CONNECT WITH US  

ವಾರ್ಡನ್‌-ಪ್ರಾಂಶುಪಾಲರಿಗೆ ತರಾಟೆ

ಸಿಂಧನೂರು: ನಗರದಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳಿಗೆ ಬುಧವಾರ ರಾತ್ರಿ ನ್ಯಾಯಾಧೀಶರು ದಿಢೀರ್‌ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ವಾರ್ಡನ್‌ ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಸರ್ಕಾರದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿವರ್ಷ ಸಾಕಷ್ಟು ಅನುದಾನ ಬಂದರೂ ಸಹ ವಿದ್ಯಾರ್ಥಿಗಳಿಗೆ ಸರಿಯಾಗಿ ಸೌಲಭ್ಯ ತಲುಪುತ್ತಿಲ್ಲ. ಈ ಕುರಿತು ವಸತಿ ನಿಲಯಗಳ ಸ್ಥಿತಿ-ಗತಿ ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ವರದಿ ನೀಡಲು ಹೈಕೋರ್ಟ್‌ ನಿರ್ದೇಶನ ನೀಡಿದ್ದರಿಂದ ಬುಧವಾರ ರಾತ್ರಿ ತಾಲೂಕು ನ್ಯಾಯಾಧೀಶರ ತಂಡ ವಸತಿ
ನಿಲಯಗಳಿಗೆ ದಿಢೀರ್‌ ಭೇಟಿ ನೀಡಿತ್ತು.

ನ್ಯಾಯಾಧೀಶರಾದ ರವಿಕುಮಾರ ಕೆ, ಮಹಾಂತೇಶ ಭೂಸಗೋಳ ನೇತೃತ್ವದಲ್ಲಿ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದ ತಂಡ ಅಲ್ಲಿನ ಅವ್ಯವಸ್ಥೆ ವೀಕ್ಷಿಸಿ ವಿದ್ಯಾರ್ಥಿಗಳ ಅಳಲನ್ನು ಆಲಿಸಿತು. ಅವ್ಯವಸ್ಥೆಗೆ
ತೀವ್ರ ಅಸಮಾಧಾನಗೊಂಡು ಮೇಲ್ವಿಚಾರಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಮಕ್ಕಳಿಗೆ ಸರಿಯಾಗಿ ಸೌಲಭ್ಯ ಒದಗಿಸುವಂತೆ ಎಚ್ಚರಿಸಿದರು.

ಹಿಂದುಳಿದ ವರ್ಗಗಳ ಹಾಗೂ ಅಂಬೇಡ್ಕರ್‌ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರ ವಸತಿ ನಿಲಯಗಳಿಗೆ ಭೇಟಿ ನೀಡಿದ ನ್ಯಾಯಾಧೀಸರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ
ನೀಡಿದರು. 

ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಅರ್ಧ ಗಂಟೆಯಾದರೂ ಸಹ ವಾರ್ಡನ್‌ ಹಾಗೂ ಪ್ರಾಂಶುಪಾಲರು ಸ್ಥಳಕ್ಕೆ ಬಾರದ್ದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು ತಡವಾಗಿ ಬಂದ ಪ್ರಾಂಶುಪಾಲ ಸಂಗಮೇಶ ಕೊಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಕ್ಕಳಿಗೆ ಏನೇನ್‌ ಕೊಡುತ್ತಿಯಾ ಹೇಳಿ ಎಂದಾಗ ವಿವರವಾಗಿ ಹೇಳದೇ ಎಲ್ಲ ಕೊಡುವುದಾಗಿ ಹೇಳಿ ಉದ್ಧಟತನ ಪ್ರದರ್ಶಿಸಿದರು. ಸರಿಯಾಗಿ ಹೇಳದಿದ್ದರೆ ನಿನ್ನನ್ನು ಮನೆಗೆ ಕಳುಹಿಸುವುದಾಗಿ ನ್ಯಾಯಾಧೀಸರು ಎಚ್ಚರಿಸಿದರು.
 
