ಬೆನ್ ಸ್ಟೋಕ್ಸ್ ತಪ್ಪು ಮಾಡಿಲ್ಲ, ಎದುರಾಳಿಯೂ ತಪ್ಪಿತಸ್ಥನಲ್ಲ!
Team Udayavani, Aug 16, 2018, 6:00 AM IST
ಲಂಡನ್: ನೈಟ್ ಬಾರ್ ಹೊಡೆದಾಟ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ನಿರ್ದೋಷಿಯೆಂದು ಸಾಬೀತಾಗಿದೆ. ಇದರಿಂದ ಅವರನ್ನು ಭಾರತ ವಿರುದ್ಧದ 3ನೇ ಟೆಸ್ಟ್ಗೆ ಆಯ್ಕೆ ಮಾಡಲಾಗಿದೆ. ವಿಚಿತ್ರವೆಂದರೆ, ಬೆನ್ ಸ್ಟೋಕ್ಸ್ ಅಪರಾಧಿಯಲ್ಲ, ಅವರ ವಿರುದ್ಧ ದೂರು ದಾಖಲಿಸಿದ್ದ ರ್ಯಾನ್ ಅಲಿ, ರ್ಯಾನ್ ಹೇಲ್ ಕೂಡ ತಪ್ಪಿತಸ್ಥರಲ್ಲವೆಂದು ಬ್ರಿಸ್ಟಲ್ ಕ್ರೌನ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಇದು ಹೇಗೆಂದು ಮಾತ್ರ ಯಾರಿಗೂ ಅರ್ಥವಾಗಿಲ್ಲ!
7 ದಿನಗಳ ವಿಚಾರಣೆ ನಡೆಸಿದ ನ್ಯಾಯಾಲಯ ಸ್ಟೋಕ್ಸ್ ವಿರುದ್ಧ ಪ್ರಕರಣ ಹಿಂತೆಗೆದುಕೊಳ್ಳಲು ಒಪ್ಪಲಿಲ್ಲ. ಹಾಗೆಯೇ ತಪ್ಪಿತಸ್ಥರೆಂದು ಘೋಷಿಸಲೂ ಒಪ್ಪಲಿಲ್ಲ. ಕಡೆಗೂ ವಿಚಾರಣೆಯ ಅನಂತರ ಸ್ಟೋಕ್ಸ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲವೆಂದು ನ್ಯಾಯಾಲಯ ಹೇಳಿತು. ಆದರೆ ಅವರ ವಿರುದ್ಧ ನಿಂತಿದ್ದ ರ್ಯಾನ್ ಅಲಿಯನ್ನೂ ನಿರಪರಾಧಿಯೆಂದು ಬಿಡುಗಡೆ ಮಾಡಿತು! ಈ ವಿಚಿತ್ರ ಎಲ್ಲರನ್ನೂ ತಬ್ಬಿಬ್ಟಾಗಿಸಿದರೆ, ರ್ಯಾನ್ ಅಲಿ ಪತ್ನಿ ಮಾತ್ರ ಅತ್ತರು. ನ್ಯಾಯಾಲಯದ ತೀರ್ಪು ನೋಡಿದರೆ ಇಬ್ಬರೂ ವ್ಯಕ್ತಿಗಳು ಕುಡಿತದ ಅಮಲಿನಲ್ಲಿ ಪರಸ್ಪರ ಜಗಳ ಮಾಡಿಕೊಂಡಿರುವಂತೆ ಕಾಣುತ್ತಿದೆ. ಆದ್ದರಿಂದಲೇ ಇಬ್ಬರನ್ನೂ ಬಿಡುಗಡೆ ಮಾಡುವ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