ವಿಶ್ವದಾಖಲೆಯ ಪಂದ್ಯ: ಇಂಗ್ಲೆಂಡ್ ಜಯಭೇರಿ
Team Udayavani, Jun 21, 2018, 6:15 AM IST
ನಾಟಿಂಗಂ: ಏಕದಿನ ಇತಿಹಾಸದ ಸರ್ವಾಧಿಕ ಮೊತ್ತ ಪೇರಿಸಿ ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್, ಪ್ರವಾಸಿ ಆಸ್ಟ್ರೇಲಿಯದೆದುರಿನ ನಾಟಿಂಗಂ ಪಂದ್ಯವನ್ನು 242 ರನ್ನುಗಳ ಭಾರೀ ಅಂತರದಿಂದ ಜಯಿಸಿದೆ. ಇದು ವಿಶ್ವಕಪ್ ಚಾಂಪಿಯನ್ ಆಸೀಸ್ಗೆ ಎದುರಾದ ಅತೀ ದೊಡ್ಡ ಸೋಲಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಕಾಂಗರೂ ದಾಳಿಯನ್ನು ಪುಡಿಗುಟ್ಟಿ 6 ವಿಕೆಟಿಗೆ 481 ರನ್ ರಾಶಿ ಹಾಕಿತ್ತು. ಇದು 4,011 ಪಂದ್ಯಗಳ ಏಕದಿನ ಚರಿತ್ರೆಯಲ್ಲಿ ತಂಡವೊಂದು ಪೇರಿಸಿದ ಅತೀ ದೊಡ್ಡ ಮೊತ್ತವಾಗಿತ್ತು. ಇಂಗ್ಲೆಂಡಿನ ಬೃಹತ್ ಮೊತ್ತಕ್ಕೆ ಕಾರಣವಾದದ್ದು ಜಾನಿ ಬೇರ್ಸ್ಟೊ (139), ಅಲೆಕ್ಸ್ ಹೇಲ್ಸ್ (147) ಅವರ ಅಮೋಘ ಶತಕ; ಜಾಸನ್ ರಾಯ್ (82) ಹಾಗೂ ಇಯಾನ್ ಮಾರ್ಗನ್ (67) ಅವರ ಭರ್ಜರಿ ಬ್ಯಾಟಿಂಗ್. ರಾಯ್-ಬೇರ್ಸ್ಟೊ ಮೊದಲ ವಿಕೆಟಿಗೆ 19.3 ಓವರ್ಗಳಿಂದ 159 ರನ್, ಬೇರ್ಸ್ಟೊ-ಹೇಲ್ಸ್ ದ್ವಿತೀಯ ವಿಕೆಟಿಗೆ 151 ರನ್ ರಾಶಿ ಹಾಕಿದರು. ಆಂಗ್ಲರ ಬ್ಯಾಟಿಂಗ್ ಸರದಿಯಲ್ಲಿ 41 ಬೌಂಡರಿ ಹಾಗೂ 21 ಸಿಕ್ಸರ್ ಸಿಡಿದವು. ಆಸ್ಟ್ರೇಲಿಯದ ಬ್ಯಾಟಿಂಗ್ ವೇಳೆ ಕೇವಲ ಒಂದು ಅರ್ಧ ಶತಕವಷ್ಟೇ ಕಂಡುಬಂತು. ಆರಂಭಕಾರ ಟ್ರಾÂವಿಸ್ ಹೆಡ್ 51 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-6 ವಿಕೆಟಿಗೆ 481 (ಹೇಲ್ಸ್ 147, ಬೇರ್ಸ್ಟೊ 139, ರಾಯ್ 82, ಮಾರ್ಗನ್ 67, ರಿಚರ್ಡನ್ 92ಕ್ಕೆ 3). ಆಸ್ಟ್ರೇಲಿಯ-37 ಓವರ್ಗಳಲ್ಲಿ 239 (ಹೆಡ್ 51, ಸ್ಟೊಯಿನಿಸ್ 44, ಅಗರ್ 25, ರಶೀದ್ 47ಕ್ಕೆ 4, ಅಲಿ 28ಕ್ಕೆ 3, ವಿಲ್ಲಿ 56ಕ್ಕೆ 2).
ಪಂದ್ಯಶ್ರೇಷ್ಠ: ಜಾಸನ್ ರಾಯ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…