CONNECT WITH US  

ಪುರುಷರ 800 ಮೀ: ಮಂಜಿತ್‌ ಸಿಂಗ್‌ಗೆ ಚಿನ್ನ, ಜಾನ್‌ಸನ್‌ಗೆ ಬೆಳ್ಳಿ

ಜಕಾರ್ತ : ಇಲ್ಲೀಗ ಸಾಗುತ್ತಿರುವ 2018ರ ಏಶ್ಯನ್‌ ಗೇಮ್ಸ್‌ನ ಇಂದಿನ ಹತ್ತನೇ ದಿನ ಭಾರತದ ಮಂಜಿತ್‌ ಸಿಂಗ್‌ ಅವರ ಪುರುಷರ 800 ಮೀಟರ್‌ ನಲ್ಲಿ ದೇಶಕ್ಕೆ ಚಿನ್ನವನ್ನು ಗೆದ್ದಿದ್ದಾರೆ. 

ಮಂಜಿತ್‌ ಅವರ ಬೆನ್ನ ಹಿಂದೆಯೇ ಇದ್ದ ಭಾರತದ ಮತ್ತೋರ್ವ ಓಟಗಾರ ಜಿನ್‌ಸನ್‌  ಜಾನ್‌ಸನ್‌ ಕೂಡ ಇದೇ ಸ್ಫರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಮಹಿಳೆಯರ 52 ಕೆಜಿ ಕುರಶ್‌ ವರ್ಗದಲ್ಲಿ  ಭಾರತದ ಪಿಂಕಿ ಬಲ್‌ಹಾರಾ ಮತ್ತು ಇದೇ ಕ್ರೀಡೆಯಲ್ಲಿ ಮಲ್ಲಪ್ರಭಾ ಜಾಧವ್‌ ಬೆಳ್ಳಿಯನ್ನು ಗೆದ್ದರು. 

ಇಂದು ಬೆಳಗ್ಗೆ ವನಿತೆಯರ ಬಿಲ್ಗಾರಿಕೆಯಲ್ಲಿ  ಭಾರತದ ಮಹಿಳಾ ತಂಡ ಬೆಳ್ಳಿಯನ್ನು ಗೆದ್ದಿತ್ತು. ಇದೇ ರೀತಿ ಪುರುಷರ  ತಂಡ ಕೂಡ ದಕ್ಷಿಣ ಕೊರಿಯದೆದುರು ಸ್ವಲ್ಪದರಲ್ಲೇ ಚಿನ್ನವನ್ನು ಕಳೆದುಕೊಂಡು ಬೆಳ್ಳಿಗೆ ತೃಪ್ತಿ ಪಡೆಯಬೇಕಾಯಿತು. 


Trending videos

Back to Top