CONNECT WITH US  

12 ವರ್ಷದ ಬಳಿಕ ಕ್ಯಾಸ್ಪರೋವ್‌ ಮತ್ತೆ ಚೆಸ್‌ ಕಣಕ್ಕೆ

ಮಾಸ್ಕೋ: ಅಜರ್‌ಬೈಜನ್‌ನ ಖ್ಯಾತ ಚೆಸ್‌ ತಾರೆ ಮಾಜಿ ವಿಶ್ವ ಚಾಂಪಿಯನ್‌ ಗ್ಯಾರಿ ಕ್ಯಾಸ್ಪರೋವ್‌ ನಿವೃತ್ತಿ ನೀಡಿದ 12 ವರ್ಷದ ಬಳಿಕ ಮತ್ತೆ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. 

ಇವರಿಗೆ ಅಮೆರಿಕದಲ್ಲಿ ನಡೆಯಲಿರುವ ಯುಎಸ್‌ ಕೂಟದಲ್ಲಿ ಪಾಲ್ಗೊಳ್ಳಲು ವೈಲ್ಡ್‌ ಕಾರ್ಡ್‌ ಪ್ರವೇಶ ನೀಡಲಾಗಿದೆ. ಈ ವಿಷಯವನ್ನು ಕೂಟದ ಸಂಘಟಕರು ಖಚಿತಪಡಿಸಿದ್ದಾರೆ. ಜತೆಗೆ ಕೂಟದಲ್ಲಿ ತಾನು ಪಾಲ್ಗೊಳ್ಳುತ್ತಿರುವುದಾಗಿ ಗ್ಯಾರಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. 

ಇವರು ಮೊದಲ ಪಂದ್ಯದಲ್ಲಿ ವಿಶ್ವ ನಂಬರ್‌ ಒನ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್ಸನ್‌ ಅವರನ್ನು ಎದುರಿಸಲಿದ್ದಾರೆ. ಹಿಕರು ನಕಾರು ಅವರ ವಿರುದ್ಧವೂ ಸೆಣಸಲಿದ್ದಾರೆ. 15 ವರ್ಷ ಗ್ಯಾರಿ ಚೆಸ್‌ ಲೋಕದಲ್ಲಿ ಮಿಂಚು ಹರಿಸಿದ್ದರು. 1985ರಿಂದ 93ರವರೆಗೆ ವಿಶ್ವ ಚಾಂಪಿಯನ್‌ ಆಗಿ ಮೆರೆದಿದ್ದರು. ಅಷ್ಟೇ ಅಲ್ಲ 22 ವರ್ಷದಲ್ಲೇ ವಿಶ್ವ ಚಾಂಪಿಯನ್‌ ಆದ ಉದಯೋನ್ಮುಖ ಚೆಸ್‌ ತಾರೆ ಎನ್ನುವುದು ವಿಶೇಶ.

Trending videos

Back to Top