ಶಿಕ್ಷಕರ ದಿನದಂದು ಗುರುವಿಗೆ ಕಾರು ನೀಡಿದ್ದ ವಿರಾಟ್ ಕೊಹ್ಲಿ
Team Udayavani, Sep 6, 2018, 6:00 AM IST
ಮುಂಬಯಿ: ಅಕ್ಷರ ಕಲಿಸಿದ ಗುರುವಿನ ಋಣ ತೀರಿಸುವುದು ಅಷ್ಟು ಸುಲಭದ ಮಾತಲ್ಲ. ಶಿಷ್ಯನ ಸಾಧನೆಯೊಂದೇ ಗುರುವಿಗೆ ನಿಜವಾಗಿ ನೀಡುವ ಬಹುದೊಡ್ಡ ಗುರು ಕಾಣಿಕೆ. ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ಮಾತಿಗೆ ಸರಿಯಾಗಿ ಒಪ್ಪುತ್ತಾರೆ.
ಹೌದು, ಬುಧವಾರ ದೇಶ ದಾದ್ಯಂತ ಎಲ್ಲ ಕಡೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ವೇಳೆ ನಾಲ್ಕು ವರ್ಷದ ಹಿಂದೆ ಕೊಹ್ಲಿಯ ಗುರುಭಕ್ತಿಯ ಕೌತುಕ ಸುದ್ದಿಯೂ ವೈರಲ್ ಆಗಿದೆ. ಕೊಹ್ಲಿ ಸಂಪತ್ತಿನಲ್ಲಿ ಕುಬೇರ, ಪ್ರತಿಭೆಯಲ್ಲಿ ಗಣಿ. ಎಷ್ಟೇ ಸಾಧನೆ ಮಾಡಿದರೂ ತನ್ನ ಗುರುವನ್ನು ಮರೆತಿಲ್ಲ. 2014ರಲ್ಲಿ ಶಿಕ್ಷಕರ ದಿನದಂದು ಕೊಹ್ಲಿ, ತನ್ನ ಸಹೋದರ ವಿಕಾಸ್ ಅವರನ್ನು ಬಾಲ್ಯದ ಕ್ರಿಕೆಟ್ ಕೋಚ್ ರಾಜ್ಕುಮಾರ್ ಶರ್ಮ ನಿವಾಸಕ್ಕೆ ಕಳುಹಿಸಿದ್ದರು. ಇದೇ ವೇಳೆ ಗುರುವಿನೊಂದಿಗೆ ಫೋನ್ನಲ್ಲಿ ಮಾತನಾಡಿ ಶಿಕ್ಷಕರ ದಿನದ ಶುಭಾಶಯವನ್ನು ತಿಳಿಸಿದ್ದರು. ಮಾತ್ರವಲ್ಲ, ಸ್ಕೋಡಾ ರ್ಯಾಪಿಡ್ ಕಾರ್ ಒಂದನ್ನು ಉಡುಗೊರೆಯಾಗಿ ಕೊಹ್ಲಿ ಗುರುವಿಗೆ ನೀಡಿದ್ದರು. ಈ ವಿಚಾರವನ್ನು ವಿರಾಟ್ ಕೊಹ್ಲಿ ಬಗ್ಗೆ ಪತ್ರಕರ್ತ ವಿಜಯ್ ಲೋಕಪಲ್ಲಿ ಬರೆದಿರುವ “ಡ್ರೈವನ್’ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್