ಸಂಚಾರ ನಿರ್ವಹಣೆಯಲ್ಲೂ ಎಡವುತ್ತಿರುವ ಸಿಬ್ಬಂದಿ


Team Udayavani, Jul 13, 2018, 3:16 PM IST

ray-1.gif

ರಾಯಚೂರು: ಟ್ರಾಫಿಕ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಹೇಗೆ ಒಪ್ಪಬಹುದೋ, ಇರುವ ಸಿಬ್ಬಂದಿಯೂ ಕರ್ತವ್ಯದಲ್ಲಿ ಶಿಸ್ತು ಪ್ರದರ್ಶಿಸುತ್ತಿಲ್ಲ ಎನ್ನುವುದನ್ನು ಒಪ್ಪಲೇಬೇಕು. ನಗರವನ್ನೊಮ್ಮೆ ಸುತ್ತಾಡಿದವರು ಸಂಚಾರ ಠಾಣೆ ಪೊಲೀಸರ ವೈಫಲ್ಯವನ್ನು ಬೊಟ್ಟು ಮಾಡಿ ತೋರಿಸದೆ ಇರಲಾರರು.

ನಗರದ ಕೆಲ ಪ್ರಮುಖ ವೃತ್ತಗಳು ಹೊರತುಪಡಿಸಿ ಬಹುತೇಕ ಕಡೆ ಟ್ರಾಫಿಕ್ ನಿಯಮಗಳಿಗೆ ನಯಾಪೈಸೆ ಕಿಮ್ಮತ್ತಿಲ್ಲ. ಕೇಂದ್ರ ಬಸ್‌ ನಿಲ್ದಾಣದಿಂದ ತೀನ್‌ ಕಂದಿಲ್‌ಗೆ ಹೋಗುವ ಮಾರ್ಗದಲ್ಲಿ ರಸ್ತೆ, ಪಾದಚಾರಿ ಮಾರ್ಗ ಮಧ್ಯೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಮನಬಂದಂತೆ ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳ ಮಾಲಿಕರನ್ನು ತಡೆದು ಪ್ರಶ್ನಿಸುವವರಿಲ್ಲ. ಒಂದು ಬದಿ ಮಾತ್ರ ಬೈಕ್‌ ಪಾರ್ಕ್‌ ಮಾಡಬೇಕು ಎಂಬ ನಿಯಮ ಇದೆಯಾದರೂ ಪಾಲನೆಯಾಗುತ್ತಿಲ್ಲ. 

ಫುಟ್‌ಪಾತ್‌ಗಳೂ ಅತಿಕ್ರಮಣ: ನಗರದ ಬಹುತೇಕ ಫುಟ್‌ಪಾತ್‌ಗಳನ್ನು ಬೀದಿ ಬದಿ ವ್ಯಾಪಾರಿಗಳು, ವಾಹನ ಸವಾರರು ಅತಿಕ್ರಮಿಸಿದ್ದಾರೆ. ಪಾದಚಾರಿಗಳು ಓಡಾಡಲು ಇರುವ ರಸ್ತೆ ಎಂಬ ಸಾಮಾನ್ಯ ಪರಿಜ್ಞಾನ ಇಲ್ಲದೇ ಟಂಟಂ ಆಟೋಗಳು, ಕಾರುಗಳು, ಬೈಕ್‌ಗಳನ್ನು ನಿಲ್ಲಿಸಲು ಬಳಸಲಾಗುತ್ತಿದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳು ಫುಟ್‌ಪಾತ್‌ಗಳನ್ನು ತಮ್ಮ ಸ್ವಂತ ಸ್ಥಳಕ್ಕಿಂತ ಮಿಗಿಲಾಗಿ ಬಳಸುವುದು ವಿಪರ್ಯಾಸವೇ ಸರಿ. ಅಚ್ಚರಿ ಎಂದರೆ ನಗರಸಭೆ, ತಹಶೀಲ್ದಾರ್‌ ಕಚೇರಿ, ಶಿಕ್ಷಣ ಇಲಾಖೆಯಂಥ ಕಚೇರಿಗಳ ಮುಂಭಾಗವೇ ಬೇಕಾಬಿಟ್ಟಿ ವಾಹನ ಪಾರ್ಕಿಂಗ್‌ ಮಾಡುತ್ತಿದ್ದರೂ ಕೇಳುವವರಿಲ್ಲ. ಆದರೆ, ಇದನ್ನು ಸಮರ್ಥಿಸಿಕೊಳ್ಳುವ ವ್ಯಾಪಾರಿಗಳು, ವಾಹನ ಚಾಲಕರು ನಮಗೆ ಎಲ್ಲಿಯಾದರೂ ಜಾಗ ತೋರಿಸಿದರೆ ಹೋಗುತ್ತೇವೆ ಎನ್ನುತ್ತಾರೆ. 

