ವಿಂಬಲ್ಡನ್‌: ಜೊಕೋವಿಕ್‌ ಮೂರನೇ ಸುತ್ತಿಗೆ

Team Udayavani, Jul 7, 2017, 3:45 AM IST

Wimbledon-Tennis,-Novak-Djo.jpg

ಲಂಡನ್‌: ವಿಶ್ವದ ಎರಡನೇ ರ್‍ಯಾಂಕಿನ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ನೇರ ಸೆಟ್‌ಗಳ ಜಯ ಸಾಧಿಸಿ ವಿಂಬಲ್ಡನ್‌ ಟೆನಿಸ್‌ ಕೂಟದ ಮೂರನೇ ಸುತ್ತಿಗೇರಿದ್ದಾರೆ. 

ಇನ್ನುಳಿದ ಪಂದ್ಯಗಳಲ್ಲಿ ಗಾಯೆಲ್‌ ಮೊನ್‌ಫಿಲ್ಸ್‌, ಗ್ರೆಗರಿ ದಿಮಿತ್ರೋವ್‌ ಮತ್ತು ಸ್ವೆತ್ಲಾನಾ ಕುಜ್ನೆತ್ಸೋವಾ ತಮ್ಮ ಎದುರಾಳಿಯೆದುರು ಜಯ ಸಾಧಿಸಿ ಮುನ್ನಡೆದಿದ್ದಾರೆ.ಉತ್ತಮ ಫಾರ್ಮ್ನಲ್ಲಿರುವ ಜೊಕೋವಿಕ್‌ ಜೆಕ್‌ ಗಣರಾಜ್ಯದ ಆ್ಯಡಂ ಪಾವ್ಲಾ ಸೆಕ್‌ ಅವರನ್ನು ಒಂದು ತಾಸು 33 ನಿಮಿಷಗಳ ಹೋರಾಟದಲ್ಲಿ 6-2, 6-2, 6-1 ಸೆಟ್‌ಗಳಿಂದ ಸುಲಭವಾಗಿ ಮಣಿಸಿ ಮೂರನೇ ಸುತ್ತಿಗೇರಿದರು.

ಇನ್ನೊಂದು ಪಂದ್ಯದಲ್ಲಿ 15ನೇ ಶ್ರೇಯಾಂಕದ ಸ್ವಿಸ್‌ನ ಗಾಯೆಲ್‌ ಮೊನ್‌ಫಿಲ್ಸ್‌ ಅವರು ಬ್ರಿಟನ್‌ನ ಎದುರಾಳಿ ಕೈಲ ಎಡ್ಮಂಡ್‌ ಅವರನ್ನು 7-6 (7-1), 6-4, 6-4 ಸೆಟ್‌ಗಳಿಂದ ಸದೆಬಡಿದರು. ಮೊದಲ ಸೆಟ್‌ನಲ್ಲಿ ಮಾತ್ರ ಎಡ್ಮಂಡ್‌ ತೀವ್ರ ಪೈಪೋಟಿ ನೀಡಿದ್ದರು.

ಬಲ್ಗೇರಿಯದ 13ನೇ ಶ್ರೇಯಾಂಕದ ಗ್ರೆಗರಿ ದಿಮಿತ್ರೋವ್‌ ಅವರು ಮಾರ್ಕೋಸ್‌ ಬಗ್ಧಾಟಿಸ್‌ ಅವರನ್ನು 6-3, 6-2, 6-1 ಸೆಟ್‌ಗಳಿಂದ ಉರುಳಿಸಿದರು. ಈ ಹೋರಾಟ ಒಂದು ತಾಸು ಮತ್ತು 43 ನಿಮಿಷಗಳವರೆಗೆ ಸಾಗಿತ್ತು. ರಶ್ಯದ 27ನೇ ಶ್ರೇಯಾಂಕದ ಮಿಸಾc ಜ್ವರೇವ್‌ ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿದರು. ರಶ್ಯದವರೇ ಆದ ಮೈಕಲ್‌ ಕುಕುಸ್ಕಿನ್‌ ಅವರನ್ನು 6-1, 6-2, 2-6, 3-6, 6-4 ಸೆಟ್‌ಗಳಿಂದ ಕೆಡಹಿದ ಜ್ವರೇವ್‌ ಮೂರನೇ ಸುತ್ತಿಗೇರಿದರು. ಈ ಹೋರಾಟ ಮೂರು ತಾಸು ಮತ್ತು 5 ನಿಮಿಷಗಳವರೆಗೆ ಸಾಗಿತ್ತು.

