ಕೊಹ್ಲಿ ನಿಜಕ್ಕೂ ಅತ್ಯದ್ಭುತ ಆಟಗಾರ: ಸೌರವ್ ಗಂಗೂಲಿ
Team Udayavani, Feb 22, 2018, 6:05 AM IST
ಕೋಲ್ಕತಾ: ಭಾರತ ಕ್ರಿಕೆಟ್ ಮಾಜಿ ನಾಯಕ ಸೌರವ್ ಗಂಗೂಲಿ ಹಾಲಿ ನಾಯಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ನನ್ನ ಆಟವೂ ಸೇರಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಅವರ ಆಟವನ್ನು ನೋಡಿದ್ದೇನೆ. ನಮ್ಮೆಲ್ಲರ ಜೀವನದಲ್ಲಿ ಅತ್ಯುತ್ತಮ ಗಳಿಗೆಗಳಿದ್ದವು. ಆದರೆ ವಿರಾಟ್ ಕೊಹ್ಲಿ ಪ್ರಕರಣ ಹಾಗಿಲ್ಲ. ಅವರು ನಿಜಕ್ಕೂ ಅತ್ಯದ್ಭುತ ಆಟಗಾರ ಎಂದು ಹೇಳಿದ್ದಾರೆ.
ಧೋನಿ ನಾಯಕತ್ವದ ಅವಧಿ ನೋಡಿದ್ದೇನೆ, ದ್ರಾವಿಡ್ ನಾಯಕತ್ವವನ್ನೂ ನೋಡಿದ್ದೇನೆ. ನಾಯಕತ್ವದ ಜೊತೆಗೆ ಬ್ಯಾಟಿಂಗ್ನಲ್ಲೂ ಅದ್ಭುತ ಯಶಸ್ಸು ಕಂಡಿದ್ದು ಕೊಹ್ಲಿ ಮಾತ್ರ. ಅವರ ನಾಯಕತ್ವದ ನೈಜ ಸಾಮರ್ಥ್ಯ ಆಸ್ಟ್ರೇಲಿಯಾದಲ್ಲಿ ಹೊರಬರಲಿದೆ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.