ಹೆಸರಿಗೆ ಮಾತ್ರ ಒನ್‌ ವೇ..!: ಇನ್ನು ನಗರದ ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಆದರೆ, ಇಲ್ಲಿ ಎರಡು ಕಡೆಯಿಂದ ವಾಹನಗಳು ಓಡಾಡುತ್ತಿದ್ದರೂ ಕೇಳುವವರಿಲ್ಲ. ಇದರಿಂದ ಚಂದ್ರಮೌಳೇಶ್ವರ ರಸ್ತೆಯಿಂದ ಮಹಾವೀರ ಸರ್ಕಲ್‌, ಮಾರುಕಟ್ಟೆ ರಸ್ತೆಗಳಲ್ಲಿ ಸದಾ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಇಂಥ ಕಡೆ ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ. ಇರುವ ಸಿಬ್ಬಂದಿ ಕೂಡ ನಿಯಮಗಳ ಪಾಲನೆಗೆ ಒತ್ತು ನೀಡುತ್ತಿಲ್ಲ ಎನ್ನುವುದು ನಿಜ.
 
ಭಾರೀ ವಾಹನಗಳ ಸಂಚಾರ: ನಗರದಲ್ಲಿ ಈ ಹಿಂದೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅದಕ್ಕೂ ಕಾಲಾವಕಾಶ ನಿಗದಿ ಮಾಡಿ ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆದೇಶಿಸಿದ್ದರು. ಆದರೆ, ಅಂಥ ಆದೇಶಗಳಿಗೆ ಮಾನ್ಯತೆ ಇಲ್ಲದಾಗಿದೆ. ಸ್ಟೇಶನ್‌ ರಸ್ತೆ, ಪಟೇಲ ರಸ್ತೆಗಳಲ್ಲಿ ಭಾರೀ ವಾಹನಗಳ ಓಡಾಟ ಯಾವಾಗಲೂ ಇದ್ದೇ ಇರುತ್ತದೆ. ಒಂದು ವಾಹನ ಇಕ್ಕಟ್ಟಿನ ರಸ್ತೆಯಲ್ಲಿ ಸಿಲುಕಿದರೆ ಕನಿಷ್ಠ 15 ನಿಮಿಷ ಟ್ರಾಫಿಕ್ ಸಮಸ್ಯೆ ತಲೆದೋರಲಿದೆ.

ಒಟ್ಟಾರೆ ಸಂಚಾರ ಸಂಕಟ ಇಂದಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇಂಥ ವ್ಯವಸ್ಥೆಗೆ ಕೇವಲ ಪೊಲೀಸರು ಮಾತ್ರ ಕಾರಣ ಎಂದು ಷರಾ ಬರೆಯಲಾಗದು. ತಪ್ಪನ್ನು ನಿಯಂತ್ರಿಸುವಲ್ಲಿ ಪೊಲೀಸರು ತೋರುವ ನಿರ್ಲಕ್ಷéದಷ್ಟೇ ಸಮಪಾಲು ತಪ್ಪು ಮಾಡುವ ಸಾರ್ವಜನಿಕರದ್ದು ಇದೆ.
 
ಠಾಣೆ ಉನ್ನತೀಕರಣ ಕನಸು ಜನಸಂಖ್ಯೆ ಆಧರಿಸಿ ಅಥವಾ ಅಪಘಾತ ಪ್ರಕರಣಗಳನ್ನು ಆಧರಿಸಿ ಇರುವ ಟ್ರಾಫಿಕ್
ಠಾಣೆಗಳನ್ನು ಉನ್ನತೀಕರಿಸಲಾಗುತ್ತದೆ. ಆದರೆ, ನಗರದ ವ್ಯಾಪ್ತಿ ವಿಸ್ತರಿಸುತ್ತಿದ್ದರೂ ಠಾಣೆ ವ್ಯಾಪ್ತಿ ವಿಸ್ತರಿಸುತ್ತಿಲ್ಲ. ಲಿಂಗಸುಗೂರು ರಸ್ತೆಯಲ್ಲಿ ಅಸ್ಕಿಹಾಳ, ಹೈದರಾಬಾದ್‌ ರಸ್ತೆಯಲ್ಲಿ ರಿಮ್ಸ್‌ಗೆ ಸೀಮಿತಗೊಳಿಸಲಾಗಿದೆ. ಕನಿಷ್ಠ
ವರ್ಷಕ್ಕೆ 200 ಪ್ರಕರಣ ದಾಖಲಾಗಬೇಕು ಎಂಬ ಗುರಿ ತಲುಪದ ಕಾರಣ ಉನ್ನತೀಕರಣ ಭಾಗ್ಯ ಇಲ್ಲದಾಗಿದೆ. ಆ ನೆಪದಲ್ಲಾದರೂ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ಸಿಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.

