CONNECT WITH US  

Women’s World Cup Final: ಭಾರತ ಗೆಲುವಿಗೆ 229ರನ್ ಗುರಿ

ಲಂಡನ್‌ : ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ನ ರೋಚಕ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಗೆಲುವಿಗೆ 229 ರನ್‌ಗಳ ಗುರಿ ನೀಡಿದೆ. 10 ಓವರ್‌ಗಳವರೆಗೆ ರಕ್ಷಣಾತ್ಮಕ ಆಟವಾಡಿದ ಇಂಗ್ಲೆಂಡ್‌ 11 ನೇ  ರಾಜೇಶ್ವರಿ ಗಾಯಕ್‌ವಾಡ್‌ ಎಸೆದ 11 ನೇ ಓವರ್‌ನಲ್ಲಿ 24 ರನ್‌ಗಳಿಸಿದ್ದ ವಿನಿಫೀಲ್ಡ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಭಾರತ ಪರ ಜೂಲನ್‌ ಗೋಸ್ವಾಮಿ 3 ವಿಕೆಟ್‌ ಪಡೆದು ಮಿಂಚಿದರೆ ಪೂನಂ ಯಾದವ್‌  2 ರಾಜೇಶ್ವರಿ ಗಾಯಕ್ವಾಡ್‌ 1 ವಿಕೆಟ್‌ ಪಡೆದರು. ಇಂಗ್ಲೆಂಡ್‌ ಅಂತಿಮವಾಗಿ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 228ರನ್‌ಗಳಿಸಿದೆ. 6 ಬಾರಿಯ ಚಾಂಪಿಯನ್‌ ಆಸಿಸ್‌ ಮಣಿಸಿ ಫೈನಲ್‌ಗೇರಿದ ಭಾರತ ಮೊದಲ ಬಾರಿ ಕಪ್‌ ಗೆಲ್ಲುವ ಛಲದಲ್ಲಿದ್ದರೆ, ಇಂಗ್ಲೆಂಡ್‌ 4 ನೇ ಬಾರಿ ಕಪ್‌ ಗೆಲ್ಲುವ ತವಕದಲ್ಲಿದೆ. 

ಕನ್ನಡತಿಯರಿಗೆ ಶುಭಾಶಯಗಳ ಮಹಾಪೂರ 
ಮಿಥಾಲಿ ರಾಜ್‌ ನಾಯಕತ್ವದ ಆಡುವ 11ರ ಬಳಗದಲ್ಲಿ ಇಬ್ಬರು ಕನ್ನಡತಿಯರಿದ್ದು ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮತ್ತು  ರಾಜೇಶ್ವರಿ ಗಾಯಕ್ವಾಡ್‌, ಉತ್ತಮ ಫಾರ್ಮ್ನಲ್ಲಿದ್ದಾರೆ. ಇಬ್ಬರಿಗೂ ನಾಡಿನಾದ್ಯಂತ ಕ್ರಿಕೆಟ್‌ ಅಭಿಮಾನಿಗಳು ಶುಭಕೋರಿದ್ದಾರೆ. 

ಸ್ಕೋರ್‌ಪಟ್ಟಿ
ಇಂಗ್ಲೆಂಡ್‌

ಲಾರೆನ್‌ ವಿನ್‌ಫೀಲ್ಡ್‌    ಬಿ ರಾಜೇಶ್ವರಿ    24
ಟಾಮಿ ಬೇಮಾಂಟ್‌    ಸಿ ಜೂಲನ್‌ ಬಿ ಪೂನಂ    23
ಸಾರಾ ಟಯ್ಲರ್‌    ಸಿ ಸುಷ್ಮಾ ಬಿ ಜೂಲನ್‌    45
ಹೀತರ್‌ ನೈಟ್‌    ಎಲ್‌ಬಿಡಬ್ಲ್ಯು    ಪೂನಂ    1
ನಥಾಲಿ ಶಿವರ್‌    ಎಲ್‌ಬಿಡಬ್ಲ್ಯು ಜೂಲನ್‌    51
ಫ್ರಾನ್‌ ವಿಲ್ಸನ್‌    ಎಲ್‌ಬಿಡಬ್ಲ್ಯು ಜೂಲನ್‌    0
ಕ್ಯಾಥರಿನ್‌ ಬ್ರಂಟ್‌    ರನೌಟ್‌    34
ಜೆನ್ನಿ ಗನ್‌    ಔಟಾಗದೆ    25
ಲಾರಾ ಮಾರ್ಷ್‌    ಔಟಾಗದೆ    14

ಇತರ        11
ಒಟ್ಟು  (50 ಓವರ್‌ಗಳಲ್ಲಿ 7 ವಿಕೆಟಿಗೆ)        228
ವಿಕೆಟ್‌ ಪತನ: 1-47, 2-60, 3-63, 4-146, 5-146, 6-164, 7-196.

ಬೌಲಿಂಗ್‌:
ಜೂಲನ್‌ ಗೋಸ್ವಾಮಿ        10-3-23-3
ಶಿಖಾ ಪಾಂಡೆ        7-0-53-0
ರಾಜೇಶ್ವರಿ ಗಾಯಕ್ವಾಡ್‌        10-1-49-1
ದೀಪ್ತಿ ಶರ್ಮ        9-0-39-0
ಪೂನಂ ಯಾದವ್‌        10-0-36-2
ಹರ್ಮನ್‌ಪ್ರೀತ್‌ ಕೌರ್‌        4-0-25-0

Trending videos

Back to Top