ಇನ್ನೊಂದು ಐದು ಸೆಟ್‌ಗಳ ಕಾದಾಟದಲ್ಲಿ ಅಮೆರಿಕದ 23ನೇ ಶ್ರೇಯಾಂಕದ ಜಾನ್‌ ಇಸ್ನರ್‌ ಅವರು ಇಸ್ರೇಲ್‌ನ ದುದಿ ಸೆಲ ಅವರಿಗೆ 7-6 (7-5), 6-7 (5-7), 7-5, 6-7 (5-7), 3-6 ಸೆಟ್‌ಗಳಿಂದ ಶರಣಾಗಿ ಹೊರಬಿದ್ದರು. ಸುಮಾರು 4 ತಾಸಗಳವರೆಗೆ ಹೋರಾಡಿದ ಇಸ್ನರ್‌ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರು.

ವನಿತೆಯರ ಸಿಂಗಲ್ಸ್‌ ಪಂದ್ಯದಲ್ಲಿ 7ನೇ ಶ್ರೇಯಾಂಕದ ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ತನ್ನ ದೇಶದವರೇ ಆದ ಏಕ್ತರೀನಾ ಮಕರೋವಾ ಅವರನ್ನು 6-0, 7-5 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು. ಇನ್ನೊಂದು ಪಂದ್ಯದಲ್ಲಿ ಕತಾರ್‌ನ ಪೊಲೋನಾ ಹೆರ್ಕಾಕ್‌ ಅವರು 6-7 (2-7), 6-2, 6-2 ಸೆಟ್‌ಗಳಿಂದ ಅಮೆರಿಕದ ವಾರ್ವರಾ ಲೆಪೆಚೆಂಕೊ ಅವರನ್ನು ಕೆಡಹಿ ಮೂರನೇ ಸುತ್ತಿಗೇರಿದರು.

ಬುಧವಾರ ರಾತ್ರಿ ನಡೆದ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಆ್ಯಂಡಿ ಮರ್ರೆ, ರಫೆಲ್‌ ನಡಾಲ್‌, ಕೆಯಿ ನಿಶಿಕೋರಿ, ಮರಿನ್‌ ಸಿಲಿಕ್‌, ಸೋಂಗ ತಮ್ಮ ಎದುರಾಳಿಯೆದುರು ಜಯ ಸಾಧಿಸಿ ಮುನ್ನಡೆದಿದ್ದಾರೆ. ವನಿತೆಯರಲ್ಲಿ ಸಿಮೋನಾ ಹಾಲೆಪ್‌, ವೀನಸ್‌ ವಿಲಿಯಮ್ಸ್‌, ಜೋಹಾನಾ ಕೊಂಟಾ ಜಯ ಸಾಧಿಸಿದ್ದರೆ ಪೆಟ್ರಾ ಕ್ವಿಟೋವಾ ಸೋಲನ್ನು ಕಂಡಿದ್ದಾರೆ. ಜೆಕ್‌ ಗಣರಾಜ್ಯದ ಕ್ವಿಟೋವಾ 3-6, 6-1, 2-6 ಸೆಟ್‌ಗಳಿಂದ ಅಮೆರಿಕದ ಮ್ಯಾಡಿಸನ್‌ ಬ್ರೆಂಗಲ್‌ ಅವರಿಗೆ ಶರಣಾದರು.

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.