ನಗರದಲ್ಲಿ ಪ್ರಮುಖ ರಸ್ತೆಗಳು ಬಿಟ್ಟರೆ ಉಳಿದ ಬಹುತೇಕ ಭಾಗದಲ್ಲಿ ಸಂಚಾರ ನಿಯಮಗಳಿಗೆ ಮಾನ್ಯತೆಯೇ ಇಲ್ಲ. ನಗರವನ್ನು ಮಾದರಿ ಮಾಡಬೇಕಿರುವ ಟ್ರಾಫಿಕ್ ಪೊಲೀಸರು ಅದ್ಯಾವುದನ್ನು ಗಂಭೀರವಾಗಿ ಪರಿಗಣಿಸಿಲ್ಲ
ಎನ್ನಲಿಕ್ಕೆ ಸಾಕಷ್ಟು ನಿದರ್ಶನ ಸಿಗುತ್ತವೆ. ಇದರಿಂದ ಸಾಮಾನ್ಯರು ತೊಂದರೆಗೆ ಸಿಲುಕುವಂತಾಗಿದೆ. ಇನ್ನಾದರೂ ಸಂಚಾರಿ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಇಲಾಖೆ ಪಂಕ್ತಿ ಹಾಕಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಸೆ

30 ವರ್ಷದ ಹಿಂದೆಯಿದ್ದ ಜನಸಂಖ್ಯೆಗನುಗುಣವಾಗಿ ಟ್ರಾಫಿಕ್ ಪೊಲೀಸರಿದ್ದಾರೆ. ಸರ್ಕಾರ ಮೊದಲು ನಗರಕ್ಕೆ ಹೆಚ್ಚುವರಿ ಠಾಣೆಯನ್ನಾದರೂ ನೀಡಲಿ, ಇಲ್ಲವೇ ಈಗಿರುವ ಠಾಣೆಯನ್ನು ಉನ್ನತೀಕರಿಸಲಿ. ಬೇಕಾಬಿಟ್ಟಿ ಪಾರ್ಕಿಂಗ್‌, ಬೀದಿ ಬದಿ ವ್ಯಾಪಾರಿಗಳ ಹಾವಳಿಗೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನಾದರೂ ಸರ್ಕಾರ ರಾಯಚೂರಿನ ಬಗ್ಗೆ ಗಮನ ಹರಿಸಿ ಹೆಚ್ಚುವರಿ ಠಾಣೆ ಮಂಜೂರಿಗೆ ಕ್ರಮ ಕೈಗೊಳ್ಳಲಿ.
 ಅಶೋಕಕುಮಾರ ಜೈನ, ಕರವೇ ಜಿಲ್ಲಾಧ್ಯಕ
 
ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಒಂದು ವಿನ್ಯಾಸ ರಚಿಸಿ ಅಂತಿಮ ಒಪ್ಪಿಗೆಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ಇನ್ನೂ ಸಮ್ಮತಿ ಸಿಕ್ಕಿಲ್ಲ. ಆದರೆ, ಈಗ ಸಾಧ್ಯವಾದಷ್ಟು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ. ಆದರೆ, ಫುಟ್‌ಪಾತ್‌ಗಳ ಮೇಲೆ ವಾಹನ ನಿಲ್ಲಿಸದಂತೆ, ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿ ದಂಡವನ್ನೂ ಹಾಕಲಾಗಿದೆ. ಅದರ ಜತೆಗೆ ಅವರಿಗೆ ಪರ್ಯಾಯ ಸ್ಥಳಾವಕಾಶ ಕಲ್ಪಿಸುವಂತೆ ನಗರಸಭೆ, ಜಿಲ್ಲಾಡಳಿತಕ್ಕೆ ಮನವಿ ಕೂಡ ಮಾಡಿದ್ದೇವೆ. ವಿಧಿಇಲ್ಲದೇ ದಂಡ ಹಾಕಿ ಸುಮ್ಮನಾಗುತ್ತೇವೆ. ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದ ಎಲ್ಲ ತಪ್ಪುಗಳಿಗೂ ಪೊಲೀಸರನ್ನು ದೂಷಿಸುವುದು ಸರಿಯಲ್ಲ. 
 ಸಿದ್ಧರಾಮೇಶ್ವರ ಗಡೇದ, ಟ್ರಾಫಿಕ್ ಪಿಎಸ್‌ಐ

„ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.