ವಸತಿ ನಿಲಯಕ್ಕೆ 3 ಲಕ್ಷ ರೂ. ಖರ್ಚು ಮಾಡುತ್ತಿದ್ದು 24 ಕಾಯಿಪಲ್ಯ ವಿವರ ತೊರಿಸಿದ್ದು, ಅಡುಗೆ ಕೋಣೆಯಲ್ಲಿ ಯಾವುದೇ ಕಾಯಿಪಲ್ಯಗಳಿಲ್ಲ. ನೀರಿನಂತಹ ಸಾರು ಹಾಗೂ ಹಸಿ-ಬಿಸಿ ಅನ್ನ ನೀಡುತ್ತಿರಿ ಎಂದು ವಿದ್ಯಾರ್ಥಿಗಳ ದೂರು ಇದೆ ಎಂದಾಗ ಮುಂದಿನ ದಿನಗಳಲ್ಲಿ ಎಲ್ಲ ಸರಿಪಡಿಸಿಕೊಂಡು ಹೋಗುವುದಾಗಿ ಹೇಳಿದರು.

ಊಟ, ಬಟ್ಟೆ, ಸೋಪು ಬಾಕ್ಸ್‌ ಬಿಟ್ಟರೆ ಐದು ವರ್ಷಗಳಿಂದ ಯಾವುದೇ ರೀತಿಯ ಸೌಲತ್ತುಗಳನ್ನು ಕೊಟ್ಟಿಲ್ಲ ಯಾಕೆ ಎಂದಾಗ ಮುಂದಿನ ದಿನಗಳಲ್ಲಿ ಕೊಡುವುದಾಗಿ ಅಸಂಬದ್ಧವಾಗಿ ಮಾತನಾಡಿದ ಪ್ರಾಂಶುಪಾಲ ಸಂಗಮೇಶ ಕೊಳ್ಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ಇತರರ ಮುಂದೆ ಹೇಳಿದಂತೆ ನಮ್ಮ ಮುಂದೆ ಸುಳ್ಳು ಹೇಳಿದರೆ ನಿನ್ನ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಸರ್ಕಾರಕ್ಕೆ ವರದಿ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸರ್ಕಾರದ ಸಂಬಳ ತಿಂದು ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲವೇ, ಇನ್ನೂ ಮುಂದೆ ಈ ರೀತಿಯಾಗದಂತೆ ಮಕ್ಕಳಿಗೆ ಸರ್ಕಾರದ ಸೌಲತ್ತುಗಳನ್ನು ಕೊಡಿ ಎಂದು ಎಚ್ಚರಿಕೆ ನೀಡಿದರು.

ವಸತಿ ನಿಲಯಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸೊಳ್ಳೆ ಪರದೆ, ಶುದ್ದ ಕುಡಿಯುವ ನೀರು-ಗುಣಮಟ್ಟದ ಆಹಾರ ಸೇರಿದಂತೆ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಸೂಕ್ತ ಕ್ರಮ
ಜರುಗಿಸುವುದಾಗಿ ವಸತಿ ನಿಲಯಗಳ ವಾರ್ಡನ್‌ಗಳು ಹಾಗೂ ಪ್ರಾಂಶುಪಾಲರಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ದೂರು: ಬಾಲಕರ ಮೆಟ್ರಿಕ್‌ ಪೂರ್ವ-ನಂತರ ಅಂಬೇಡ್ಕರ್‌ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಸರ್ಕಾರದ ಸೌಲತ್ತುಗಳನ್ನು ಕೊಡುವಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಯಮ್ಮ ಅವರಿಗೆ ಕೋರಿದರೂ ನೀವು ಹಾಸ್ಟೆಲ್‌ನಲ್ಲಿ ಸತ್ತರೂ ಪರವಾಗಿಲ್ಲ ವಸತಿ ನಿಲಯಕ್ಕೆ ಬರುವುದಿಲ್ಲ. 

ಪದೇಪದೇ ಕಚೇರಿಗೆ ಬಂದರೆ ನಿಮ್ಮ ಮೇಲೆ ದೂರು ದಾಖಲು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ನ್ಯಾಯಾಧೀಶರು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಯಮ್ಮ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೆ

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top