ವಿವಿಧ ಬಗೆಯ ಹೂವುಗಳು ಮಾರುಕಟ್ಟೆಗೆ ಬಂದಿವೆ.

ಪುತ್ತೂರು: ಚೌತಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಅಂಗಡಿ ಮುಂಗಟ್ಟುಗಳಲ್ಲಿ ಬುಧವಾರ ವ್ಯಾಪಾರದ ಭರಾಟೆ ಜೋರಾಗಿತ್ತು. ಒಟ್ಟು ನಗರದಲ್ಲಿ ವಾಹನಗಳು, ಜನರ ಸಂಚಾರ ಅಧಿಕವಾಗಿತ್ತು. ತಾ|ನ 60ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಸಂಭ್ರಮ ಗಣೇಶೋತ್ಸವ ನಡೆಯುತ್ತಿದೆ. ಹೆಚ್ಚಾಗಿ ಭಜನ ಮಂದಿರ, ಶ್ರದ್ಧಾ ಕೇಂದ್ರಗಳಲ್ಲಿ ಗಣೇಶೋತ್ಸವಗಳು ನಡೆಯುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಿಕೊಂಡು ಪೂಜೆ - ಪುರಸ್ಕಾರ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟ, ಮೆರವ ಣಿಗೆಗಳನ್ನು ಆಯೋಜಿಸಲಾಗಿದೆ. ಕೆಲವು ಕಡೆಗಳಲ್ಲಿ ಒಂದು ದಿನ ಮಾತ್ರ ಗಣೇಶೋತ್ಸವ ನಡೆದರೆ ಇನ್ನು ಕೆಲವು ಕಡೆಗಳಲ್ಲಿ ವಾರದ ಕಾಲ ನಡೆಯುತ್ತದೆ.

ಕರಾವಳಿ ಭಾಗದಲ್ಲಿ ಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸುವುದಿಲ್ಲ. ಇಲ್ಲಿ ಗಣೇಶನ ಹಬ್ಬಕ್ಕೆ ವಿಶೇಷ ಒತ್ತು ನೀಡಿ ಆಚರಣೆ ನಡೆಸಲಾಗುತ್ತಿದೆ. ಕೆಲವು ಮನೆಗಳಲ್ಲಿ ಗಣೇಶನ ವಿಗ್ರಹವನ್ನು ಪೂಜಿಸುವವರು ಚೌತಿಯ ಹಿಂದಿನ ದಿನವೇ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಅಂದು ಗೌರಿ ಹಬ್ಬವನ್ನೂ ಆಚರಿಸುತ್ತಾರೆ. ಇನ್ನು ಕೆಲವು ಸಾರ್ವಜನಿಕ ಗಣೇಶೋತ್ಸವದಲ್ಲಿ ಮಾತ್ರ ಗೌರಿ ಗಣೇಶ ಹಬ್ಬವನ್ನು ಆಚರಿಸ ಲಾಗುತ್ತಿದೆ.

