ಬ್ಯಾಡ್ಮಿಂಟನ್ ಸಿಂಗಲ್ಸ್: ಸಿಂಧು, ಸೈನಾ, ಶ್ರೀಕಾಂತ್ ಮುನ್ನಡೆ
Team Udayavani, Apr 12, 2018, 7:00 AM IST
ಗೋಲ್ಡ್ಕೋಸ್ಟ್: ಕಾಲು ನೋವಿನಿಂದ ಸುಧಾರಿಸಿಕೊಂಡಿರುವ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಸಹಿತ ಸಿಂಗಲ್ಸ್ ಆಟ ಗಾರರೆಲ್ಲ ಕಾಮನ್ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್ ಪ್ರಿ-ಕ್ವಾರ್ಟರ್ ಫೈನಲ್ ಸ್ಪರ್ಧೆಗೆ ಅಣಿಯಾಗಿದ್ದಾರೆ. ಅಭ್ಯಾಸದ ವೇಳೆ ಪಾದದ ನೋವಿಗೆ ತುತ್ತಾಗಿದ್ದ ಕಾರಣ ಚಿನ್ನ ವಿಜೇತ ತಂಡ ವಿಭಾಗದಿಂದ ದೂರ ಉಳಿದಿದ್ದ ಸಿಂಧು, ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಫಿಜಿಯ ಆ್ಯಂಡ್ರ ವಿಟೈಡ್ ಅವರನ್ನು 21-6, 21-3 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದರು. ಇಬ್ಬರ ನಡುವೆ ಬರೀ 18 ನಿಮಿಷಗಳ ಸೆಣಸಾಟ ನಡೆಯಿತು.
ಆ ಬಳಿಕ ಪ್ರಯಿಕ್ರಿಯಿಸಿದ ಸಿಂಧು, “ಇವತ್ತಿನ ಪಂದ್ಯ ಬಹಳ ಸುಲಭವಾಗಿತ್ತು. ನಾಳೆಯೂ ಇದೇ ಗೆಲುವು ಮುಂದುವರೆಯುವುದಾಗಿ ಭಾವಿಸುತ್ತೇನೆ. ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ; ಸಂಪೂರ್ಣವಾಗಿ ಸುಧಾರಿಸಿಕೊಂಡಿದ್ದೇನೆ. ಈ ಸಂದರ್ಭ ನಿಜಕ್ಕೂ ರೋಮಾಂಚನಕಾರಿಯಾಗಿದೆ’ ಎಂದರು. ತಂಡ ಸ್ಪರ್ಧೆಯಲ್ಲಿ ಪಾಲ್ಗೊಂಡು ದಣಿದಿದ್ದರ ಹೊರತಾಗಿಯೂ ಎರಡನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಅವರೂ 18 ನಿಮಿಷಗಳಲ್ಲಿ ದಕ್ಷಿಣ ಆಫ್ರಿಕಾದ ಎಲ್ಸಿ ಡಿ ವಿಲಿಯರ್ ಅವರನ್ನು 21-3, 21-1 ಅಂತರದಿಂದ ಸುಲಭವಾಗಿ ಹಿಮ್ಮಟ್ಟಿಸಿದರು. ಮತ್ತೂಬ್ಬ ಆಟಗಾರ್ತಿ ಋತ್ವಿಕಾ ಕೂಡ 18 ನಿಮಿಷಗಳಲ್ಲಿ ಎದು ರಾಳಿಯನ್ನು ಸೋಲಿಸಿದ್ದೂ ಒಂದು ರೀತಿಯ ಅಚ್ಚರಿಗೆ ಕಾರಣವಾಯಿತು. ಅವರು ಘಾನಾ ಆಟಗಾರ್ತಿ ಗ್ರೇಸ್ ಅತಿಪಾಕಾ ವಿರುದ್ಧ 21-5, 21-7 ಅಂತರದ ಗೆಲುವು ದಾಖಲಿಸಿದರು.
ಪುರುಷರ ವಿಭಾಗದಲ್ಲೂ ಜಯದ ಓಟ ಮುಂದುವರಿಯಿತು. ಭಾರತದ ಭರವಸೆಯ ಆಟಗಾರ ಕೆ. ಶ್ರೀಕಾಂತ್ ಅವರು ಮಾರಿಷಸ್ನ ಆತೀಶ್ ಲುಬಾಹ್ ವಿರುದ್ಧ 21-13, 21-10 ಅಂತರದ ಜಯ ಸಾಧಿಸಿದರು. ಭಾರತದ ಸಿಂಗಲ್ಸ್ ಆಟಗಾರರ ಈ ಅಮೋಘ ಜಯವನ್ನು ಗಮನಿಸಿದರೆ ವೈಯಕ್ತಿಕ ವಿಭಾಗದ ಮುಂದಿನ ಸ್ಪರ್ಧೆಗಳಲ್ಲೂ ಗೆಲುವು ದಾಖಲಿಸಿ ಪದಕ ಪಟ್ಟಿಯನ್ನು ಬೆಳೆಸುವ ಎಲ್ಲ ನಿರೀಕ್ಷೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…