ಹೂ -ಹಣ್ಣಿನ ಬೆಲೆ
ಗಣೇಶೋತ್ಸವದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಕದಳಿ ಬಾಳೆಹಣ್ಣು ಬುಧವಾರ ಕೆ.ಜಿ.ಗೆ 60- 80 ರೂ., ಮೈಸೂರು ಬಾಳೆ 50 ರೂ., ಸೇಬು 120 -160, ಹೊಸದಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಮುಸುಂಬಿ 80 ರೂ., ನೀಲಂ ಮಾವು 200 ರೂ. ದರಕ್ಕೆ ಮಾರಾಟವಾಗಿವೆ. ಕಬ್ಬು ಗಿಡವೊಂದಕ್ಕೆ 50 ರೂ., ಕೆಂದಾಳೆ 35 ರೂ.ಗೆ ಮಾರಾಟವಾಗಿದೆ. ಬೇಡಿಕೆ ಇರುವ ಸೇವಂತಿಗೆ ಮಾರಿಗೆ 100 ರೂ., ಚೆಂಡು ಹೂವು 80 ರೂ., ಕಾಕಡ 150 ರೂ.ಗೆ ಮಾರಾಟವಾಗಿವೆ. ಗುರುವಾರ ಈ ಬೆಲೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಚೌತಿಯ ಸಂದರ್ಭದಲ್ಲಿ ಸಸ್ಯಾಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಿಂದ ತರಕಾರಿಗೆ ಹೆಚ್ಚಿನ ಬೇಡಿಕೆ ಇತ್ತು. ವಿಶೇಷವಾಗಿ ಚೌತಿಯ ಸಂದರ್ಭದಲ್ಲಿ ಬಳಕೆಯಾಗುವ ದಿವಿಗುಜ್ಜೆಗೆ ಕೆ.ಜಿ.ಗೆ 120 ರೂ. ಬೆಲೆ ಇದ್ದರೂ ಹೆಚ್ಚಿನ ಬೇಡಿಕೆ ಇತ್ತು.

ಕಾಲೇಜುಗಳಲ್ಲೂ ಸಂಭ್ರಮ
ಚೌತಿ ಹಬ್ಬವನ್ನು ಗಣೇಶನ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ಕಾಲೇಜುಗಳಲ್ಲೂ ಆಚರಣೆ ಮಾಡಲಾಗುತ್ತಿದೆ. ನಗರದ ಸಂತ ಫಿಲೋಮಿನಾ, ವಿವೇಕಾನಂದ ಕಾಲೇಜು, ಪ್ರಗತಿ ಸ್ಟಡಿ ಸೆಂಟರ್‌ಗಳಲ್ಲಿ ಗಣೇಶೋತ್ಸವ ನಡೆಯುವುದರಿಂದ ವಿದ್ಯಾರ್ಥಿಗಳಲ್ಲೂ ವಿಶೇಷ ಸಂಭ್ರಮ ಮನೆ ಮಾಡಿದೆ.

ಮಾರುಕಟ್ಟೆಯಲ್ಲಿ ಜಂಗುಳಿ
ಬುಧವಾರ ನಗರದಲ್ಲಿ ವಾಹನಗಳ ಓಡಾಟ, ಜನಜಂಗುಳಿ ಅಧಿಕವಾ ಗಿದ್ದು, ಮಾರಾಟ -ಖರೀದಿ ಜೋರಾಗಿತ್ತು. ಎಲ್ಲೆಡೆ ಚೌತಿ ಹಬ್ಬದ ಸಿದ್ಧತೆಗಾಗಿ ಖರೀದಿ ಮಾಡುತ್ತಿರುವ ಗ್ರಾಹಕರು ಕಂಡುಬಂದರು. ಮಾರು ಕಟ್ಟೆಯಲ್ಲಿ ಹೂ, ಹಣ್ಣುಗಳು ಅದರಲ್ಲೂ ವಿಶೇಷವಾಗಿ ಕಬ್ಬು, ಕದಳಿ ಬಾಳೆ, ಎಲೆ ಅಡಿಕೆ, ಸೀಯಾಳಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂತು.

ಇನ್ನು ಹಬ್ಬಕ್ಕಾಗಿ ಹೊಸ ವಸ್ತ್ರ, ಚಿನ್ನಾಭರಣ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ವಿವಿಧ ವ್ಯಾಪಾರ ಮಳಿಗೆಗಳಲ್ಲಿ ಗೃಹೋಪಯೋಗಿ ವಸ್ತುಗಳಿಗೆ, ಟಿವಿ, ಸ್ಮಾರ್ಟ್‌ ಚಿನ್ನಾಭರಣೆ, ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಹಕರಿಗೆ ಹಬ್ಬದ ಖರೀದಿಗಾಗಿ ಗಿಫ್ಟ್‌, ದರ ಕಡಿತ ನೀಡಿರುವುದು ಕಂಡುಬಂತು.

Trending videos

Back to Top